ಲಿನಕ್ಸಾಯಣ - ೧೪ - ಜಿಪಾರ್ಟೆಡ್ - ಪಾರ್ಟೀಷನ್ ಮಾಡಿ ನೋಡು

ಲಿನಕ್ಸಾಯಣ - ೧೪ - ಜಿಪಾರ್ಟೆಡ್ - ಪಾರ್ಟೀಷನ್ ಮಾಡಿ ನೋಡು

ಹೊಸ ಯು.ಎಸ್.ಬಿ. ಡ್ರೈವ್ ಕೊಂಡು ತಂದ್ರೆ, ನಿಮ್ಮ ಹಳೆಯ ಹಾರ್ಡ್ ಡಿಸ್ಕ್ ನಲ್ಲಿ ಜಾಗ ಕಮ್ಮಿ ಆಯ್ತು ಅಂತ ಹೊಸ ಹಾರ್ಡ್ ಡಿಸ್ಕ್ ತಂದ್ರೆ ಮಾಡೋ ಮೊದಲ ಕೆಲಸ, ಅದರಲ್ಲಿ ಪಾರ್ಟೀಷನ್ ಮಾಡಿ ಹೊಸ ಡ್ರೈವ್ ಗಳನ್ನ ಆಪರೇಟಿಂಗ್ ಸಿಸ್ಟಂ ನಲ್ಲಿ ಬರೋ ಹಾಗೆ ಮಾಡಿ ಕೊಳ್ಳೋದು. ಅಂದ್ರೆ, ನಿಮ್ಮ ವಿಂಡೋಸ್ ನಲ್ಲಿ c: (ಸಿ. ಡ್ರೈವ್ ) ಇದೆಯಲ್ಲ ಹಾಗೆ , ಬೇರೆ ಕಡತಗಳನ್ನ (ಫೈಲ್ಗಳು ) ಇಟ್ಕೊಳ್ಲಿಕ್ಕೆ ಬೇರೆಯದೇ ಡ್ರೈವ್ ಮಾಡಿ ಕೊಳ್ಳೋದು ಅಂತ. ಉದಾ:- D: ಡಿ. ಡ್ರೈವ್ ಅಂತಿಂಟ್ಟು ಕೊಳ್ಳಿ.

ಇಂತಹ ಕೆಲಸ ಮಾಡ್ಲಿಕ್ಕೆ ಮೊದಲು ನಿಮಗೆ ಸ್ವಲ್ಪ ಸಿಸ್ಟಂ ಆಡ್ಮಿನಿಸ್ಟ್ರೇಷನ್ ಬಗ್ಗೆ ಗೊತ್ತಿರಬೇಕು. ಇಲ್ಲ ಈ ಕೆಲಸವನ್ನ್ ಮಾಡಲಿಕ್ಕೆ ಸುಲಭವಾಗುವಂತೆ ಮಾಡುವ ತಂತ್ರಾಂಶ ನಿಮ್ಮಲ್ಲಿರಬೇಕು. ವಿಂಡೋಸ್ ನಲ್ಲಿ ಕೆಲಸ ಮಾಡೋರ್ಗೆ ಪಾರ್ಟೀಷನ್ ಮ್ಯಾಜಿಕ್ ಅಂದ್ರೆ ತುಂಬಾ ಚಿರಪರಿಚಿತ. ವಿಂಡೋಸ್ ನಿಂದಲೇ ಸರಿ ಮಾಡ್ಲಿಕ್ಕಾಗದ ಅನೇಕ ಕೆಲಸಗಳನ್ನ ಇದು ಅವರಿಗೆ ಮಾಡಿ ಕೊಡುತ್ತದೆ. ಮೊದಲು ಲಿನಕ್ಸ್ ಡಿಸ್ಕ ಪಾರ್ಟೀಷನ್ ಮಾಡ್ಲಿಕ್ಕೂ ತುಂಬಾ ವರ್ಷಗಳ ಹಿಂದೆ ನಾನೂ ಇದನ್ನ ಬಳಸಿದ್ದಿದೆ. ಆದರೆ ನಿಮಗೊಂದು ವಿಷಯ ಹೇಳೋದ್ ಮರೆತೆ. ಇದನ್ನ ಕಾಸು ಕೊಟ್ಟು ಕೊಳ್ಳಬೇಕು, ಇಲ್ಲಾ ಅದರ ಟ್ರೈಯಲ್ ಆವೃತ್ತಿಯನ್ನ ಅವಧಿ ಮುಗಿಯುವವರೆಗೆ ಮಾತ್ರ ಉಪಯೋಗಿಸ ಬಹುದು.

ಇದಕ್ಕೆ ಲಿನಕ್ಸ್ ನಲ್ಲಿ ಪರ್ಯಾಯ ತಂತ್ರಾಂಶ ಉಂಟೇ ಅಂದ್ರೆ, ಅದಕ್ಕೆ ನನ್ನ ಉತ್ತರ ನಿಮಗೆ ಗೊತ್ತಿರಲೇ ಬೇಕಲ್ವಾ. ಹೌದು, ಜೀಪಾರ್ಟೆಡ್ ಅನ್ನೋ ತಂತ್ರಾಂಶ ನಿಮಗೆ ಲಿನಕ್ಸ್ ನಲ್ಲಿ ಲಭ್ಯವಿದೆ. ಪಾರ್ಟೀಷನ್ ಮ್ಯಾಜಿಕ್ ಮಾಡೋ ಅನೇಕ ಕೆಲಸಗಳನ್ನ ಇದು ಸರಾಗವಾಗಿ ಮಾಡ್ತದೆ. ಪಾರ್ಟೀಷನ್ ಗಳನ್ನ ಹಿರಿದು ಮತ್ತು ಕಿರಿದು ಮಾಡುವುದು, ಅವನ್ನ ಅಳಿಸಿ ಬೇರೆಯದೇ ಆಪರೇಟಿಂಗ್ ಸಿಸ್ಟಂ ನ ಪೈಲ್ ಸಿಸ್ಟಂನ ಸಹ ಫಾರ್ಮ್ಯಾಟ್ ಮಾಡೋದು ಮುಂತಾದ ಕೆಲಸ ನೀವಿದರಲ್ಲಿ ಮಾಡಬಹುದು. ಇದರ ಅನೇಕ ಚಿತ್ರ ಪುಟಗಳನ್ನ ಇಲ್ಲಿ ಹಾಕಿದ್ದೇನೆ. ಒಮ್ಮೆ ಉಪಯೋಗಿಸಿ ನೋಡಿ. ಉಬುಂಟು ಉಪಯೋಗಿಸುವವರು, ಇದನ್ನ ಕಂಟ್ರೋಲ್ ಫ್ಯಾನಲ್ ನಲ್ಲಿ ಪಡೆಯಬಹುದು. "ಫಾರ್ಟೀಷನ್ ಎಡಿಟರ್ " ನಿಮಗಲ್ಲಿ ಸಿಗ್ತದೆ. ಇಲ್ಲಾಂದ್ರೆ, ಕೆಳಗಿನ ಕಮ್ಯಾಂಡ್ ಅನ್ನ ಕನ್ಸೋಲಿನಲ್ಲಿ ಟೈಪಿಸಿದರಾಯಿತು, ಜಿಪಾರ್ಟೆಡ್ ನಿಮಗೆ ಸಿದ್ದವಾಗ್ತದೆ.

sudo aptitude install gparted

ಚಿತ್ರ ೧:ನನ್ನ ಲ್ಯಾಪ್ ಟಾಪ್ ನಲ್ಲಿನ ಡಿಸ್ಕ್ ಡ್ರೈವ್ ನಲ್ಲಿರುವ ಪಾರ್ಟೀಷನ್ ಗಳನ್ನ ಈ ಕೆಳಗಿನ ಚಿತ್ರದಲ್ಲಿ ಕಾಣಬಹುದು.

ಚಿತ್ರ ೨: ಏನೆಲ್ಲ ನೀವ್ ಮಾಡ್ಬಹುದು. ಅದನ್ನ ಹೇಳಕ್ಕೆ ಒಂದು ದಿನಾನೇ ಬೇಕು ಸಾರ್! ಇದನ್ನ ಸ್ವಲ್ಪ ನೋಡಿ.

 

ಚಿತ್ರ ೩: ಈಗ ತಾನೇ ಒಂದು ಯು.ಎಸ್.ಬಿ ಡ್ರವ್ ಪಾರ್ಮ್ಯಾಟ್ ಮಾಡಿದೆ.

 

ಚಿತ್ರ ೪‌: ಹೌದು! ಇದೇ ಜಿಪಾರ್ಟೆಡ್.

ಮಜಾ ಮಾಡಿ.

 

Rating
No votes yet

Comments