ಸ್ಟೇಟಸ್ ಕತೆಗಳು (ಭಾಗ ೧೨೦೪) - ಕರು

ಸ್ಟೇಟಸ್ ಕತೆಗಳು (ಭಾಗ ೧೨೦೪) - ಕರು

ನೀನು ಮಾನವನೇಕಾಗಿದ್ದೀಯಾ? ಯಾವ ಕಾರಣಕ್ಕೆ ಈ ಭೂಮಿಯಲ್ಲಿ ಜನ್ಮ ತಾಳಿದ್ದೀಯಾ? ಈ ಭೂಮಿಯಲ್ಲಿ ಹುಟ್ಟುವುದಕ್ಕೆ ಯಾವ ಅರ್ಹತೆಯನ್ನು ಪಡೆದುಕೊಂಡು ಬಂದಿಲ್ಲ ಅಂತ ಕಾಣುತ್ತೆ. ಹಾಗಾಗಿ ಇಷ್ಟು ನೀಚ ಸ್ವಭಾವದವನಾಗಿದ್ಯಾ? ನನ್ನಮ್ಮ ಅವರ ಬಂಧು-ಬಳಗ ನಿನಗೇನು ಮಾಡಿದ್ರು. ನಾನು ತುಂಬಾ ಹಸಿವಾದಾಗ ಅಮ್ಮನ ಬಳಿ ಹೋಗಿ ನಿಂತರೆ ಹಾಗೆ ತನ್ನ ಕೆಚ್ಚಲಿನಿಂದ ಬಿಸಿ ಹಾಲನ್ನ ನನ್ನ ಹೊಟ್ಟೆಗೆ ಇಳಿಸ್ತಾ ಇದ್ದಳು. ನಾನು ಅದನ್ನ ತಿಂದುಂಡು ಸಂಭ್ರಮದಿಂದ ಓಡಾಡ್ತಾ ಇದ್ದೆ. ಆದರೆ ಇಂದು ನನ್ನಮ್ಮ ನನ್ನ ಜೊತೆಗಿಲ್ಲ. ಅವರ ಕೆಚ್ಚಲನ್ನ ಕತ್ತರಿಸಿ ನರಳಿ ಸಾಯುವ ಹಾಗೆ ಮಾಡಿದ್ದೀರಾ. ನನ್ನಮ್ಮನಿಂದ ನಿನಗೇನಾಗಿದೆಯೋ ಗೊತ್ತಿಲ್ಲ ಆದರೆ ಅವಳ ನೋವು ಯಾತನೆ ನನಗೆ ಅರ್ಥವಾಗುತ್ತೆ. ನೀನು ಈ ಭೂಮಿಯಲ್ಲಿ ಇರುವುದಕ್ಕೆ ಅರ್ಹತೆಯನ್ನು ಸಂಪಾದಿಸಿಲ್ಲ. ನಾನು ಕೇಳಿಕೊಂಡಿದ್ದೇನೆ ಭಗವಂತನ ಬಳಿ ನನ್ನಮ್ಮ ಅನುಭವಿಸಿದ ನೋವು ನಿಮಗೆ ತಟ್ಟಬೇಕೆಂದು. ಭಗವಂತ ಖಂಡಿತ ಕೇಳಿಸಿಕೊಳ್ಳುತ್ತಾನೆ. ಆದರೆ ನೀನು ಮಾನವನಾಗಿಲ್ಲ ಮೊದಲು ಮಾನವನಾಗು ಎಲ್ಲರಿಗೂ ಬದುಕಿದೆ ಅರ್ಥ ಮಾಡಿಕೋ ... ಎಂದು  ಸುಮ್ಮನಾಯಿತು ಅಳುತ್ತಿದ್ದ ಪುಟ್ಟ ಕರು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ