ವಿಧ: ಬ್ಲಾಗ್ ಬರಹ
January 15, 2008
ಹರಕುಬಟ್ಟೆಯ ನರನ
ತಿರುಕನೆಂ ಜರೆಯದಿರು
ಮರುಕವಿಲ್ಲದ ಮನವು ಹರಕಲ್ಲವೇ?
**********************************
ಸಾಗರದ ಅಲೆಯಿರಲಿ
ನಾಗರದ ಹೆಡೆಯಿರಲಿ
ಬಾಗದೇ ಮೇಲೇರಿದಾಗಲೆಲ್ಲ ?
**********************************
ಬೆಳ್ಳಕ್ಕಿ ಬಾನಲ್ಲಿ
ಸುಳ್ಳೇನೆ ಹಾರಿದ್ದು
ಹಳ್ಳದಾ ಮೀನನ್ನು ಹಿಡಿವ ನೆಪದಲ್ಲಿ
**********************************
ಇರುಳಿನಾಗಸದಲ್ಲಿ
ಹರಳಿನಾ ಚುಕ್ಕಿಗಳು
ಇರಬಹುದು,ಇರದಲವೆ ಕಾಮನಬಿಲ್ಲು?
**********************************…
ವಿಧ: ಚರ್ಚೆಯ ವಿಷಯ
January 15, 2008
ತರಲೆ(ಪ್ರಶ್ನೆ)ಗಳು...
ಭಗವಂತ...
2 ಕೈಗಳನ್ನು ಕೊಟ್ಟ...
2 ಕಾಲುಗಳು...
2 ಕಿವಿಗಳು...
2 ಕಣ್ಣುಗಳು...
ಆದರೆ....
/
/
ಹçದಯ ಒಂದೇ ಕೊಟ್ಟ
ಯಾಕೆ......?
ವಿಧ: ಬ್ಲಾಗ್ ಬರಹ
January 15, 2008
೨೦೦೭ ಕಳೆದು ೨೦೦೮ ಬಂತು.ದಿನಾ ಪೇಪರ್,ಟೀವಿ ನೋಡಿದರೆ ೩೦೦೮ ಬಂದರೂ ನಾವು ಬದಲಾಗುವುದಿಲ್ಲ ಎನಿಸುತ್ತದೆ.
ಒಬ್ಬ ಯತಿ ಸಾಗರೋಲ್ಲಂಘನೆ! ಮಾಡಿದಕ್ಕೆ ಉಳಿದವರ ವಿರೋಧ.ಬಹುಮತವಿದ್ದರೆ ಪ್ರಧಾನಿ ಮನೆ ಕಸಗುಡಿಸುವವನೂ ರಾಷ್ಟ್ರಪತಿ ಆಗಬಹುದಾದ ನಮ್ಮ ದೇಶದಲ್ಲಿ ಬಹುಮತದ ಯತಿಗಳು ವಿರೋಧಿಸಿದರು ಎಂಬ ಕಾರಣಕ್ಕೆ ಇವರು ಸುಮ್ಮನಿರಬಹುದಿತ್ತು.
--ಹಿಂದೆ ಕೃಷ್ಣ ಬೆನ್ನು ತಿರುಗಿಸಿ ಗೋಡೆ ಒಡೆದ.೨೦೦೮ರಲ್ಲಿ ಸಾಗರಕ್ಕೆ ಧುಮುಕದಂತೆ ನೋಡಿಕೊಳ್ಳಿ
ಸ್ವಾಮಿ.
ಮಾಜೀ ಮಂತ್ರಿ ಒಬ್ಬರು,ವಿರೋಧ ಪಕ್ಷವನ್ನು ದೂರುವುದು…
ವಿಧ: ಬ್ಲಾಗ್ ಬರಹ
January 15, 2008
ಮಕರ ಸಂಕ್ರಾಂತಿಯ ಶುಭಾಶಯಗಳು:-~
ಉತ್ತರಕ್ಕೆ ಮುಖ ಮಾಡಿ ಸುರ್ಯ
ಉದಯಿಸುವ ಸಮಯ ಸಂಕ್ರಾಂತಿಯ
ಸುಗ್ಗಿಯ ಸಂಬ್ರಮದಲ್ಲಿ ನಲಿವ ಸಮಯ
ಬೇವು, ಬೆಲ್ಲ ,ಎಳ್ಳು...ಸಿಹಿ-ಕಹಿಗಳ ಸಮ್ಮಿಲನದ
ಈ ಜೀವನದಲ್ಲಿ ನಿಮ್ಮ ಮತ್ತು ನಿಮ್ಮ ನೆಚ್ಚಿನ
ಜನಕ್ಕೆ ಸುಖ ಶಾಂತಿಯನ್ನುಂಟುಮಾಡಿ.
ಈ ಸಂಕ್ರಾಂತಿಯು ಶುಭವನ್ನು ಹೊತ್ತು ತರಲಿ"
ವಿಧ: ಬ್ಲಾಗ್ ಬರಹ
January 15, 2008
ಒಂದು ವಾರ ರಜ ಹಾಕಿ ನನ್ನೂರಿಗೆ ಹೋದಾಗ ಅಲ್ಲಿ ಇನ್ನಷ್ಟು ಪುಸ್ತಕ ಖರೀದಿ ಮಾಡಿದೆ .
೧.ವಸುಧೇಂದ್ರ ಅವರ ’ಯುಗಾದಿ’ ಕತೆಗಳ ಪುಸ್ತಕ .
೨.ಜಾನಕಿ ಕಾಲಂ -
೩. ಜೋಗಿ ಕತೆಗಳು - ಸುಮಾರು ೩-೪ ಪುಟಗಳ ಕತೆಗಳಿವೆ. ವಿಚಿತ್ರ ಆಗಿವೆ . ಬರವಣಿಗೆ ಚೆನ್ನಾಗಿದೆ . ಅನೆಕ ಕತೆಗಳು ತಿಳಿಯೋದೇ ಇಲ್ಲ . ಆ ಕವನದ ಅರ್ಥ ಏನು / ಈ ಕವನದ ಅರ್ಥ ಏನು ಎಂದೆಲ್ಲ ಪದ್ಯಗಳನ್ನು ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನಿಸ್ತೇವೆ. ಅದರೆ ಸರಳ ಗದ್ಯಾನೇ ಅನೇಕ ಸಲ ಅರ್ಥ ಆಗೋಲ್ವಲ್ಲ ? ಯಾವಾಗಲಾದರೂ ನಿಮಗೂ ಹಾಗೆ…
ವಿಧ: ಬ್ಲಾಗ್ ಬರಹ
January 15, 2008
ನಮ್ಮ ನಿಮ್ಮೆಲ್ಲರ ಗೋವಿನ ಹಾಡಿನ ಪಠ್ಯ ಇಲ್ಲಿದೆ . http://sampada.net/article/1553
’ಗೋವಿನ ಹಾಡು-ಕನ್ನಡತನವನ್ನು ಎರಕ ಹೊಯ್ದ ಪ್ರತಿಮೆ’ ಎಂಬ ಶ್ರೀ ಕೆ.ವಿ.ಸುಬ್ಬಣ್ಣ ಅವರ ವಿಚಾರವನ್ನು ಇಲ್ಲಿ ಓದಬಹುದು. ( http://sampada.net/article/1552 )
'ಕೊಟ್ಟ ಭಾಷೆಗೆ ತಪ್ಪಲಾರೆನು'- ಪುಣ್ಯಕೋಟಿಯ ಕುರಿತು ಇನ್ನೊಂದು ಲೇಖನವನ್ನು http://sampada.net/blog/shreekant_mishrikoti/10/07/2006/1923 ಇಲ್ಲಿ ಓದಬಹುದು . ಆಗಲೇ ’ಉಉನಾಶೆ’ ಎಂಬವರು ಒಂದು ಟಿಪ್ಪಣಿ ಹಾಕಿ ’…
ವಿಧ: ಬ್ಲಾಗ್ ಬರಹ
January 15, 2008
ನಮ್ಮ ನಿಮ್ಮೆಲ್ಲರ ಗೋವಿನ ಹಾಡಿನ ಪಠ್ಯ ಇಲ್ಲಿದೆ . http://sampada.net/article/1553
’ಗೋವಿನ ಹಾಡು-ಕನ್ನಡತನವನ್ನು ಎರಕ ಹೊಯ್ದ ಪ್ರತಿಮೆ’ ಎಂಬ ಶ್ರೀ ಕೆ.ವಿ.ಸುಬ್ಬಣ್ಣ ಅವರ ವಿಚಾರವನ್ನು ಇಲ್ಲಿ ಓದಬಹುದು. ( http://sampada.net/article/1552 )
'ಕೊಟ್ಟ ಭಾಷೆಗೆ ತಪ್ಪಲಾರೆನು'- ಪುಣ್ಯಕೋಟಿಯ ಕುರಿತು ಇನ್ನೊಂದು ಲೇಖನವನ್ನು http://sampada.net/blog/shreekant_mishrikoti/10/07/2006/1923 ಇಲ್ಲಿ ಓದಬಹುದು . ಆಗಲೇ ’ಉಉನಾಶೆ’ ಎಂಬವರು ಒಂದು ಟಿಪ್ಪಣಿ ಹಾಕಿ ’…
ವಿಧ: ಬ್ಲಾಗ್ ಬರಹ
January 15, 2008
ಎಲ್ಲರಿಗೂ ಮಕರ ಸಂಕ್ರಾತಿಯ ಶುಭಾಶಯಗಳು. ನನ್ನದು ಇದೇ ಮೊದಲ ಬರಹ. ಹಾಗಾಗಿ ಏನು ಬರೆಯಬೇಕಂತ ತಿಳಿಯದೆ ಕೇವಲ ಶುಭಾಶಯಗಳು ತಿಳಿಸುವ ಮೂಲಕ ಇದನ್ನು ಮುಗಿಸುತ್ತಿದ್ದೇನೆ. ಇನ್ನು ಮುಂದೆ ಕೆಲವು ಅಥವಾ ಹಲವು ದ್ಯನಂದಿನ ವಿಷಯಗಳನ್ನು ನಿಮ್ಮ ಮುಂದಿಡುತ್ತೇನೆ.
ವಿಧ: ಬ್ಲಾಗ್ ಬರಹ
January 15, 2008
ನಿನ್ನೆ ಒಂದು ಸೂಪರ್ ಮಾರ್ಕೆಟ್ ಗೆ ಹೋಗಿದ್ದೆ. ಹೆಸರು "ಹೋಮ್ ನೀಡ್ಸ್" ಅಂತ.
ನನ್ನ ಮನೆ ಅಲ್ಲೆ ಹತ್ತಿರ ಇರೋದ್ರಿಂದ, ವಾರಕ್ಕೆ ೨-೩ ಸಲ ಸಾಮಾನು ತರಲು ಹೋಗುತ್ತೇನೆ ಅಲ್ಲಿಗೆ. ಅಲ್ಲಿ ಇರೋ ಕೆಲಸದವರು ಪರ್ವಾಗಿಲ್ಲ ಅನ್ನೋ ಹಾಗೆ ಕನ್ನಡ ಮಾತಾಡ್ಥಾ ಇದ್ರು. ನಾನು ಹೆಚ್ಚು ಪ್ರಶ್ನೆ ಕೇಳ್ತಾ ಇರಲಿಲ್ಲ ಅವರಿಗೆ, ಏನು ಬೇಕೋ ಅದನ್ನು ತಗೊಂಡು ಬರ್ತಾ ಇದ್ದೆ.
ಆದರೆ ನಿನ್ನೆ ನಾನು ಅಮ್ಮನ ಜೊತೆ ಹೋಗಿದ್ದೆ ಅಲ್ಲಿಗೆ. ಅಮ್ಮ ಅಲ್ಲಿದ್ದ ಒಂದು ತೋರಣದ ಬಗ್ಗೆ ವಿಚಾರಿಸೋಕೆ ಹೇಳಿದ್ರು. ನಾನು…
ವಿಧ: ಬ್ಲಾಗ್ ಬರಹ
January 15, 2008
ಗೆಳೆಯ ಪ್ರದೀಪ್ ಸಿಂಹ (www.humanglory.org), - "ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ - ಒಂದು ಕೇಳು-ಪುಸ್ತಕ" ವನ್ನು MPEG 4 ಫಾರ್ಮ್ಯಾಟ್‌ಗೆ ಕನ್ವರ್ಟ್ ಮಾಡಿದ್ದಾರೆ. ಇದನ್ನು Apple ಕ್ವಿಕ್‌ಟೈಮ್‌ನಲ್ಲಿ ಪ್ಲೆ ಮಾಡಬಹುದು. ಈ ಫಾರ್ಮ್ಯಾಟ್‌ನ ಮುಖ್ಯ ಅನುಕೂಲವೆಂದರೆ ಬೇಕಾದ ಅಧ್ಯಾಯಕ್ಕೆ ಮುಂದೆ-ಹಿಂದೆ ಜಂಪ್ ಮಾಡಬಹುದು.
"ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ" ಕೇಳು-ಪುಸ್ತಕದ ಒಂದು ಹೆಚ್ಚುಗಾರಿಕೆ ಏನೆಂದರೆ, ಅಧ್ಯಾಯ 1 ರಿಂದ ಅಧ್ಯಾಯ 11 ರವರೆಗಿನ…