ಸ್ಟೇಟಸ್ ಕತೆಗಳು (ಭಾಗ ೧೨೨೩) - ಗಾಳಿಯ ತಪ್ಪೇ?

ಸ್ಟೇಟಸ್ ಕತೆಗಳು (ಭಾಗ ೧೨೨೩) - ಗಾಳಿಯ ತಪ್ಪೇ?

ನಮ್ಮ ಮನೆಯ ಮಕ್ಕಳನ್ನು ಹಾಳು ಮಾಡುವುದಕ್ಕೆ ಸುತ್ತ ಹಲವಾರು ಜನ ಕಾಯುತ್ತಿದ್ದಾರೆ. ನಮ್ಮೂರಿನಲ್ಲಿ ಒಂದಷ್ಟು ಮಧ್ಯದ ಅಂಗಡಿಗಳು ತೆರೆದುಕೊಂಡಿವೆ. ಇನ್ಯಾರೋ ಡ್ರಗ್ಸ್ ಗಾಂಜಾಗಳನ್ನು ಜನರಿಗೆ ಹಂಚುತ್ತಿದ್ದಾರೆ ಅನ್ನುವ ಸುದ್ದಿ ಸಿಕ್ಕಿದೆ, ಸಿಗರೇಟ್ ಗುಟ್ಕಾಗಳು ಮಕ್ಕಳ ಮನಸ್ಸನ್ನು ಕಲುಷಿತಗೊಳಿಸುತ್ತಿವೆ. ಇದು ನನಗೆ ಭಯವಾಗ್ತಾ ಇರೋದು. ಹಾಗಾಗಿ ಇವುಗಳನ್ನ ನಮ್ಮೂರಿಂದ ಓಡಿಸಬೇಕಾಗಿದೆ."

" ನೀನು ಹೇಳುವ ವಿಚಾರ ಸರಿ, ಆದರೆ ನಿನಗೊಂದು ಮಾತು ಹೇಳುತ್ತೇನೆ ಕೇಳು. ಎತ್ತರವಾದ ಮನೆ ಕಟ್ಟಿದಿಯಾ, ದೊಡ್ಡ ದೊಡ್ಡ ಕೆಟಕಿಗಳನ್ನೇ ತೆರೆದಿದ್ದೀಯಾ, ವೇಗವಾಗಿ ಬೀಸುವ ಗಾಳಿ ಮನೆಯೊಳಗೆ ಒಂದಷ್ಟು ಕಸಗಳನ್ನ ತಂದು ಹಾಕ್ತಾ ಇದೆ. ತೊಂದರೆ ಉಂಟಾಗುತ್ತದೆ ಅಂತ ಅಂದ್ರೆ ಅದು ಗಾಳಿಯ ತಪ್ಪಲ್ಲ. ದೊಡ್ಡ ಕಿಟಕಿಯನ್ನ ಮಾಡಿ ಅದಕ್ಕೆ ಸರಿಯಾದ ಬಾಗಿಲನ್ನು ಹಾಕದೆ ಇರುವುದು ನಿನ್ನ ತಪ್ಪು. ಮೊದಲು ನಿನಗೆಷ್ಟು ಅಗತ್ಯವೋ ಅಷ್ಟು ದೊಡ್ಡ ಕಿಟಕಿಯನ್ನು ನೀನು ನಿರ್ಮಾಣ ಮಾಡಿಕೊಳ್ಳಬೇಕು, ಗಟ್ಟಿಯಾದ ಬಾಗಿಲನ್ನು ಹಾಕಿಕೊಳ್ಳಬೇಕು. ಯಾವ ಕ್ಷಣದಲ್ಲಿ ತೆರೆಯಬೇಕು ಯಾವ ಕ್ಷಣದಲ್ಲಿ ಹಾಕಬೇಕು ಎನ್ನುವ ಅರಿವು ನಿನಗಿರಬೇಕು. ಕಿಟಕಿ ನಿನ್ನದು ಮನೆ ನಿನ್ನದು, ಬಾಗಿಲ ಜವಾಬ್ದಾರಿಯು ನಿನ್ನದು .ಗಾಳಿಯನ್ನು ದೂರಿ ಪ್ರಯೋಜನವಿಲ್ಲ. ಅರ್ಥ ಆಯ್ತು ಅಂದುಕೊಳ್ಳುತ್ತೇನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ