ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿಯ ಪ್ರೋಟೋಕಾಲ್

ಅಹಂಕಾರ - ಸ್ವಾಭಿಮಾನ - ಪ್ರೋಟೋಕಾಲ್ - ಸಾರ್ವಜನಿಕ ಸಭ್ಯತೆ - ನಾಗರಿಕತೆ - ಸಹಜ ಮಾನವೀಯತೆ - ಸಾಮಾನ್ಯ ಜ್ಞಾನ - ಭವಿಷ್ಯ ಮಕ್ಕಳಿಗೆ ಆದರ್ಶ. ಕ್ಷಮಿಸಿ, ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಯಾದ ಶ್ರೀ ದಿವಾಕರ್ ರವರೇ, ಹಾಗೆಯೇ ಮಾನ್ಯ ಮುಖ್ಯಮಂತ್ರಿಗಳೇ ಇನ್ನೊಂದಿಷ್ಟು ಸಾರ್ವಜನಿಕವಾಗಿ ತಾಳ್ಮೆ ಹೆಚ್ಚು ಮಾಡಿಕೊಳ್ಳಿ.

Image

ಸ್ಟೇಟಸ್ ಕತೆಗಳು (ಭಾಗ ೧೨೦೫) - ಅನುರಾಗ

ಅವಳು ಉಸಿರು ನಿಲ್ಲಿಸಿದ್ದಾಳೆ.‌ ಹೇಡಿಯಂತೆ ಬದುಕಿನ ಆಸೆಗಳನ್ನೆಲ್ಲಾ‌ ಮೂಟೆ ಕಟ್ಟಿ ಅವನ‌ ಜೊತೆಗೆ ಬದುಕಬೇಕೆನ್ನುವ ಒಂದೇ ಆಸೆಯನ್ನ ತುಂಬಾ ಹಚ್ಚಿಕೊಂಡು ಆಸೆ ಈಡೆರದೇ ಹೋದಾಗ ಉಸಿರು ನಿಲ್ಲಿಸಿದ್ದಾಳೆ. ಮನೆಯ ಆಸೆಯ ಗೋಪುರ ಕುಸಿದು ಹೋಗಿದೆ.‌ ಕನಸುಗಳು‌ ಕಮರಿ ಹೋಗಿದೆ. ಇಬ್ಬರೂ ಒಪ್ಪಿಗೆಯಲ್ಲಿ ಪ್ರೀತಿಯ ಬಾಂಧವ್ಯ ಆರಂಬಿಸಿದವರು. ಎಲ್ಲವೂ ಸುಂದರವಾಗಿತ್ತು.

Image

ಆಗಸದಲ್ಲಿ ಹಾರುವ ಕಪ್ಪು ಗಿಡುಗನ ಹುಡುಕೋಣ ಬನ್ನಿ…

ನಾನು ಚಿಕ್ಕವನಿದ್ದಾಗ ಅಮ್ಮನ ಜೊತೆ ತರಕಾರಿ ತರಲು ಮಾರ್ಕೆಟ್‌ ಗೆ ಹೋಗುತ್ತಿದ್ದೆ. ಮಾರ್ಕೆಟ್‌ ನಲ್ಲಿ ಹಣ್ಣು, ತರಕಾರಿ, ದಿನಸಿ ಸಾಮಾನು ಇನ್ನಿತರ ವಸ್ತುಗಳನ್ನು ಖರೀದಿ ಮಾಡುತ್ತಿದ್ದವು. ಮಾರುಕಟ್ಟೆಯ ಇನ್ನೊಂದು ಭಾಗದಲ್ಲಿ ಮೀನು ಮತ್ತು ಮಾಂಸದ ಅಂಗಡಿಗಳು ಇರುತ್ತಿದ್ದವು. ಅವರು ಉಳಿದ ತ್ಯಾಜ್ಯಗಳನ್ನು ಮಾರುಕಟ್ಟೆಯ ಹಿಂದೆ ಒಂದು ದೊಡ್ಡ ಕಸದ ತೊಟ್ಟಿಗೆ ಹಾಕುತ್ತಿದ್ದರು.

Image

ಚಳಿಗಾಲದಲ್ಲಿ ಚರ್ಮದ ಸಮಸ್ಯೆಯೇ?

ಚಳಿಗಾಲ ಪ್ರಾರಂಭವಾದೊಡನೆಯೇ ಹಲವಾರು ಸಮಸ್ಯೆಗಳು ಧುತ್ತನೆ ಎದ್ದು ನಮ್ಮ ಮುಂದೆ ಬರುತ್ತವೆ. ಕೆಮ್ಮು, ದಮ್ಮು, ಶೀತ, ಗಂಟು ನೋವು, ಚರ್ಮ ಒಡೆಯುವುದು, ಹಿಮ್ಮಡಿ ಒಡೆದು ರಕ್ತ ಸ್ರಾವ ಹೀಗೆ ಹತ್ತು ಹಲವು ಸಮಸ್ಯೆಗಳು ಕಾಣ ತೊಡಗುತ್ತವೆ. ಇದರಲ್ಲಿ ಪ್ರಮುಖವಾದದ್ದು ಚರ್ಮದ ಸಮಸ್ಯೆ. ಚಳಿಗಾಲದ ಕಾರಣ ಚರ್ಮವು ಶುಷ್ಕವಾಗಿ ನಿರ್ಜೀವವಾದಂತೆ ಕಾಣುತ್ತದೆ.

Image

ಸಂಗತ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ವಿಶ್ವಾಸ
ಪ್ರಕಾಶಕರು
ಅಂಕುರ ಪಬ್ಲಿಕೇಷನ್ಸ್, ಬನಶಂಕರಿ ೨ನೇ ಹಂತ, ಬೆಂಗಳೂರು - ೫೬೦೦೭೦
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೦೮

“ಸಾಮಾನ್ಯವಾಗಿ ಸಂಸ್ಕೃತ ವಿದ್ವಾಂಸರು ಸಂಸ್ಕೃತ ಲೇಖಕರೂ ಆದಲ್ಲಿ ಇತರ ಭಾಷೆಗಳ ಬಗೆಗೆ ಅದೊಂದು ಬಗೆಯಾದ ಉದಾಸೀನತೆಯಿರುವುದೆಂಬುದು ಲೋಕದಲ್ಲಿ ಪ್ರಚುರವಾದ ಪ್ರಥೆ. ಕೆಲಮಟ್ಟಿಗೆ ಅಪಪ್ರಥೆಯೂ ಹೌದು. ಒಂದು ವೇಳೆ ಅವರು ಸಂಸ್ಕೃತೇತರ ಭಾಷೆಗಳಲ್ಲಿ -ವಿಶೇಷತಃ ದೇಶ ಭಾಷೆಗಳಲ್ಲಿ -ಬರೆದಾಗ ಅವರ ನುಡಿಗಳಲ್ಲಿ ‘ಸಂಸ್ಕೃತ ಘಾಟು’ ಹೆಚ್ಚಾಗಿರುವುದೆಂಬುದು ಮತ್ತೊಂದು ಆಕ್ಷೇಪ. ಆದರೆ ಡಾ.

ಜ್ಞಾನ ಯಾರ ಆಸ್ತಿಯೂ ಅಲ್ಲ‌ ಅದು ನಿಮ್ಮದೇ ಸಂಪತ್ತು

ದೇವರು… ಧರ್ಮಸ್ಥಳಕ್ಕೆ ಹೋಗಿ ಬಂದರೆ ವಯಸ್ಸಾಗುತ್ತಿರುವ ಮಗಳಿಗೆ ಮದುವೆಯಾಗುತ್ತದೆ, ತಿರುಪತಿಗೆ ಹೋಗಿ ಬಂದರೆ ನಿರುದ್ಯೋಗಿ ಮಗನಿಗೆ ಕೆಲಸ ಸಿಗುತ್ತದೆ, ಶಬರಿಮಲೆಗೆ ಹೋಗಿ ಬಂದರೆ ಅಪ್ಪ ಅಮ್ಮನ ಆರೋಗ್ಯ ಸುಧಾರಿಸುತ್ತದೆ, ಸುಬ್ರಮಣ್ಯಕ್ಕೆ ಹೋಗಿ ಬಂದರೆ ನಷ್ಟದ ವ್ಯವಹಾರ ಲಾಭಗಳಿಸುತ್ತದೆ, ಶಿರಡಿಗೆ ಹೋಗಿ ಬಂದರೆ ಮಗಳು ಫಸ್ಟ್‌ಕ್ಲಾಸ್ ನಲ್ಲಿ ಪಾಸಾಗುತ್ತಾಳೆ, ಮಂತ್ರಾಲಯಕ್ಕೆ ಹೋಗ

Image

ಸ್ಟೇಟಸ್ ಕತೆಗಳು (ಭಾಗ ೧೨೦೪) - ಕರು

ನೀನು ಮಾನವನೇಕಾಗಿದ್ದೀಯಾ? ಯಾವ ಕಾರಣಕ್ಕೆ ಈ ಭೂಮಿಯಲ್ಲಿ ಜನ್ಮ ತಾಳಿದ್ದೀಯಾ? ಈ ಭೂಮಿಯಲ್ಲಿ ಹುಟ್ಟುವುದಕ್ಕೆ ಯಾವ ಅರ್ಹತೆಯನ್ನು ಪಡೆದುಕೊಂಡು ಬಂದಿಲ್ಲ ಅಂತ ಕಾಣುತ್ತೆ. ಹಾಗಾಗಿ ಇಷ್ಟು ನೀಚ ಸ್ವಭಾವದವನಾಗಿದ್ಯಾ? ನನ್ನಮ್ಮ ಅವರ ಬಂಧು-ಬಳಗ ನಿನಗೇನು ಮಾಡಿದ್ರು. ನಾನು ತುಂಬಾ ಹಸಿವಾದಾಗ ಅಮ್ಮನ ಬಳಿ ಹೋಗಿ ನಿಂತರೆ ಹಾಗೆ ತನ್ನ ಕೆಚ್ಚಲಿನಿಂದ ಬಿಸಿ ಹಾಲನ್ನ ನನ್ನ ಹೊಟ್ಟೆಗೆ ಇಳಿಸ್ತಾ ಇದ್ದಳು.

Image

ಬಸವಣ್ಣನವರ ನಾಡಾದ ಬಸವ ಕಲ್ಯಾಣ

ಕಲ್ಯಾಣ ಚಾಲುಕ್ಯರ ರಾಜಧಾನಿಯಾಗಿದ್ದ ಬಸವ ಕಲ್ಯಾಣ ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ ವೈಭವದ ನಗರ. ಕಳಚೂರಿ ಬಿಜ್ಜಳನ ರಾಜಧಾನಿಯಾಗಿದ್ದ ಬಸವ ಕಲ್ಯಾಣದಲ್ಲಿ ಶರಣರ ಕ್ರಾಂತಿ ನಡೆಯಿತು. ಹಲವು ವಚನಕಾರರಿಗೆ ನೆಲೆ ನೀಡಿದ್ದ ಈ ನೆಲದಲ್ಲಿ ಬಸವಣ್ಣನವರು ರೂಪಿಸಿದ ಅನುಭವ ಮಂಟಪ ಇದ್ದಿದ್ದು.

Image