ಭಾವನೆ
ಬರಹ
ಭಾವನೆ
ಇದೇನಿದು ಹೊಸ ಪರಿ
ಪ್ರೀತಿಯಲ್ಲ, ಪ್ರೇಮವಲ್ಲ
ಪ್ರಣಯವಂತೂ ಇಲ್ಲಿ ಸಲ್ಲ||
ಸ್ನೇಹಿತನೆನಲು ತುಂಬು ಪರಿಚಯವಿಲ್ಲ
ಒಡನಾಡಿಯೆನಲು ಜೊತೆಗೂಡಿ ನಡೆದಿಲ್ಲ
ಆತ್ಮೀಯನೆನಲು ಅಂತರಾತ್ಮವ ನೀ ತಟ್ಟಿಲ್ಲ||
ನಿನ ನೋಡುವ ತವಕ, ತಳಮಳಗಳಿಲ್ಲದಿಲ್ಲ
ತಪ್ತಮನದ ಸುಪ್ತಭಾವನೆಗಳಲ್ಲಿ
ತರಂಗಗಳ ಬಡಿದೆಬ್ಬಿಸಿದೆಯಲ್ಲ!!
ಅರ್ಥವಾಗದ ಮನದ ಈ ತಲ್ಲಣದ
ಸೆಳೆತವ, ಮೋಡಿಯ, ಆಕರ್ಷಣೆಯ
ಏನೆಂದು ಕರೆಯಲಿ, ಏನಿದೆಂದು ಹೆಸರಿಸಲಿ?