ವಿಧ: ಬ್ಲಾಗ್ ಬರಹ
January 10, 2008
ಕೊಸರಿನಲ್ಲಿ ಹೊಳೆವ ಕಮಲ
ಕೊಸರಿಗಂಜಿ ಅಳುವುದೇ
ಕೊಸರಿನಿಂದ ಬರುವುದೆಂದು
ಯಾರು ಅದನು ಬಗೆವರು
ಕೆಂಪು, ಬಿಳುಪು, ಹಳದಿ
ಬಣ್ಣ ದರಿಸಿ ಸೆಳೆವ ಗುಲಾಬಿ
ಮುಳ್ಳು ಜೊತೆಗೆ ಇರುವುದೆಂದು
ಯಾರು ಅದನು ತೊರೆವರು
ಹಾಲು, ಮೊಸರು, ಬೆಣ್ಣೆ, ತುಪ್ಪ
ಎಲ್ಲ ಇದನು ಸವಿಯುವರು
ಹುಲ್ಲು ತಿಂದು ಹಾಯುವುದೆಂದು
ಭಯದಿ ಹಸುವನ್ಯಾರು ಜರಿವರು
ಒಂದು, ಎರಡು, ಮೂರು, ನಾಕು
ಮಗುವಿಗಿಷ್ಟು ಹೆಸರು ಸಾಕೆ
ಒಂದು, ಎರಡು ಮಾಡಿತೆಂದು
ಯಾರು ಅದಕೆ ಸಿಡಿವರು
****
( ವಕ್ರ ವ್ಯಾಕರಣಗಳ ತಿಳಿಸಿ…
ವಿಧ: Basic page
January 10, 2008
ನನ್ನ ಕಣ್ಣಿಗೆ ಅವನು ಆಧ್ಯಾತ್ಮಿಕ ವ್ಯಕ್ತಿಯ ಹಾಗೆ ಕಾಣಲಿಲ್ಲ. ಅವನೊಬ್ಬ ಅಗಲ ಭುಜದ , ದೊಡ್ಡತಲೆಯ ಧಡೂತಿ ವ್ಯಕ್ತಿ. ಉದ್ದಕ್ಕೆ ಕೂದಲು ಬಿಟ್ಟಿದ್ದ. ಆದರೆ ಅವನ ದವಡೆ ನುಣುಪಾಗಿದ್ದು ದೊಡ್ಡದಾಗಿ ಪ್ರಮುಖವಾಗಿ ಮುಂಚಾಚಿಕೊಂಡಿತ್ತು. ಇದರಿಂದಾಗಿ ಅವನಿಗೆ ಗೂಳಿಯಂಥ ಶಕ್ತಿಶಾಲಿ ಕಳೆ ಬಂದಿತ್ತು. ಅವನುಟ್ಟಿದ್ದು ಬರೀ ಒಂದು ಕಾವಿ ಬಟ್ಟೆ. ಮೈಯ ಹೆಚ್ಚಿನ ಭಾಗ ತೆರೆದಿದ್ದು ಅವನ ಭುಜ ಹಾಗೂ ಕಾಲುಗಳು ಎಷ್ಟು ಶಕ್ತವಾಗಿದ್ದವೆಂಬುದನ್ನು ಧುತ್ತನೆ ಮನಗಾಣಿಸುವಂತಿತ್ತು. ಅವನಿಗೆ ದೊಡ್ಡ…
ವಿಧ: ಬ್ಲಾಗ್ ಬರಹ
January 10, 2008
ಅವಧಿ (http://avadhi.wordpress.com) ಬ್ಲಾಗ್ ನಿರ್ವಾಹಕರು ಅವರ ಓದುಗರೆಲ್ಲರಿಗೆ ನಿಮ್ಮ ಟಾಪ್ ಟೆನ್ ಪುಸ್ತಕ ಪಟ್ಟಿ ಹೇಳಿ ಎಂದಿದ್ದರು ಕೆಲವು ದಿನಗಳ ಹಿಂದೆ. ಪಟ್ಟಿ ಹೇಳುವುದು ಕಷ್ಟವೇ ಆದರೂ, ಆಗ ನೆನಪಾದವನ್ನು ಅವರಿಗೆ ಬರೆದು ಕಳಿಸಿದ್ದೆ. ಅದನ್ನೆ ಇಲ್ಲಿ ಮತ್ತೆ ಬರೆದಿದ್ದೇನೆ.
ಇದರಲ್ಲಿ ಕೆಲವು ಪುಸ್ತಕಗಳನ್ನು ಓದಿ ವರ್ಷಗಳೇಕೆ, ದಶಕಗಳೇ ಕಳೆದಿವೆ. ಆದರೂ ಅವನ್ನು ಓದಿದಾಗ ಆಗಿದ್ದ ಭಾವದ ನೆನಪಿನಲ್ಲಿ ಬರೆಯುತ್ತಿದ್ದೇನೆ.
೧. ಪರ್ವ - ಎಸ್.ಎಲ್.ಭೈರಪ್ಪ
೨. ಚೆನ್ನಬಸವನಾಯಕ -…
ವಿಧ: ಬ್ಲಾಗ್ ಬರಹ
January 10, 2008
ಅವಧಿ (http://avadhi.wordpress.com) ಬ್ಲಾಗ್ ನಿರ್ವಾಹಕರು ಅವರ ಓದುಗರೆಲ್ಲರಿಗೆ ನಿಮ್ಮ ಟಾಪ್ ಟೆನ್ ಪುಸ್ತಕ ಪಟ್ಟಿ ಹೇಳಿ ಎಂದಿದ್ದರು ಕೆಲವು ದಿನಗಳ ಹಿಂದೆ. ಪಟ್ಟಿ ಹೇಳುವುದು ಕಷ್ಟವೇ ಆದರೂ, ಆಗ ನೆನಪಾದವನ್ನು ಅವರಿಗೆ ಬರೆದು ಕಳಿಸಿದ್ದೆ. ಅದನ್ನೆ ಇಲ್ಲಿ ಮತ್ತೆ ಬರೆದಿದ್ದೇನೆ.
ಇದರಲ್ಲಿ ಕೆಲವು ಪುಸ್ತಕಗಳನ್ನು ಓದಿ ವರ್ಷಗಳೇಕೆ, ದಶಕಗಳೇ ಕಳೆದಿವೆ. ಆದರೂ ಅವನ್ನು ಓದಿದಾಗ ಆಗಿದ್ದ ಭಾವದ ನೆನಪಿನಲ್ಲಿ ಬರೆಯುತ್ತಿದ್ದೇನೆ.
೧. ಪರ್ವ - ಎಸ್.ಎಲ್.ಭೈರಪ್ಪ
೨. ಚೆನ್ನಬಸವನಾಯಕ -…
ವಿಧ: ಬ್ಲಾಗ್ ಬರಹ
January 10, 2008
ಕಿರುನಗೆಯ ಮೊಗ ಚಂದ
ಮುಡಿದ ಮಲ್ಲಿಗೆಯ ಗಂಧ
ಪಿಸು ಮಾತನಾಳಿಸುವಾನಂದ
ಇರಲಿ ಜನುಮ ಜನುಮಗಿಬಂಧ
ಮಾತಿನ ಉಯ್ಯಾಳೆಯಲಿ
ತೂಗಿ ತೇಲಿಸುವವಳಿವಳು
ಮಾತೆಯ ಮಮತೆ ತೋರಿ
ನನ್ನ ಮನವ ಗೆದ್ದವಳು
ಓರೆ ನೋಟಗಳಲ್ಲಿ
ಎಲ್ಲ ತಿಳಿಸುವವಳಿವಳು
ಪ್ರೀತಿಯ ಹುಬಾಣವ ಬಿಟ್ಟು
ನನ್ನ ಒಲವ ಸೆರೆಹಿಡಿದವಳು
ಭಿನ್ನ ಭಿನ್ನದ ತಿಂಡಿ
ಮನೆಯ ಮಂದಿಗೆ ಬಡಿಸಿ
ಮಕ್ಕಳಿಗೆ ಸಕ್ಕರೆಯ ಸಿಹಿಯುಣಿಸಿ
ನನ್ನಾಕೆ ಎಲ್ಲರಲಿ ಒಂದಾದವಳು
ವಾರ ವಾರದ ಪೂಜೆಗೆ
ಮಾತೆ ಬಯಸಿದ ಗುಡಿಗೆ
ಜೊತೆಯಾಗಿ ನನ್ನವಳು
ಅಮ್ಮನ ಮಗುವೆಂದು…
ವಿಧ: Basic page
January 10, 2008
ತೀರಿಕೊಂಡ ಹತ್ತಿರದವರು
ತೂಱ(ದೂರ) ಸರಿದವರು
ನೆನಪಾಗಿ ಬಂದು ಕಾಡುವುದುಂಟು
ಬರೀ ಮಯ್ಗೆ ಸಾವಾದರೂ
ನಂಟಿಗೆ ಸಾವುಂಟೆ ಹೇಳು ಬರತರಸ
ವಿಧ: Basic page
January 10, 2008
ನಿಮಗೆ ಅಭಿನಂದನೆಗಳು, ಮೊಹಮ್ಮದರೆ,
ಮೊಹಮ್ಮದ್ ನಿಜಕ್ಕು ಒಳ್ಳೆಯ ಕಲಾವಂತರು. ರೇಖೆಗಳು ಸ್ಪಷ್ಟ. ಹೇಳುವಮಾತು ದಿಟ್ಟ. ದಿನಗಳೆದಂತೆ ಭಾವನೆಗಳು ಮಾಗಿ, ಇನ್ನೂ ಪ್ರಬುದ್ಧತೆಯನ್ನು ಪಡೆಯುತ್ತವೆ. ಅವರು, ದೇಶ-ವಿದೇಶಗಳ ವಿಶಯಗಳನ್ನೂ ಸೇರಿಸಬಹುದು. ಹೊಸ ಶೈಲಿಗಳನ್ನು ಹುಟ್ಟುಹಾಕಲು ಪ್ರಯತ್ನಿಸಬಹುದು. ಕ್ಯಾನ್ವಾಸ್ ಬಹಳ ವಿಶಾಲವಾಗಿದೆ. ಹೆಚ್ಚು ಹೆಚ್ಚು ಓದು, ಜ್ಞಾನಾರ್ಜನೆ, ಮತ್ತು ಜನರ ಭೇಟಿ, ನಿಮ್ಮೊಳಗಿನ ಇನ್ನೂ ಅಳಿದುಳಿದ ಸುಪ್ತ ಶಕ್ತಿಗಳನ್ನು ಹೊರಗೆ ತರಬಹುದು. ಹೊಸ ವರ್ಷದಲ್ಲಿ ನಮ್ಮ…
ವಿಧ: ಬ್ಲಾಗ್ ಬರಹ
January 10, 2008
ತೊಡೆ ಸೊಂಟ ಮತ್ತು ಮೊಲೆಯನ್ನು
ಗಂಡಸರು ಚಪ್ಪರಿಸುವಂತಾದಾಗ
ಚಂದದ ಕುಣಿತವೂ
ತನ್ನ ಪ್ರಶ್ನೆಯ ಮೊನಚು ಕಳಕೊಂಡು
ಅರೆಭಾವಕ್ಕೆ ಉತ್ತರದಂತೆ.
ವಿಧ: Basic page
January 09, 2008
ಭಜನೆ ಮಾಡುತ್ತಿದ್ದ ಕಾಲದಲ್ಲಿ ಇತರರಲ್ಲಿ ಕಾಣುವ ಶಾಂತಿ ಸಮಾಧಾನಗಳು ನನ್ನಲ್ಲಿ ಮೂಡಲಿಲ್ಲ. ಹಾಗೆ ನೋಡಿದರೆ ಬೇಸರವೇ ಆಗತೊಡಗಿತು. ಭಜನೆ ಮಾಡುವುದರಿಂದಲೂ ತರಕಾರಿ ತಿನ್ನುವುದರಿಂದಲೂ ಸಾಧಿಸಬಹುದಾದ ವಿಶೇಷವೇನಿಲ್ಲ ಅನ್ನಿಸತೊಡಗಿತು. ನನ್ನ ಅದೃಷ್ಟಕ್ಕೆ ಸುವಾರು ಇದೇ ಸಮಯಕ್ಕೆ ಯಾರೋ ನನ್ನನ್ನು ಒಬ್ಬ ಸಂತಳ ಬಳಿ ಕರೆದೊಯ್ದರು. ಅವಳು ನದಿಯ ಹತ್ತಿರದಲ್ಲಿದ್ದ ಒಂದು ಹಳೆಯ, ಜನತುಂಬಿದ ಮನೆಯ ಮೇಲ್ಭಾಗದಲ್ಲಿದ್ದಳು. ಜನ ಅವಳನ್ನು ಸಂತಳಂತೆ ಕಾಣುತ್ತಿದ್ದರು. ಆದರೆ ನಿಜವಾಗಿ ಸಂತಳಂತಿರಲಿಲ್ಲ.…
ವಿಧ: ಬ್ಲಾಗ್ ಬರಹ
January 09, 2008
ಈ ಕೆಳಗಿನ ಹಾಡು ಯಾವ ಸಿನಿಮಾದ್ದು?, ಇಂಟರ್ ನೆಟ್ಟಿಂದ ಇಳಿಸಿಕೊಳ್ಳಲು ಯಾವುದಾದರೂ ಕೊಂಡಿ, ಇಲ್ಲ ವೇಬ್ ಸೈಟ್ ಇದ್ದರೆ ಹೇಳ್ತೀರಾ ಪ್ಲೀಜ್....
ಓ ಗುಣವಂತ, ಓ ಗುಣವಂತ
ನಿನ್ನ ಗುಣಗಾನ ಮಾಡಲು,
ಪದಗಳೇ ಸಿಗುತಿಲ್ಲಾ, ಪದಗಳೇ ಸಿಗುತಿಲ್ಲಾ.
....
ಹಾಡು ಕೇಳಲು ತುಂಬಾ ಇಂಪಾಗಿದೆ.