ಒಂದಿಷ್ಟು ಹನಿಗಳು…

ಒಂದಿಷ್ಟು ಹನಿಗಳು…

ಕವನ

ವಿಧಿ ವಿಲಾಸ 

ಅಮೇರಿಕಾದಲ್ಲಿ

ಹೆಲಿಕಾಪ್ಟರ್ ಗೆ

ವಿಮಾನ ಢಿಕ್ಕಿ

ಅರವತ್ತೇಳು

ಮಂದಿ ಸಾವು-

ಏನೀ ದುರಂತ....?

 

ವಿಶಾಲ ವಿಸ್ತಾರ

ಗಗನದಲ್ಲೇ

ಈ ಅವಗಢ!

ಇನ್ನು ರಸ್ತೆಯ ಮೇಲೆ 

ಆಗುವ ಅಪಘಾತ- 

ಹೇಳಲಿ ಏನಂತ?

***

ಯಾರಾದರೂ ಬರ್ರಪ್ಪಾ...

ಲೋಕಾ ಬೇಟೆಯಲ್ಲಿ

ಅಧಿಕಾರಿಗಳ-

ಹದಿನೆಂಟು 

ಕೋಟಿ ರೂ

ಅಕ್ರಮ 

ಸಂಪತ್ತು ಪತ್ತೆ....

 

ಅಯ್ಯೋ-

ರಾಜಕಾರಣಿಗಳ

ಸಂಪತ್ತನ್ನು

ಬೇಟೆಯಾಡುವ

ಕಲಿಗಳು ಯಾರೂ 

ಹುಟ್ಟಲಿಲ್ಲವೇ ಮತ್ತೇ?

***

ಕ್ಷಮಿಸವರನು ಗಾಂಧೀ ತಾತಾ 

ಓ ಗಾಂಧಿ

ಮಹಾತ್ಮಾ-

ಸತ್ಯವದು

ಔಷಧಿಯೊಲು

ಬಲು

ಕಹಿಯಲ್ತೇ...

 

ನಿನ್ನಾ

ಮೌಲ್ಯಗಳ

ಆರಾಧಿಸಲಾರದೆ

ನಿನ್ನನು-

ಅಮಾನುಷವಾಗಿ

ಕೊಂದರಲ್ತೇ!

***

ಅಮ್ಮಾ...  

ಅಮ್ಮಾ ನಿನ್ನ ಹೆಸರಿನಲ್ಲೇ

ಮಂತ್ರವೊಂದಿದೆ

ನೋವಿನಲ್ಲು ಹರುಷದಲ್ಲು

ಚಿಲುಮೆ ತುಂಬಿದೆ

 

ಈ ಸುಂದರ ಜಗಕೆ ನನ್ನ

ನೀ ತಂದು ಇಳಿಸಿದೆ

ಪೂಜನೀಯ ಮಾತೆಯೆನಿಸಿ

ಹರಸಿ ಕಲಿಸಿದೆ

 

ಎದೆಯ ಹಾಲ ಕುಡಿಸಿ

ತುತ್ತು ಅನ್ನವುಣಿಸಿ

ಎನ್ನ ಮನುಜನಾಗಿ

ನೀನೆನಿತು ಬೆಳೆಸಿದೆ

 

ನನಗೆ ಮಾತ ಕಲಿಸಿ

ಸಂಸ್ಕೃತಿಯ ಬಿತ್ತಿ

ನನ್ನ ಜಗದ ಮೊದಲ 

ವಿದ್ಯಾ ಗುರುವೆನಿಸಿದೆ

 

ನಿನ್ನ ಸ್ವಾರ್ಥರಹಿತ

ಪ್ರೀತಿಯಿಂದ ನಾನು ಬೆಳೆದಿಹೆ

ನಿನ್ನ ತ್ಯಾಗ ಬಲಿದಾನಕೆ

ನಾ ಋಣಭಾರನಾಗಿಹೆ

 

ನೀನಿರುವಾಗ ಅರಿಯಲಿಲ್ಲ

ಬರಿಯ ಸವಿಯ ಸವಿದೆನು

ನನ್ನ ಬಿಟ್ಟು ಹೋದ ಮೇಲೆ

ನೀನೆ ನಿಜ ದೇವರೆಂದರಿತೆನು

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್