ಐದು ಸ್ವಾತಂತ್ರ್ಯ ಸೇನಾನಿಗಳ ಹೆಸರು ಹೇಳಿ!!

ಐದು ಸ್ವಾತಂತ್ರ್ಯ ಸೇನಾನಿಗಳ ಹೆಸರು ಹೇಳಿ!!

ಪ್ರೇಮಿಗಳ ದಿನದಂತೆಯೇ ಸ್ವಾತಂತ್ರ್ಯ ದಿನವನ್ನು ಸಂಭ್ರವದಿಂದ ಆಚರಿಸಿದ್ದೀರಾ????

ನೀವು ’ವ್ಯಾಲಂಟೈನ್ ಡೇ’ ಗೆ ಪ್ರೇಮಿಸಿಯೇ ತೀರುತ್ತೀರಿ ಎಂದು ಬೀದಿಗೆ ಇಳಿಯುತ್ತೀರಿ. ಪ್ರೇಮಿಸುವುದು ನಿಮ್ಮ ಹಕ್ಕು ಎಂದು ಫೋಸು ಕೊಟ್ಟು ಪೋಟೋ ತೆಗೆಸಿಕೊಳ್ಳುತ್ತೀರೆ. ನೀವು ಕುಡಿದುಕೊಂಡು ಇದ್ದರೆ ಅದೇ ನಿಮ್ಮ ಸಂಸ್ಕೃತಿ ಎಂದು ಕೆಲ ಇಂಗ್ಲಿಷ್ ಮಧ್ಯಮಗಳು ಬೆನ್ನುತಟ್ಟುತ್ತವೆ.

ಸ್ವಾಮಿ, ಜಗತ್ತಿನಲ್ಲಿ ನೀವು ಅಮರ ಪ್ರೇಮಿಗಳೇ ಇರಬಹುದು. ಆದರೆ ನಿಮ್ಮ ದೇಶಪ್ರೇಮದ ಬಗ್ಗೆ ನಮಗೆ ನೂರಾರು ಅನುಮಾನಗಳು ಇವೆ. ಪಬ್ಬಿಗೆ ಬಂದು ರಂಪ ಮಾಡಿದವರು ಮಹಾಶೂರರೂ ಅಲ್ಲ, ದೇಶಪ್ರೇಮಿಗಳೂ ಅಲ್ಲ, ನಿಜ. ಆದರೆ ಕುಡಿಯುವುದು ನಮ್ಮ ಹಕ್ಕು ಎಂದು ಹೋರಾಡುವುದು ’ನಮ್ಮ ಸಂಸ್ಕೃತಿ’ ಎಂದು ಚಿಯರ್ಸ್ ಹೇಳುತ್ತಾ ಚೀರಾಡುವುದು ಮಧ್ಯರಾತ್ರಿಯ ಮೇಲೂ ತೂರಾಡುವುದು ನಿಮ್ಮ ’ಕಲ್ಚರ್’ ಆಗಿದ್ದಲ್ಲಿ ಕೆಲವು ಪ್ರಶ್ನೆಗಳಿವೆ.

ರಾಷ್ಟ್ರಕ್ಕಾಗಿ ಹೋರಾಡಿದ ೫ ಸ್ವತಂತ್ರ ಸೇನಾನಿಗಳ ಹೆಸರು ಹೇಳಿ ನೋಡೋಣ. ಗಾಂಧಿ, ನೆಹರೂ ಬಿಟ್ಟರೆ ಮೂರನೇ ವ್ಯಕ್ತಿ ಖಂಡಿತಾ ನಮ್ಮ ನಿಮ್ಮ ತಲೆಗೆ ಬಂದಿರುವುದಿಲ್ಲ. ನಿಮ್ಮ ತಲೆಯಲ್ಲಿ ಫ್ಯಾಷನ್ ನ ಗೊಬ್ಬರವಿದೆ. ಯಾವುದೇ ಗ್ರೀಟಿಂಗ್ ಗ್ಯಾಲರಿಯವರು ತಮ್ಮ ಬಿಸಿನೆಸ್ ಗೆ ಲದ್ದಿ ಹಾಕಿದರೆ ಅದನ್ನು ತಿನ್ನುವ ಅಭ್ಯಾಸವಾಗಿದೆ.

’ಪ್ರೇಮಿಗಳ ದಿನ’ಕ್ಕಾಗಿ ಹೋರಾಡುವ ನೀವು, ಸ್ವಾತಂತ್ರ್ಯ ದಿನವನ್ನು ಒಮ್ಮೆಯಾದರೂ ಅದೇ ಸಂಭ್ರಮದಿಂದ ಆಚರಿಸಿದ್ದೀರಾ?? ಪರಸ್ಪರ ಅಭಿನಂದಿಸಿದ್ದೀರಾ? ಒಮ್ಮೆಯಾದರೂ ಸ್ವಾತಂತ್ರ್ಯ ದಿನದ ಪೆರೇಡ್ ನೋಡಿದ್ದೀರಾ? ಕಡೇಪಕ್ಷ ನಿಮಗೆ ಜನಗಣಮನ ಹೇಳಲಿಕ್ಕಾದರೂ ಬರುತ್ತದಾ?

ಕೊಬ್ಬು ತುಂಬಿದ ನಮ್ಮ ದೇಹದಲ್ಲಿ ಅಮೆರಿಕನ್ ಬರ್ಗರ್ ಗಳು ಓಡಾಡುತ್ತಿವೆ. ’ಷಿಟ್’ ಅನ್ನುವ ಅಭ್ಯಾಸವನ್ನು ಅದೇ ಅಮೆರಿಕನ್ನರು ಕೊಟ್ಟಿದ್ದಾರೆ. ನಾವು ಮಾರ್ಡನ್ ಎಂದು ತೋರಿಸಿಕೊಳ್ಳಬೇಕಿರುವುದು ಕುಡಿತ ಅಥವಾ ದಿರಿಸಿನಿಂದ ಅಲ್ಲವೇ ಅಲ್ಲ. ಆಧುನಿಕತೆ ಎನ್ನುವುದು ನೀವು ಧರಿಸುವ ದಿರಿಸಲ್ಲ, ಕುಡಿಯುವ ವಿಸ್ಕಿಯೂ ಅಲ್ಲ. ಅದು ಮನಸ್ಸಿನ ಸ್ವಾತಂತ್ರ್ಯ, ವ್ಯಭಿಚಾರದ ಗುಲಾಮಗಿರಿಯಂತೂ ಅಲ್ಲ. ನಿಮ್ಮ ರೀತಿಯಲ್ಲಿ ಮಾರ್ಡನ್ ಆಗಿರುವುದು ಅಫೀಮು ಸೇವನೆಗಿಂತ ಅಪಾಯಕಾರಿ.

ಅನ್ನವಿರದೇ ಸಾಯುವ ಜನರಿರುವ ದೇಶ ನಮ್ಮದು. ಓದಲು ಹಣ ಸಿಗದೆ ಅರ್ಧದಲ್ಲೇ ಶಾಲೆ ಬಿಡುತ್ತಾರೆ ನಮ್ಮ ಮಕ್ಕಳು. ಚಿಕಿತ್ಸೆಗೆ ಹಣವಿಲ್ಲದೆ ಪತ್ರಿಕೆಗಳಿಗೆ ನೆರವಿಗಾಗಿ ಅಲೆಯುತ್ತಾರೆ ನಮ್ಮ ಜನ. ಆದರೆ ನಮಗೆ ಇದು ಯಾವುದೂ ಕಾಣುವುದೇ ಇಲ್ಲ.

ಆದರ್ಶಗಳ ಮಾತು ಎನಿಸುತ್ತದಾದರೂ, ನಮ್ಮ ದುಂದುವೆಚ್ಚದಲ್ಲೇ ಒಂದು ಮಗುವಿನ ಶಿಕ್ಷಣ ಸಾಧ್ಯವಾಗುತ್ತದೆ.

ಇಂದಿನ ಪ್ರಪಂಚದಲ್ಲಿ ಮನುಷ್ಯ ಮೂರಕ್ಕಾಗಿ ಬಡಿದಾಡುತ್ತಿದ್ದಾನೆ. ಧರ್ಮ, ಯುದ್ಧ ಮತ್ತು ಪ್ರೇಮ. ಇಂಥ ಸಂದರ್ಭದಲ್ಲೇ ಆಲ್ಕೋಹಾಲ್ ಮಾಡಿದ ಹಾಲಾಹಲದಲ್ಲಿ ಮುಂಬೈನ ಭಯೋತ್ಪಾದಕತೆಯ ಸುದ್ದಿ ಮೂಲೆ ಗುಂಪಾಯಿತು. ಅಪರೂಪಕ್ಕೊಮ್ಮೆ ’ದೇಶಪ್ರೇಮಿ’ಯಾಗಿದ್ದ ಕಾಮನ್ ಮ್ಯಾನ್ ಕಾಮ - ಪ್ರೇಮದ ಕುರಿತು ಮತ್ತೆ ಯೋಚಿಸುವಂತಾದ. ಇದೇ ನಿಮ್ಮ ನಮ್ಮ ಮಹಾಸಾಧನೆ!!

ಕೃಪೆ: "ಕನ್ನಡಪ್ರಭ"

Rating
No votes yet

Comments