ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

ಗಝಲ್ ೧

ಹೂಡು ಬಾಣವ,ಹುಷಾರು ಮನ್ಮಥ ಬಂದಾನು ಸಖಿ

ಕಾಡು ಪ್ರೀತಿಯ ಸವಿಗೆ, ಬಳಿಯೇ ನಿಂದಾನು ಸಖಿ

 

ಸೇಡು,ಭ್ರಮೆಯ ಕೊನೆಗೆ ಸಾವೇ ಎರಗಿತು ಯಾಕೆ 

ನಡು ಉಳುಕಿಸಿ,ಹಾಡುವ ಹಾಡಿಗೆ ಬೆಂದಾನು ಸಖಿ 

 

ಕೇಡು ಬರದಿರಲಿ, ಒಲುಮೆ ಉಕ್ಕಿದ ಸಮಯ ಬಂತು 

ಬಾಡದೆ,ಕೈಹಿಡಿದು ನಲುಮೆಯ ಹೀಗೆ ತಂದಾನು ಸಖಿ

 

ತೀಡು ಗಂಧದಂತೆ ಮೈಮನವ,ನಿರ್ಮಲ ಆಗಲಿ ಇಂದೆ

ಬೇಡು ಒಳ್ಳೆಯ ವಿಚಾರವ, ದ್ವೇಷವ  ಕೊಂದಾನು ಸಖಿ 

 

ನಾಡು, ನೋಡು ಎಂದಿಗೂ ಸಲಹಿದೆ ನಮ್ಮನ್ನು ಈಶಾ

ಹೂಡು, ನಲ್ಮೆಯ ಸವಿಯೆ ಪ್ರೀತಿಯ ತಿಂದಾನು ಸಖಿ 

***

ಗಝಲ್ ೨

ಬೆತ್ತಲೆಯಾಗದಿರಿ ಮನಸಿನಲಿ ಗೆಳೆಯರೆ

ಕತ್ತಲೆಯೆನದಿರಿ ನನಸಿನಲಿ ಗೆಳೆಯರೆ

 

ಯೋಚನೆಯೊಡನೆ ಪಯಣವಿಂದು ಬೇಕೆ

ನಡೆದಾಡದಿರಿ ಕನಸಿನಲಿ ಗೆಳೆಯರೆ

 

ಗುಬ್ಬಚ್ಚಿಯೊಡನೆ ವಾಸವದು ಸಾಧ್ಯವೆ

ಕಣ್ಮುಚ್ಚದಿರಿ ತನುವಿನಲಿ ಗೆಳೆಯರೆ

 

ಊಟದೊಡನೆ ಸವಿಯಿಂದು ಸೇರಿತೆ

ತೊರೆಯದಿರಿ ಒಲವಿನಲಿ ಗೆಳೆಯರೆ

 

ಮಾತಿನೊಡನೆ ಹೊಂಗನಸಿರಲಿ ಈಶಾ

ತಡೆಯಾಗದಿರಿ ಬದುಕಿನಲಿ ಗೆಳೆಯರೆ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್