ಬರಿ ಮಾಯೆ ಪ್ರೀತಿ ಇದಕೆ ಹೆಸರೆ ಬೇಟ "
ಯಾವುದಕೆ ನೀವು ಕಾದಾಡುವಿರಿ ಸೋದರರೆ
ಹುಟ್ಟು , ಬದುಕು, ಸಾವು ಈ ಎಲ್ಲ ಮೂರು ದಿವಸ
ಇರುವಷ್ಟು ದಿನವೆಲ್ಲ ಇದ್ದುಬಿಡಿ ಪ್ರೀತಿಯಲಿ
ಅದು ಸಾಕು ಜೀವನಕೆ ತರಲು ಹರುಷ ||
ಜಗವಿರುವುದೇ ಹಾಗೆ ಎಲ್ಲ ಪ್ರೀತಿಯ ಮೇಲೆ
ಪ್ರೀತಿ ಇಹುದೆಂದೇ ಅದರ ಇರವು
ಪ್ರೀತಿಯೊಂದಕ್ಕಾಗಿ ಎಲ್ಲ ಮರುಳಾಗಿಹುದು
ಸಪ್ತ ಲೋಕವು ಜತೆಗೆ ಇಹವು ಪರವು ||
ಪ್ರೀತಿಗೆಂದೇ ತಾನೆ ಈ ಎಲ್ಲ ಯುದ್ಧಗಳು
ಮಹಡಿಗಳು, ಸಮಾಧಿಗಳ ಸಾಲು ಸಾಲು
ಪ್ರೀತಿಯಿಂದಲೇ ತಾನೆ ಜಗದೆಲ್ಲ ಬಹು
ಜನಕೆ, ಮನಕೆ ಬೆಳಕಾಯ್ತು ಬಾಳು ||
ಪ್ರೀತಿ ಸಾವಿಗೆ ಒತ್ತೆ , ಬದುಕ ನೀಡಿದೆ ಮತ್ತೆ
ಇದು ನೋಡಿರೆಲ್ಲವೂ ದೇವನಾಟ
ಪ್ರೀತಿ ಬದುಕಿಗೆ ಶಕ್ತಿ, ಪ್ರೀತಿಯಿಂದಲೇ ಮುಕ್ತಿ
ಬರಿ ಮಾಯೆ ಪ್ರೀತಿ ಇದಕೆ ಹೆಸರೆ ಬೇಟ || ( ಭಾವಯಾನ’ ದ ಮತ್ತೊಂದು ನನ್ನ ಕವನ )
Rating
Comments
ಉ: ಬರಿ ಮಾಯೆ ಪ್ರೀತಿ ಇದಕೆ ಹೆಸರೆ ಬೇಟ "
ಉ: ಬರಿ ಮಾಯೆ ಪ್ರೀತಿ ಇದಕೆ ಹೆಸರೆ ಬೇಟ "
In reply to ಉ: ಬರಿ ಮಾಯೆ ಪ್ರೀತಿ ಇದಕೆ ಹೆಸರೆ ಬೇಟ " by bhavanilokesh mandya
ಉ: ಬರಿ ಮಾಯೆ ಪ್ರೀತಿ ಇದಕೆ ಹೆಸರೆ ಬೇಟ "
ಉ: ಬರಿ ಮಾಯೆ ಪ್ರೀತಿ ಇದಕೆ ಹೆಸರೆ ಬೇಟ "
In reply to ಉ: ಬರಿ ಮಾಯೆ ಪ್ರೀತಿ ಇದಕೆ ಹೆಸರೆ ಬೇಟ " by asuhegde
ಉ: ಬರಿ ಮಾಯೆ ಪ್ರೀತಿ ಇದಕೆ ಹೆಸರೆ ಬೇಟ "