ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಝೆನ್ ಕಥೆ ೩೪: ಜ್ಞಾನೋದಯ

ಶಿಷ್ಯನೊಬ್ಬ ಗುರುವನ್ನು ಕೇಳಿದ: "ಗುರುವೇ, ಜ್ಞಾನೋದಯ ಎಂದರೆ ಏನು?"

ಗುರು ಹೇಳಿದ: "ಹಸಿವಾದಾಗ ಉಣ್ಣು, ಬಾಯಾರಿದಾಗ ನೀರು ಕುಡಿ, ನಿದ್ರೆ ಬಂದಾಗ ಮಲಗು"

ಭಾಗ - ೫

೧೯೮೪ ರ ಅಕ್ಟೋಬರ್ ೩೧ನೇ ತಾರ್‍ಈಖು, ಸಿ.ಎ.ಐ.ಐ.ಬಿ ಪರೀಕ್ಷೆಯಿದ್ದಿತು. ಮನೆಯ ಎದುರೇ ಇದ್ದ ನಾಷ್ಯನಲ್ ಕಾಲೇಜಿಗೆ ಹೋಗಿ ಪರೀಕ್ಷೆಯನ್ನು ಬರೆಯಬೇಕಿತ್ತು. ನಾಲ್ಕೈದು ದಿನಗಳ ಹಿಂದೆಯಷ್ಟೇ ಹಲ್ಲಿಗೆ ಸಿಲ್ವರ್ ತುಂಬಿಸಿದ್ದ ಸಮಯ. ಆಗ ನನಗೆ ಸ್ವಲ್ಪ ಜ್ವರವಿದ್ದಿತ್ತು. ಅಂದು ಪರೀಕ್ಷೆ ಇದ್ದುದರಿಂದ ಹೋಗಲೇ ಬೇಕಿತ್ತು. ಏನನ್ನೂ ತಿನ್ನಲು ಮನಸ್ಸಿರಲಿಲ್ಲ. ಅಷ್ಟು ಹೊತ್ತಿಗೆ ಸ್ನೇಹಿತ ರಾಘವೇಂದ್ರ (ಕಾಲೇಜಿನಿಂದ ಸ್ನೇಹಿತನಾಗಿದ್ದು ಒಟ್ಟಿಗೇ ಬ್ಯಾಂಕು ಸೇರಿದವನು), ಅವರ ತಾಯಿ ಕಳುಹಿಸಿದರೆಂದು ರವೆ ಗಂಜಿಯನ್ನು ತಂದಿದ್ದ. ಬೇರೆಯ ದಿನಗಳಲ್ಲಿ ಗಂಜಿಯನ್ನು ನೋಡಲೂ ಅಸಹ್ಯ ಪಡುತ್ತಿದ್ದವನು ಅಂದು ಚಪ್ಪರಿಸಿಕೊಂಡು ತಿಂದಿದ್ದೆ. ಅವನೊಡನೆ ನಾನು ಪರೀಕ್ಷೆಗೆ ಹೊರಟೆ. ಸರಿಯಾಗಿ ಓದಿರಲಿಲ್ಲ. ಏನು ಬರೆಯುವುದು ಎಂದು ಯೋಚಿಸುತ್ತಿರುವಷ್ಟರಲ್ಲೇ ಅಂದಿನ ಪರೀಕ್ಷೆ ಮುಂದೆ ಹೋಗಿದೆಯೆಂದೂ ತಿಳಿದಿತ್ತು. ಅಬ್ಬಾ! ಕೊನೆಗೂ ಓದಲು ಸಮಯ ಸಿಕ್ಕಿತು ಎಂದು ಸಂತಸ ಪಟ್ಟಿದ್ದೆ. ಏಕೆ ಪರೀಕ್ಷೆ ಮುಂದೆ ಹೋಗಿದೆ ಎಂದು ತಿಳಿಯಲೂ ವ್ಯವಧಾನವಿರಲಿಲ್ಲ.

ಭಾವನೆ

ಭಾವನೆ

ಇದೇನಿದು ಹೊಸ ಪರಿ
ಪ್ರೀತಿಯಲ್ಲ, ಪ್ರೇಮವಲ್ಲ
ಪ್ರಣಯವಂತೂ ಇಲ್ಲಿ ಸಲ್ಲ||

ಸ್ನೇಹಿತನೆನಲು ತುಂಬು ಪರಿಚಯವಿಲ್ಲ

ಕನ್ನಡಪ್ರಭದಲ್ಲಿ ಯಡಿಯೂರಪ್ಪನವರ ಅರ್ಧಮೀಸೆ!

ಇದು ನಿಜವೇ?
ಇಂದು ಕನ್ನಡಪ್ರಭದ ಅಂತರ್ಜಾಲ ಪ್ರತಿಯನ್ನು ಓದುತ್ತಿರುವಾಗ ಒಂದು ವಿಚಿತ್ರ ಕಾಣಿಸಿತು. ಯಡಿಯೂರಪ್ಪನವರ ಚಿತ್ರಗಳನ್ನು ಬೇಕೆಂದೇ ಮಾರ್ಪಡಿಸಲಾಗಿದೆಯೇ? ಕೆಲವು ಚಿತ್ರಗಳಲ್ಲ್ಲಿ ಅವರ ಮೀಸೆಯನ್ನು ಅರ್ಧ ಬೋಳಿಸಲಾಗಿದೆ. ಅದೂ ಕೆಲವೊಮ್ಮೆ ಬಲ ಅರ್ಧ, ಕೆಲವೊಮ್ಮೆ ಎಡ ಅರ್ಧ!

ಚಿಗುರಲಿ ಕನಸು...

ಹಟ್ಟಿಯಲ್ಲಿ ಹುಟ್ಟಿದ ಮಗುವಿಗೆ ತಟ್ಟಿಯ ಮನೆಯೇ ಅರಮನೆ. ಜನಜಂಗುಳಿಯ ನಡುವೆ ಎಲ್ಲಿ ಕಾಲಡಿಗೆ ಸಿಲುಕಿ ಇಲ್ಲವಾಗುತ್ತಾರೋ ಅನ್ನುಷ್ಟು ಚಿಕ್ಕಮಕ್ಕಳು, ಹಾಲುಗಲ್ಲದ ಈ ಪುಟಾಣಿಗಳು ನುಸುಳುತ್ತಿರುತ್ತವೆ. ಬದುಕ ಗಡಿಯನ್ನು ಉರುಳಿಸುತ್ತಿರುತ್ತವೆ.