ದೊಡ್ಡಕಳ್ಳ - ಚಿಕ್ಕ ಕಳ್ಳ

ದೊಡ್ಡಕಳ್ಳ - ಚಿಕ್ಕ ಕಳ್ಳ

ಇವತ್ತು ಟಿ.ವಿ. ನ್ಯೂಸ್ ನಲ್ಲಿ ಹೇಳುತ್ತಿದ್ದರು ’ಸತ್ಯಂ ನ ಮಾಜಿ ನಿರ್ದೇಶಕ ರಾಮಲಿಂಗಾರಾಜು ಅವರ ಪೋಲೀಸು ಕಸ್ಟಡಿಯನ್ನು ಇನ್ನೆರಡು ದಿನ ವಿಸ್ತರಿಸಲಾಗಿದೆ’ ಎಂದು. ಅದೇ ರೀತಿ ಒಬ್ಬ ಜೇಬುಗಳ್ಳನೊಬ್ಬನನ್ನು ಹಿಡಿದಿದ್ದರೆ
ವಾರ್ತೆಯಲ್ಲಿ ಅದೇ ವರದಿ ’ಪೋಲೀಸರು ......ಇಂತಹ ಹೆಸರಿನ ಕಳ್ಳನೊಬ್ಬನನ್ನು ಬಂಧಿಸಿದ್ದಾರೆ’ ಎಂದು ಹೇಳುತ್ತಾರೆ. ಇಲ್ಲಿ ವ್ಯತ್ಯಾಸ ನೋಡಿ ನೂರಿನ್ನೂರು ಕದ್ದವ ಈ ’ಚಿಲ್ಲರೆ’ ಕಳ್ಳತನದಿಂದ ಏಕವಚನದಲ್ಲಿ ಸಂಭೋಧಿಸಲ್ಪಡುತ್ತಾನೆ.
ಅದೇ ೭೦೦೦ ಕೋಟಿ ಕದ್ದವರು ಬಹುವಚನ ಪ್ರಯೋಗಿಸಿಕೊಳ್ಳುವುದರ ಮೂಲಕ ಮರ್ಯಾದಸ್ಠರಾಗಿಬಿಡುತ್ತಾರೆ. ಅಂದರೆ ಕದ್ದಮಾಲಿನ ಬೆಲೆಯ ಪ್ರಕಾರ ಕಳ್ಳನ/ರ ಗೌರವವೂ ಏರುತ್ತಾ ಹೋಗುತ್ತದೆಯೇ?? :-)

ಸಧ್ಯ ಕೊಲೆ/ಭಯೋತ್ಪಾದಕರನ್ನು ಸಂಭೋಧಿಸುವಾಗ ಈ ರೀತಿಯ ವ್ಯತ್ಯಾಸಗಳಿರುವುದಿಲ್ಲ. ಇಲ್ಲದಿದ್ದರೆ ೯/೧೧ರ ರೂವಾರಿಯನ್ನು ’ ಒಸಾಮ ಬಿನ್ ಲ್ಯಾಡನ್ ರವರು’ ಎಂದು ಕರೆಯಬೇಕಾಗುತ್ತಿತ್ತೇನೋ..

Rating
No votes yet

Comments