ಎರಡು ಗಝಲ್ ಗಳು....
ಕವನ
ಗಝಲ್ ೧
ನನ್ನ ಮನಸು ನಿನ್ನ ಬಳಿಗೆ ಓಡಿಯಾಡಿ ಬಂದಿತು
ಹೀಗೆ ಇರುಳ ಕನಸಿನಲ್ಲಿ ಕಾಡಿಯಾಡಿ ಬಂದಿತು
ಕರುಣೆಯಿರದ ಮನದ ಜೊತೆಗೆ ಬದುಕಿನಾಟ ಹೇಗೆಯೊ
ಖುಷಿಯು ಇರುವ ಪ್ರೀತಿ ಪ್ರೇಮ ಆಡಿಯಾಡಿ ಬಂದಿತು
ಸವಿಯ ಜಾಣ ಸುತ್ತಲೆಲ್ಲ ನನಸು ಇರದೆ ಕೇಳದೊ
ಕೆಸರ ಸನಿಹ ಕಮಲವಿಂದು ಪಗಡೆಯಾಡಿ ಬಂದಿತು
ಒಸರು ಇರದ ಬಯಕೆಯೊಳಗೆ ಪ್ರೇಮವಿಂದು ಇಹುದೇ
ಹಸಿರ ಚೆಲುವ ಎಲೆಯ ಪಕ್ಕ ನೀರೆಯಾಡಿ ಬಂದಿತು
ಇರದು ಮೌನ ಒಡೆಯ ಬಹುದು ಈಶನೊಲವು ಬಾಡದು
ಕುಂತು ನಡೆವ ಮಾತುಕತೆಲಿ ಸೇಲೆಯಾಡಿ ಬಂದಿತು
***
ಗಝಲ್ ೨
ಬರದ ನಾಡಿಗೆ ಚೆಲುವು ಬೀರದೆ ಸಖಿ
ನೆರೆದ ಕೂಡಲೆ ಒಲವ ತಾರದೆ ಸಖಿ
ತಾರೆಗೆ ಹೊಳಪು ಬರಲು ಚಂದ್ರನೇ ಬೇಕೆ
ಖುಷಿಯ ಮಾರಗೆ ಗೆಲುವು ಸೇರದೆ ಸಖಿ
ಸುಂದರ ಚೆಲುವಿನ ರಶ್ಮಿಯು ಮಿಂಚದೇ
ಸುಂದರರ ಭಾವ ಕನಸನು ಮೀರದೆ ಸಖಿ
ಹಳ್ಳಿಯ ಜೀವನ ರೈತಗೆ ಸಪ್ನದ ನಡೆಯೇ
ಬಳ್ಳಿಯ ಕಾಯಿಯು ವಿಷವ ಕಾರದೆ ಸಖಿ
ಪಾವನ ಬಕುತಿಯು ಜೊತೆಗೆ ಸಾಗಲಿ ಈಶಾ
ಕಾವನು ಹೋದರೆ ಕುಲವು ಬಾರದೆ ಸಖಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
