ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆಶಾವಾದಿ ಸಂಕೇತಗಳು

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಾಲಿನ ಬಜೆಟ್ ಮಂಡಿಸಲು ಕ್ಷಣಗಣನೆ ಆರಂಭವಾಗಿರುವಂತೆಯೆ, ವಿತ್ತ ಸಮೀಕ್ಷೆಯು ದೇಶದ ಆರ್ಥಿಕ ಭವಿಷ್ಯದ ಕುರಿತಂತೆ ಆಶಾವಾದದ ಸಂಕೇತಗಳನ್ನು ನೀಡಿರುವುದು ಉಲ್ಲೇಖನೀಯವಾಗಿದೆ. ಜಾಗತಿಕ ಅನಿಶ್ಚಿತತೆ ಮತ್ತು ಹಿನ್ನಡೆಗಳ ಹೊರತಾಗಿಯೂ ಪ್ರಸಕ್ತ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇ.

Image

ಶಿಕ್ರಾ ಎಂಬ ‘ಚಿರತೆ’ ಹಕ್ಕಿ

ನಮ್ಮ ಶಾಲೆಯ ಮಕ್ಕಳಿಗೆ ನನ್ನ ಪಕ್ಷಿವೀಕ್ಷಣೆಯ ಹವ್ಯಾಸ ಚೆನ್ನಾಗಿ ಗೊತ್ತು. ಹಾಗಾಗಿ ದಿನಾ ಬೆಳಗ್ಗೆ ಶಾಲೆಗೆ ಬರುವ ದಾರಿಯಲ್ಲಿ ಯಾವ ಹಕ್ಕಿಗಳನ್ನು ನೋಡಿದೆವು ಅವುಗಳು ಏನು ಮಾಡುತ್ತಿದ್ದವು ಎಂದೆಲ್ಲ ನನ್ನ ಬಳಿ ವಿವರಿಸಿ ಹೇಳುವುದು ಬಹಳ ಮಕ್ಕಳ ದೈನಂದಿನ ಕಾಯಕ.

Image

ಸ್ಟೇಟಸ್ ಕತೆಗಳು (ಭಾಗ ೧೨೧೯) - ಪ್ರೇರಣೆ

ನಿಮಗೆ ಬದುಕು ಭಯವಾಗಲಿಲ್ವಾ? ಮದುವೆಗಿಂತ ಮೊದಲು ಉತ್ತಮವಾದ ಮನೆ ಮಧ್ಯಮ ವರ್ಗ ಅಂದುಕೊಳ್ಳುವಂತಹ ಸ್ಥಿತಿ ನಿಮ್ಮದಾಗಿತ್ತು, ಮದುವೆಯಾಗಿ ಹೊಸ ಮನೆಗೆ ಕಾಲಿಟ್ಟಾಗ ಬಡತನ ಆ ಮನೆಯಲ್ಲಿ ಮನೆ ಮಾಡಿತ್ತು. ಗೋಡೆ ನೋಡಿದ್ದ ಮನೆಗೆ ತೆಂಗಿನ ಗರಿಗಳು ಗೋಡೆಯಾದಾಗ, ಮಳೆಯ ಸಂದರ್ಭದಲ್ಲಿ ನೀರು ಮನೆ ಒಳಗೆ ಓಡಾಡುವಾಗ ಪುಟ್ಟ ಮಗುವನ್ನು ಕೈಯಲ್ಲಿ ಹಿಡಿದ ನಿಮಗೆ ಭಯವಾಗಲಿಲ್ಲವೇ?

Image

ಮಾತೃ ಛಾಯ (ಭಾಗ 1)

ಬೆಳಿಗ್ಗೆ ಎಂಟು ಗಂಟೆಗೆ ಕಾಲೇಜಿಗೆ ಬಂದ ಛಾಯಾ ಮನೆಗೆ ಹಿಂದಿರುಗುವಾಗ ರಾತ್ರಿ ಎಂಟು ಗಂಟೆ. ಮನೆಯೊಳಗೆ ಕಾಲಿಡುತ್ತಿದ್ದಂತೆ ಅತ್ತೆಯ ದುರುಗುಟ್ಟುವ ನೋಟ, ಗುರುಗುಟ್ಟುತ್ತಿದ್ದ ಗಂಡ, ತಾಯಿ ಬಂದಳೋ ಬಿಟ್ಟಳೋ ಅರಿವೇ ಇಲ್ಲದಂತೆ ಮೊಬೈಲ್ ಒಳಗೆ ಹೂತು ಹೋಗಿರುವ ಮಗ, ಕೈಯಲ್ಲಿ ಕುರ್ ಕುರೇ ಪ್ಯಾಕೆಟ್ ಹಿಡಿದು ಮುಕ್ಕುತ್ತಾ ಟಿ ವಿ ನೋಡುತ್ತಿದ್ದ ಮಗಳು..

Image

ಪುಟಾಣಿ ಪಂಟರ್ಸ್

ಪುಸ್ತಕದ ಲೇಖಕ/ಕವಿಯ ಹೆಸರು
ಅಶ್ವಿನಿ ಶಾನಭಾಗ
ಪ್ರಕಾಶಕರು
ಹರಿವು ಬುಕ್ಸ್, ಬಸವನಗುಡಿ, ಬೆಂಗಳೂರು -೫೬೦೦೦೪
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೫

ಮಕ್ಕಳಿಗಾಗಿ ಕಥೆ ಬರೆಯುವವರೇ ಕಡಿಮೆಯಾಗಿರುವಾಗ ಅಶ್ವಿನಿ ಶಾನಭಾಗ ಮಕ್ಕಳಿಗಾಗಿ ಸಾಹಸಮಯ ಕಥೆಯುಳ್ಲ ‘ಪುಟಾಣಿ ಪಂಟರ್ಸ್’ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಆಪರೇಷನ್ ಬೆಕ್ಕಿನ ಮರಿ ಎಂಬ ಕಥಾ ಹಂದರ ಹೊಂದಿರುವ ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಯಶಸ್ವಿನಿ ಎಸ್ ಎನ್.

ಬಾಳೆದಿಂಡಿನ ದೋಸೆ

Image

ಅಕ್ಕಿಯನ್ನು ೧-೨ ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಅಕ್ಕಿ ಜತೆ ಸಣ್ಣಗೆ ಹೆಚ್ಚಿದ ಬಾಳೆದಿಂಡಿನ ಹೋಳು, ಕಾಯಿತುರಿ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಹಿಟ್ಟು ನೀರುದೋಸೆಗಿಂತ ಸ್ವಲ್ಪ ದಪ್ಪಕ್ಕಿರಲಿ. ಕಾದ ಕಾವಲಿಗೆ ಮೇಲೆ ಎಣ್ಣೆ ಸವರಿ ತೆಳುವಾಗಿ ದೋಸೆ ಹುಯ್ಯಿರಿ. ಮುಚ್ಚಳ ಮುಚ್ಚಿ ೨ ನಿಮಿಷ ಬೇಯಿಸಿ. ಆಮೇಲೆ ಒಂದು ಚಮಚ ತುಪ್ಪ ಹಾಕಿ ತೆಗೆಯಿರಿ.

ಬೇಕಿರುವ ಸಾಮಗ್ರಿ

ಸಣ್ಣಗೆ ಹೆಚ್ಚಿದ ಬಾಳೆದಿಂಡಿನ ಹೋಳು ೧ ಕಪ್, ಬೆಳ್ತಿಗೆ ಅಕ್ಕಿ ೨ ಕಪ್, ಕಾಯಿತುರಿ ೧/೪ ಕಪ್, ಉಪ್ಪು ರುಚಿಗೆ ತಕ್ಕಷ್ಟು, ತುಪ್ಪ ಸ್ವಲ್ಪ.

ಬಿಗ್ ಬಾಸ್ ಹನುಮಂತು…

ಬಿಗ್ ಬಾಸ್ ಎಂದರೆ ಕಾರ್ಪೊರೇಟ್ ಜಗತ್ತಿನ ಸಂಪತ್ತು, ಬಿಗ್ ಬಾಸ್ ಹನುಮಂತು, ಟ್ರ್ಯಾಪ್ ಆದ ಕೆಲವು ಪ್ರಗತಿಪರ ಚಿಂತಕರು… ಕಾರ್ಪೊರೇಟ್ ಜಗತ್ತಿನ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಲು ಅತ್ಯಂತ ಸಂವೇದನಾಶೀಲತೆ, ಚಲನಶೀಲತೆ, ಪ್ರಬುದ್ಧತೆ ಬೇಕಾಗುತ್ತದೆ.

Image