ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ ಒಂದು ದಿನ, ಪೇಪರ್,ಕಾಫಿ,ವ್ಯಾಯಾಮ(!) ಮುಗಿಸಿದ ಮೇಲೂ ಕೆಲಸಕ್ಕೆ ಹೊರಡಲು ಸಮಯವಿತ್ತು.

ಟಿ.ವಿ. ಹಾಕಿದೆ- ಎಲ್ಲಾ ಚಾನಲ್‌ಗಳಲ್ಲೂ ಕಾಲು ಮಡಚಿ ಪಟ್ಟಾಗಿ ಜ್ಯೋತಿಷಿಗಳು (ಜತೆಗೊಂದು ಹೆಣ್ಣು) ಕುಳಿತಿದ್ದರು.
ಬೆಳಗ್ಗೆ ಜ್ಯೋತಿಷ್ಯಕ್ಕೆ, ರಾತ್ರಿ ಕ್ರೈಮ್‌ಗೆ ಮೀಸಲು.
ಹಿಂದೆ ಪತ್ರಿಕೆಯ ೩ನೇ ಪುಟದಲ್ಲಿ ೩ ಲೈನಲ್ಲಿ ವರದಿಯಾಗುತ್ತಿದ್ದ ಕ್ರೈಮು ಸಹ ಈಗ ಧಾರಾವಾಹಿಯಾಗುತ್ತಿದೆ. ಪಾಪ, ತೊಂದರೆಗೊಳಗಾದವರಿಂದಲೂ ಆಕ್ಟಿಂಗ್ ಮಾಡಿಸುತ್ತಿದ್ದಾರೆ.
ಇವನ್ನೆಲ್ಲಾ ಆಸಕ್ತಿಯಿಂದ ನೋಡುವ ಕನ್ನಡಿಗರು ಬಹಳವಿರಬಹುದು.

ಸಂಪದಿಗರ ಇಷ್ಟದ ಟಿ.ವಿ ಕಾರ್ಯಕ್ರಮಗಳು ಯಾವುದಿರಬಹುದು? ನೀವು ಹೇಳಿದರೆ ತಾನೆ ಗೊತ್ತಾಗುವುದು.
ನಾನು ಹಿಂದೆ ‘ಪಾಪಾ ಪಾಂಡು’ಗೆ ಅಡಿಕ್ಟ್ ಆಗಿದ್ದೆ.
ನಂತರ ಸರ್ಜರಿ ಭರ್ಜರಿ ಡಾಕ್ಟ್ರ ‘ಸಿಲ್ಲಿ ಲಲ್ಲಿ’.
ಈಗ ಪ್ರತಿ ಶನಿವಾರ ಸೋನಿಯಲ್ಲಿ ಬರುವ ‘ಕಾಮಿಡಿ ಸರ್ಕಸ್’ ಮಿಸ್ ಮಾಡುವುದೇ ಇಲ್ಲ.
ಮನೆಯವರೆಲ್ಲರ ಇಷ್ಟದ ‘ಕುಂಕುಂ, ಟಾಂ ಅಂಡ್ ಜೆರಿ, ಹಾಡುಗಳು,ಡ್ಯಾನ್ಸ್‌ಗಳಿಗೆ ಕಂಪನಿ ಕೊಡುವೆ.
ನ್ಯೂಸ್‌ಗೆ ‘ಸುವರ್ಣನ್ಯೂಸ್’,ಗಲಾಟೆಗಳ ವರದಿಗೆ ‘ಟಿ.ವಿ.೯’,ನಿನ್ನೆಯ ನ್ಯೂಸ್ಗೆ ‘ಉದಯ ನ್ಯೂಸ್’ ನೋಡುವೆನು.
ಇದೆಲ್ಲಾ ಮುಗಿಸಿ ‘ಸಂಪದ’ದೊಳಗೆ ನುಗ್ಗುವಾಗ ೧೧ ಗಂಟೆ ಕಳೆದಿರುವುದು.
(ರಾತ್ರಿಪಾಳಿ :) ).

-ಗಣೇಶ.

Rating
No votes yet

Comments