ಐ, ರೋಬಾಟ್; ಹ್ಯೂಮನಾಯಿಡ್ಗಳು

ಐ, ರೋಬಾಟ್; ಹ್ಯೂಮನಾಯಿಡ್ಗಳು

ಮೂರ್ನಾಕ್ವರ್ಷದ್ ಹಿಂದೆ ಐ, ರೋಬಾಟ್ ಅಂತ ಒಂದ್ ಹಾಲಿವುಡ್ಫಿಲ್ಮು ಬಂದಿತ್ತು. ನೋಡಿಲ್ಲಾಂದ್ರೆ, ತಪ್ಪದೇ ನೋಡಿ. ಮುಂದ್ಬರೋ ದಿನಗಳ ಒಂದು ಟ್ರೈಲರ್ ಸಿಗತ್ತೆ. ಇದ್ಯಾಕ್ನಾನಿದನ್ಹೆಳ್ತಿದೀನಿ? ವಿಷ್ಯಕ್ಬಂದೆ ... ಈ ಚಿತ್ರ ನೋಡಿ.


(image courtesy: www.LinuxDevices.com)

ಪೂರ್ತಿ ಸುದ್ದಿ ಇಲ್ಲಿದೆ
ಮೊನ್ನೆ ನ್ಯೂಸ್ನಲ್ಲೆಲ್ಲಾ ತೋರ್ಸ್ದ್ರು, ಜಪಾನ್ನಲ್ಲಿ ಹೊಸಾ ಹ್ಯೂಮನಾಯಿಡ್ ಒಂದು ಮಾಡಿದಾರೆ ಅಂತ. ನಿಹೋನ್ಜಿನ್ಗಳು ಟೆಕ್ನಾಲಾಜಿಕಲಿ ನಮ್ಗಿಂತಾ ಲೈಟಿಯರ್ಸ್ಮುಂದೆ ... ನಿಜ. ( ಹತ್ತ್ವರ್ಷಕ್ ಹಿಂದೇನೇ ಅಸೀಮೋ ಬಂದಾಗಿತ್ತು) ಹೊಸಾ ಜನರೇಶನ್ ಹ್ಯೂಮನಾಯಿಡ್ಗಳನ್ನ 2005ರಿಂದಾಲೂ ನೋಡ್ತಿದೀವಿ. ಆದ್ರೆ ಮೊನ್ನೆ ಹೊರಬಂದ HRP-4C ಇನ್ನೂ ಒಂದು ಹೆಜ್ಜೆ ಮುಂದು ಹೋಗಿ, ಮೌಖಿಕವಾಗಿ ಭಾವನೆಗಳಿಗೆ/ಸನ್ನಿವೇಶಕ್ಕೆ ತಕ್ಕಂತೆ ಸ್ಪಂದಿಸತ್ತೆ. (ಸೀನ್ನೋಡ್ಕೊಂಡ್ಮಕಾಮೂತಿ ಮಾಡತ್ತೆ, ಬೇಕಾದಂಗೆ; ಸಿಂಪಲ್ಲಾಗ್ ಹೇಳ್ದ್ರೆ :)) ಇನ್ನು ಇದ್ರುದ್ದು ಫ್ಯಾಷನ್ಷೋ ಬೇರೆ ಇದೆ, ಮಾರ್ಚ್ ೨೩-೨೯ ತನ್ಕ. ಈ ಯೂಟ್ಯೂಬ್ವೀಡಿಯೋಗಳ್ನ ನೋಡಿ, ಅದರ ಬಗ್ಗೆ.
ಮೊದ್ಲ್ನೇದು ಎರ್ಡ್ನೇದು

ಸ್ವಲ್ಪ ಮುಂಚೆ ಏವಾ ಅನ್ನೋ ಇನ್ನೊಂದು ಹ್ಯೂಮನಾಯಿಡ್ಬಗ್ಗೆ ಸುದ್ದಿ ಬಂದಿತ್ತು. (ಏವಾ ಇನ್ನೂ ಪೂರ್ತಿಯಾಗಿಲ್ಲ, ಆದ್ರೆ ತುಂಬಾ ಭರವಸೆ ಹುಟ್ಟಿಹಾಕಿದೆ) ವೀಡಿಯೋ ಇಲ್ಲಿದೆ

ಈ ಥರ ಟೆಕ್ನಾಲಜಿ ಮುಂದ್ವರ್ದ್ರೆ, ಮುಂದೊಂದಿನ ನಾವೆದ್ರಿಗ್ಸಿಕ್ಕಾಗ ಮಾತಾಡ್ಸ್ತಿರೋದು ಮನ್ಷ್ಯರೇನಾ ಅಂತ ಒಮ್ಮೆ ನೋಡಿ ಮುಂದ್ಮಾತಾಡ್ಬೇಕಾಗ್ಬರ್ಬೋದು. :) ಮುಂದೊಂದಿನ ಈ ಹ್ಯೂಮನಾಯಿಡ್ಗಳು ಟ್ಯೂರಿಂಗ್ ಟೆಸ್ಟ್ನೂ ಪಾಸ್ಮಾಡ್ಬಿಟ್ಟ್ವೂ ಅಂದ್ರೆ ಮುಗೀತ್. :)

ಇನ್ನೊಂದ್ಮಜಾ ವಿಷ್ಯ. ಬಹಳಷ್ಟು ಹ್ಯೂಮನಾಯಿಡ್ ರೋಬಾಟ್ಗಳು (ಈ HRP-4C ಕೂಡ) ಓಡ್ತಿರೋದು ಲಿನಕ್ಸ್ ಆಪ್ರೇಟಿಂಗ್ಸಿಸ್ಟಂ ಮೇಲೆ (ART-Linux, Advanced Real Time Linux). :)) ಟಕ್ಸ್ ಮಹಿಮೆ, ಏನೂಂತ ಹೇಳೋದು. ಮನೆಲಿರೋ ಬ್ರಾಡ್ಬ್ಯಾಂಡ್ಮಾಡೆಮ್ನಿಂದ ಮಾರ್ಸ್ರೋವರ್ನಲ್ಲೂ ಲಿನಕ್ಸೇ.

ನಾನೀಗ ಈ ಬ್ಲಾಗ್ಗೀಚ್ಬೇಕಾದ್ರೆ ಐ,ರೋಬಾಟ್ದೇ ಓಎಸ್ಟೀ (main title theme) ಕೇಳ್ತಿದೀನಿ. ಮನ್ಸಲ್ಲೇಳ್ತಿರೋ ಭಾವ್ನೆಗಳ್ನ ಬರ್ಯೋಕಾಗ್ತಿಲ್ಲಾ, ನಂಗಿವತ್ತ್ರಾತ್ರಿ ನಿದ್ದೆ ಬರೋಲ್ಲ. ಎಷ್ಟೊಂದ್ಮುಂದ್ವರ್ಯೋಕ್ಕಿದೆ ಇನ್ನೂ. :D

Rating
No votes yet

Comments