ನನ್ನಿಷ್ಟದ ಭಾವಗೀತೆಗಳು!
ನನಗೆ ಇದುವರಗೆ ತುಂಬ ಇಷ್ಟವಾದ ಸಾಹಿತ್ಯದಲ್ಲಿ ಭಾವಗೀತೆಗಳಿಗೆ ಬಹು ಮುಖ್ಯ ಜಾಗವಿದೆ.
ತುಂಬ ದಿನಗಳಿಂದ ನನ್ನ ಮೆಚ್ಚಿನ ಕೆಲವು ಭಾವ ಗೀತೆಗಳ ಬಗ್ಗೆ ನನ್ನ ಒಳನೋಟವನ್ನು ಬರೀಬೇಕು ಅನ್ಕೊಂತ ಇದ್ದೆ. ಆದ್ರೆ ಮನೇಲಿ ನೆಟ್ ಇಲ್ಲ. ಆಫೀಸ್ನಲ್ಲಿ ಅಷ್ಟೆಲ್ಲ ಯೋಚನೆ ಮಾಡಿ ಬರಿಯೋ ಅಷ್ಟು ತಾಳ್ಮೆ ಇಲ್ಲ.
ಇತ್ತೀಚ್ಗೆಗೆ ಕೆಲವು ಭಾವ ಗೀತಗಳು ಚರ್ಚೆಗೆ ಬಂದವು. ಈ ಸಂದರ್ಭದಲ್ಲಿ ನನ್ನ ಇಷ್ಟದ 'ಕೆಲ' ಭಾವಗೀತೆಗಳನ್ನು ಇಲ್ಲಿ ಹಂಚಿಕೊಲ್ಲಿತ್ತಿದ್ದೇನೆ.
> ಭಾ ಇಲ್ಲಿ ಸಂಬವಿಸು ಇಂದೆನ್ನ ಹೃದಯದಲಿ... ..ಕುವೆಂಪು.
>ಆನಂದಮಯ ಈ ಜಗ ಹೃದಯ... ಕುವೆಂಪು
>ಬಾ ಫಾಲ್ಗುಣ ರವಿ ದರ್ಶನಕೆ.. ಕುವೆಂಪು
>ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು..
>ತನುವು ನಿನ್ನದು ಮನವು ನಿನ್ನದು ..
>ಗಿಳಿಯು ಪಂಜರದೊಳಿಲ್ಲ..
ಇವುಗಳನ್ನು ಅದೆಷ್ಟು ಬಾರಿ ಕೇಳಿದ್ದೇನೋ ನನಗೆ ಗೊತ್ತಿಲ್ಲ.
ಎಲ್ಲೊ ಹುಡುಕಿದೆ ಇಲ್ಲದ ದೇವರ, ಯಾವ ಮೋಹನ ಮುರುಳಿ ಕರೆಯಿತೋ ...ಕೆಲವು ಹಾಡುಗಾರರು ಹಾಡಿರುವುದು ಮಾತ್ರ ಇಷ್ಟ ಆಗುತ್ತೆ.
ಒಂದೊಂದರ ಬಗ್ಗೆ ಯೂ ಉದ್ದಕ್ಕೆ ಬರೀಬೇಕು ಅಂತ ಆಸೆ. ಸಮಯವಿಲ್ಲ. ಆದರೆ ಸಣ್ಣ ಪುಟ್ಟ ಪ್ರತಿಕ್ರಿಯೆಯಿಂದಲಾದರೂ ಅನಿಸಿಕೆ ಹಂಚಿಕೊಳ್ಳಬಹುದು.
ಆಗಾಗ್ಗೆ ಸಿಕ್ಕ ಇವುಗಳ ಲಿಂಕ್ ಇಲ್ಲಿ ಸೇರ್ಸುತ್ತೇನೆ.
Comments
ಉ: ನನ್ನಿಷ್ಟದ ಭಾವಗೀತೆಗಳು!