ಸೇರು ಬಾ ನನ್ನಲಿ
ಬರಹ
ಮುಸ್ಸಂಜೆ ಮಬ್ಬಿನಲಿ
ಕಚಗುಳಿಯನೀನಿಟ್ಟು
ಪಿಸುಮಾತನೊಂದ ನುಡಿದೆ!
ನನ್ನ ಸೋಕಿದೆ ಬಿಗಿದು
ತಬ್ಬಿದೆ ಕಣ್ಣಿಗೆಲ್ಲೂಕಾಣದೆ
ಕಣ್ಣಚುಂಬಿಸಿ ಮೌನ ಬಿಂಬಿಸಿ
ಹ್ರುದಯವನ್ನೇ ಕಲುಕಿದೆ
ಮುಂಗುರುಳ ಹಾರಿಸಿ ಕೊರಳ
ಸವರಿಸಿ ಎನ್ನೊಳಗೆ ನೀ ಸೇರಿದೆ
ಏನೂ ಅರಿಯದ ನನ್ನನೆಳೆದು
ದೂರತೀರಕೆ ಸಾಗಿದೆ
ನನ್ನನೆಳೆದಿಹ ಕೈಯ್ಯ ಜಾಡನು
ಮನವು ಅರಸುತ ಸೋತಿದೆ
ತಂಪನೀಯುವ ಇದರಭಾವವು
ಹುಚ್ಹು ಮೋಹಕವೆನಿಸಿದೆ
ಏನಿದೇನಿದು ಮಿಂಚುಸಂಚಲಿ
ಹೊರಳಿಹೋಗುವ ಕನಸ್ಗಳೋ
ಮರಲಿ ಹೋಗದೆ ಹೊರಳಿ ನೋಡಿದೆ
ನಿನ್ನ ಬರುವನು ಹಿಡುಕಿದೆ
ನನ್ನಮಾತಿನ ಮದುರಭಾವವು
ಗಾಳಿಯಂದದಿ ಅಡಗಿದೆ
ಭಾವವಿಲ್ಲದೆ ದೇಹವಿಲ್ಲದೆ ಮತ್ತೆ
ನನ್ನಲಿ ಸೇರು ಬಾ ತಂಗಾಳಿಯೆ