ವರ್ಷದ ಭಾರತೀಯ

ವರ್ಷದ ಭಾರತೀಯ

NDTV ಆಯೋಜಿಸಿದ್ದ "ವರ್ಷದ ಭಾರತೀಯ-೨೦೦೮" ಪ್ರಶಸ್ತಿ ಕುರಿತ ಸಂವಾದ ಕಾರ್ಯಕ್ರಮವೊಂದರಲ್ಲಿ ಬೆಂಗಳೂರಿನ ಓರ್ವ ಸಭಿಕರು ಹೇಳಿದ ಈ ಮಾತುಗಳು ನಮ್ಮನ್ನು ಯೋಚನೆಗೆ ಹಚ್ಚುವುದರಲ್ಲಿ ಸಂಶಯವಿಲ್ಲ:

[quote]
ತನ್ನ ದಯನೀಯ ಪರಿಸ್ಥಿತಿಯಲ್ಲೂ ಉಳುಮೆಮಾಡಿ ಎಲ್ಲರ ಹಸಿವು ನೀಗಿಸುತ್ತಿರುವ ಬಡ ಭಾರತೀಯ ರೈತ, ಮನೆ-ಊರು-ಜಾತ್ರೆ-ಹಬ್ಬ-ಮನರಂಜನೆ ಎಲ್ಲ ಮರೆತು ಸಿಯಾಚಿನ್‌ನಂತಹ ಅತಿಶೀತ ಪ್ರದೇಶದಲ್ಲಿ ದೇಶದ ಗಡಿ ಕಾಯುತ್ತಿರುವ ಯೋಧ ಮತ್ತು ಯಾವುದೇ ವಿಮೆ-ಸುರಕ್ಷತೆಯಿಲ್ಲದೆ, ದೇಹವನ್ನೇ ಪಣವಾಗಿಟ್ಟು ಮೈಮುರಿದು ದುಡಿದು ಫ್ಲೈ-ಓವರ್‌ಗಳು, ಕಟ್ಟಡ ನಿರ್ಮಾಣಗಳಲ್ಲಿ ತೊಡಗಿ ಆಧುನಿಕ ಭಾರತ ಕಟ್ಟುತ್ತಿರುವ ಕೂಲಿ - ಇವರೇ ಇಂದಿನ ಭಾರತದ ನಿಜವಾದ ಹೀರೋಗಳು: ಇವರಿಗೆ ಸಲ್ಲದ ಯಾವ ಗೌರವ-ಪ್ರಶಸ್ತಿಗಳೂ ವ್ಯರ್ಥ.
[/quote]

Rating
No votes yet

Comments