ಡೆಕ್ಕನ್ ಕ್ರೋನಿಕಲ್

ಡೆಕ್ಕನ್ ಕ್ರೋನಿಕಲ್

ಇತ್ತೀಚೆಗೆ ಡೆಕ್ಕನ್ ಕ್ರೋನಿಕಲ್ ಎಂಬ ಆಂಗ್ಲ ಪತ್ರಿಕೆ ಬೆಂಗಳೂರಿಗೆ ದೊಡ್ಡಪ್ರಮಾಣದಲ್ಲಿ (?) ಕಾಲಿಟ್ಟಿದೆ. ಚೆನ್ನೈನಲ್ಲಿ ’ದಿ ಹಿಂದು’ ವನ್ನು ಹಿಂದಿಕ್ಕಿದ್ದೇವೆ ಎಂದು ಬೀಗುತ್ತಿರುವ ಇವರು ಇಲ್ಲಿ ಸಧ್ಯಕ್ಕೆ ’ಟೈಂಸ್ ಆಫ್ ಇಂಡಿಯಾ’ ಮತ್ತು ’ಡೆಕ್ಕನ್ ಹೆರಾಲ್ಡ್’ ಗಳ ಜೊತೆ ಸೆಣೆಸಬೇಕಿದೆ.

ಈ ಹೊಸಪತ್ರಿಕೆಯ ಒಂದೆರಡು ಆವೃತ್ತಿಗಳನ್ನು ಗಮನಿಸಲಾಗಿ ಸ್ವಲ್ಪ ಸ್ಥಳೀಯ ವರದಿಗಳನ್ನು ಒತ್ತುಕೊಟ್ಟು ಬರೆದಿದ್ದಾರೆ ಎನ್ನಿಸುತ್ತದೆ. ಸುದ್ಧಿಗಳಲ್ಲಿ ಒಂದು ಹೊಸತನವಿದೆ ಎನ್ನಿಸಿತು. ಸುದ್ಧಿ ವರದಿಯಲ್ಲಿ ಕನ್ನಡದ ’ವಿಜಯ ಕರ್ನಾಟಕ’ ದ ಯಶಸ್ಸಿನ ಸೂತ್ರವನ್ನೇ ಇವರೂ ಅನುಸರಿಸಿದರೆ ಗೆಲುವು ಸಿಗಬಹುದೇನೋ. ಒಟ್ಟಿನಲ್ಲಿ ಇಲ್ಲಿಯವರೆಗೂ ಯಾವ ಆಂಗ್ಲ ಪತ್ರಿಕೆಯೂ ರಾಜ್ಯ ಮಟ್ಟದ ವರದಿಗಳನ್ನು ಸರಿಯಾಗಿ ಮಾಡದೆ ರಾಷ್ಟ್ರ ಮಟ್ಟದ ವರದಿಗಳನ್ನೇ ತರುತ್ತಿದ್ದಾರೆ ಎನ್ನಿಸುತ್ತದೆ.

ರಾಜ್ಯದ ಸಮಗ್ರ ಸುದ್ಧಿ ಕೊಡುವ ಆಂಗ್ಲ ದೈನಿಕದ ಕೊರತೆಯನ್ನು ಡೆಕ್ಕನ್ ಕ್ರೋನಿಕಲ್ ತುಂಬುವುದೇ?

Rating
No votes yet

Comments