ಹನಿಗಳು ಸಾರ್ ಹನಿಗಳು !

ಹನಿಗಳು ಸಾರ್ ಹನಿಗಳು !

ಕವನ

ಜೀವಿತವನು

ಕರಗಲು ಬಿಡದೆ

ಗಟ್ಟಿಗೊಳಿಸು !

*

ಕಲ್ಲು ಒಡೆಯೆ

ಅಕ್ಷರವು ಬೇಕೆಂಬ

ನಿಯಮವಿಲ್ಲ !

*

ಒಂಟಿ ಸೀನದು

ಬಂದರೆ ಒಳಿತದು

ಜ್ವರವು ಮಾಯ !

*

ಮುದುಡಿ ಮಲಗಿರೆ ಕವನವೆ ?

ಎನುತ ಕುಳಿತರೆ ಆದಿತೆ !

ಅಲ್ಲಿಗಲ್ಲಿಗೆ ಹಾರುತಾರುತ

ನೋಡಿ ಬರೆದರೆ ಚೆಂದವೆ ?

*

ಮೆತ್ತುವಿರೇಕೆ

ಹೇಸಿಗೆ ಬರಹಗಳ ?

ಸಂಸ್ಕಾರವೆಲ್ಲಿ !

*

ಕತ್ತೂರಿಯಂಥ

ಪರಿಮಳದ ನುಡಿ

ನಮ್ಮ ಕನ್ನಡ ! 

*

ಒಲುಮೆಯಿರೆ

ನನ್ನ ನಿಮ್ಮೊಳೆಂದೂ

ಸ್ನೇಹ ಅಮರ !

*

ಮನದಾಳದ

ಮಾತುಗಳ ಕೇಳುತ

ನೀ ಬದಲಾಗು !

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್