ಬರಿ ಮಾಯೆ ಪ್ರೀತಿ ಇದಕೆ ಹೆಸರೆ ಬೇಟ "

ಬರಿ ಮಾಯೆ ಪ್ರೀತಿ ಇದಕೆ ಹೆಸರೆ ಬೇಟ "

ಯಾವುದಕೆ ನೀವು ಕಾದಾಡುವಿರಿ ಸೋದರರೆ
ಹುಟ್ಟು , ಬದುಕು, ಸಾವು ಈ ಎಲ್ಲ ಮೂರು ದಿವಸ
ಇರುವಷ್ಟು ದಿನವೆಲ್ಲ ಇದ್ದುಬಿಡಿ ಪ್ರೀತಿಯಲಿ
ಅದು ಸಾಕು ಜೀವನಕೆ ತರಲು ಹರುಷ ||

ಜಗವಿರುವುದೇ ಹಾಗೆ ಎಲ್ಲ ಪ್ರೀತಿಯ ಮೇಲೆ
ಪ್ರೀತಿ ಇಹುದೆಂದೇ ಅದರ ಇರವು
ಪ್ರೀತಿಯೊಂದಕ್ಕಾಗಿ ಎಲ್ಲ ಮರುಳಾಗಿಹುದು
ಸಪ್ತ ಲೋಕವು ಜತೆಗೆ ಇಹವು ಪರವು ||

ಪ್ರೀತಿಗೆಂದೇ ತಾನೆ ಈ ಎಲ್ಲ ಯುದ್ಧಗಳು
ಮಹಡಿಗಳು, ಸಮಾಧಿಗಳ ಸಾಲು ಸಾಲು
ಪ್ರೀತಿಯಿಂದಲೇ ತಾನೆ ಜಗದೆಲ್ಲ ಬಹು
ಜನಕೆ, ಮನಕೆ ಬೆಳಕಾಯ್ತು ಬಾಳು ||

ಪ್ರೀತಿ ಸಾವಿಗೆ ಒತ್ತೆ , ಬದುಕ ನೀಡಿದೆ ಮತ್ತೆ
ಇದು ನೋಡಿರೆಲ್ಲವೂ ದೇವನಾಟ
ಪ್ರೀತಿ ಬದುಕಿಗೆ ಶಕ್ತಿ, ಪ್ರೀತಿಯಿಂದಲೇ ಮುಕ್ತಿ
ಬರಿ ಮಾಯೆ ಪ್ರೀತಿ ಇದಕೆ ಹೆಸರೆ ಬೇಟ || ( ಭಾವಯಾನ’ ದ ಮತ್ತೊಂದು ನನ್ನ ಕವನ )

Rating
No votes yet

Comments