ಸ್ಪಟಿಕ ಎಸ್ಟೇಟ್ - 3

ಸ್ಪಟಿಕ ಎಸ್ಟೇಟ್ - 3

ಸುಹಾಸ್ ಆಗಿನ್ನು ತನ್ನ ಇಂಜಿನಿಯರಿಂಗ್ ಮುಗಿಸಿ ಒಂದೆರಡು ತಿಂಗಳು ಸ್ಪಟಿಕದಲ್ಲಿ ಹಾಯಗಿದ್ದು ಮುಂದೆ ಬೆಂಗಳೊರಲ್ಲಿ ಎಮ್ ಬಿ ಎ ಮಾಡುವ ಉದ್ದೇಶ ಹೊಂದಿದ್ದ ಅದು ರಾಯರಿಗು, ಭವಾನಿಗು ತಿಳಿದಿತ್ತು, ಬುದ್ದಿವಂತನಾದ ಸುಹಾಸ್ ಯಾವುದೆ ಕೆಲಸದ ಆಸೆಯಿಂದ ಓದುತ್ತಿರಲಿಲ್ಲ, ಅದರ ಅಗತ್ಯವು ಅವನಿಗಿರಲಿಲ್ಲ just knowledge ಎಂದು ಓದುತ್ತಿದ್ದ, ಆದರೆ ಭವಾನಿಯ ಉದ್ದೇಶವೆ ಬೇರೆ ಆಗಿತ್ತು ಏನಾದರು ಮಗ ಕೊನೆಗೆ ಒಪ್ಪುತ್ತಾನೆಂದು ಭಾವಿಸಿ ರಾಯರು ಎಷ್ಟು ಹೇಳಿದರು ಮಗನನ್ನು ಒಂದು ಮಾತು ಕೇಳದೆ ತನ್ನ ಇಚ್ಛೆಯಂತೆ ಮಗ ಆಸ್ಟ್ರೇಲಿಯಾದಲ್ಲಿ ಓದಲು ಎಲ್ಲಾ ರೀತಿಯ ವ್ಯವಸ್ತೆ ಮಾಡಿಯೆ ಬಿಟ್ಟಳು. ಈ ಪ್ರಸ್ತಾಪ ಮಗನ ಮುಂದೆ ಇಟ್ಟಾಗ ಸುಹಾಸ್ ಅದನ್ನು ಯಾವುದೆ ಕಾರಣಕ್ಕು ಒಪ್ಪಲಿಲ್ಲ, ಮಾತಿಗೆ ಮಾತು ಬೆಳೆಯುತ್ತಾ, ಹೋಯಿತು.ಹಠಕ್ಕೆ ಬಿದ್ದವಳಂತೆ ಭವಾನಿ ಮಗನನ್ನು ಒಪ್ಪುವಂತೆ ಮಾಡಿದಳು, ಆದರೆ ಸುಹಾಸ್ ಕೂಡ ಪಣ ತೊಟ್ಟವನಂತೆ education ಮುಗಿದಮೇಲು ತಾನು ಹಿಂದಿರುಗುವುದಿಲ್ಲವೆಂದು, ಅಲ್ಲೆ settle ಆಗುವುದಾಗಿ ಹೇಳಿದ, ಆಗ ಭವಾನಿಗೆ ಮಗ ತನ್ನಿಚ್ಛೆಯಂತೆ ಅಲ್ಲಿ ಓದಲು ಒಪ್ಪಿಕೊಂಡಿದ್ದು ಮಾತ್ರ ಮುಖ್ಯವಾಯಿತು,ಅದು ತನ್ನ ಪ್ರತಿಷ್ಟೆ ಎಂದು ತಿಳಿದಿದ್ದಳು, ಈಗ ಸಿಟ್ಟಿನಲ್ಲಿ ಹಾಗೆಂದರು ಹಾಗೆ ಮಾಡದೆ ಮಗ ಮತ್ತೆ ಬರುತ್ತಾನೆ ಎಂದು ತಿಳಿದಳು.ಆ ಘಟನೆಯ ನಂತರ ಸುಹಾಸ್ ತಾಯಿಯ ಜೊತೆ ಮಾತು ಕಡಿಮೆ ಮಾಡಿದ, ಹೆಚ್ಚು ಮೌನವಾಗಿರ ತೊಡಗಿದ ಆಗೆಲ್ಲ ರಾಯರು ಭವಾನಿಗೆ ತನ್ನ ನಿರ್ಧಾರವನ್ನು ಬದಲಿಸಲು ಹೇಳಿದರು ಪ್ರಯೋಜನಕ್ಕಂತು ಬರಲಿಲ್ಲ, ಪ್ರಯೋಜನೆವಿಲ್ಲವೆಂದು ಅರಿತು ಮಗನಿಗೆ ಸಮಾಧಾನ ಹೇಳುತ್ತಿದ್ದರು.ಅಂತು ತಾಯಿಯ ಇಚ್ಛೆಯಂತೆ ಸುಹಾಸ್ ಆಸ್ಟ್ರೇಲಿಯಾಗೆ ಹೋದ, ವಾರಕ್ಕೆರಡು ಬಾರಿಯಂತೆ ಇವರೆ ಮಗನಿಗೆ ಫೋನ್ ಮಾಡುತ್ತಿದ್ದರು, ತಂದೆಯೊಡನೆ ಮನ ಬಿಚ್ಚಿ ಮಾತನಾಡುತಿದ್ದ ಮಗ ತಾಯಿಯೊಡನೆ ಅವರು ಕೇಳಿದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸುತಿದ್ದ, ಮೊದಮೊದಲು ಮಗನಿಗೆ ಇನ್ನು ನನ್ನ್ ಮೇಲೆ ಕೋಪ ಬರಬರುತ್ತ ಸರಿಹೋಗುತ್ತಾನೆ ಎಂದು ಬಾವಿಸಿದ ಅವಳ ಊಹೆ ಸುಳ್ಳಾಗುತ್ತ ಬಂದಿತು, MBA ಮುಗಿಯುತ್ತಾ ಬಂದರು ಮಗ ಬದಲಾಗಲಿಲ್ಲ, ಈ ನಡುವೆ ರಾಯರು ಭವಾನಿ ಇಬ್ಬರು ಒಂದೆರಡು ಬಾರಿ ಆಷ್ಟ್ರೇಲಿಯಾಕ್ಕು ಹೋಗೆ ಬಂದರು ಮಗನನ್ನು ನೋಡಲು. ಆಗೆಲ್ಲ ಮಗ ಸಂತೋಷದಿಂದಿಲ್ಲ ಮೊದಲಬಾರಿಗೆ ಭವಾನಿಗೆ ತಾನು ಎಡವಿದೆ ಅನಿಸತೊಡಗಿತು.ಮಗ MBA ಮುಗಿಸಿ ಅಲ್ಲಿಯೆ ಕೆಲಸಕ್ಕೆ ಸೇರುವ ನಿರ್ಧಾರ ಮಾಡಿದಾಗ ಭವಾನಿಗೆ ಆಕಾಶವೆ ಕಳಚಿಬಿದ್ದಂತಾಯಿತು. ಮಗ ಈ ರೀತಿಯ ಹಠಕ್ಕೆ ಬೀಳುತ್ತಾನೆಂದು ಕನಸಿನಲ್ಲು ನೆನೆದಿರಲಿಲ್ಲ. ಯಾರ ಮಾತಿಗು ಮಗ ಬಗ್ಗದಾದಗ, ಬರಬರುತ್ತಾ ಭವಾನಿ ಮೌನಿಯಾಗತೊಡಗಿದಳು. ಅವಳ ಈ ಪರಿಸ್ಥಿತಿಗೆ ಇದೆ ಕಾರಣವಾಗಿತ್ತು. ಭವಾನಿ ರಂಗನಾಥ ಏನಾದ್ರು ಮಾಡಿ ಎಂದಾಗಲೆ ಆ ಗುಂಗಿನಿಂದ ಹೊರಬಂದರು ರಾಯರು.

ಭವಾನಿ ಸಮಾಧಾನ ಮಾಡ್ಕೊ ಈ ಸಾರಿ ನಾನು, ರಾಮಮುರ್ತಿ ಇಬ್ಬರು decide ಮಾಡಿದೀವಿ, ಆಷ್ಟ್ರೇಲಿಯಾಕ್ಕೆ ಹೋಗಿ ಖಂಡಿತ ಅವ್ನನ್ನ convience ಮಾಡಿ ಕರ್ಕೊಂಡು ಬಂದೆ ಬರ್ತೀವಿ.ಅಷ್ಟ್ ಮಾಡಿ ರಂಗನಾಥ್ ಹೇಗಾದ್ರು ಮಾಡಿ ಸುಹಾಸ್ ನ ಕರ್ಕೊಂಡ್ ಬನ್ನಿ ಇನ್ನ್ಯಾವತ್ತು ನಾನು ಅವ್ನ ಆಸೆಗೆ ಅಡ್ಡಿ ಬರಲ್ಲಾಂದ್ರೆ ಅವ್ನಿಷ್ಟಾನೆ ನನ್ನಿಷ್ಟ, ಇನ್ ಈ ನೋವು ನನ್ ಕೈಯಲ್ಲಿ ತಡ್ಕೊಳ್ಳಕ್ಕಾಗಲ್ಲ ಗೋಗರೆಯುವಂತಿತ್ತು ಅವಳ ಸ್ವರ, ಸಮಾಧಾನ ಮಾಡುತ್ತ ಒಳಕರೆದುಕೋಡು ಹೋದರು, ಭವಾನಿಗೆ ಯಾಕೊ ಮನಸ್ಸು ನಿರಾಳವೆನೆಸಿ ನಿದ್ರೆ ಮಾಡಿದಳು.ಇತ್ತ ರಾಯರು ಭವಾನಿಯನ್ನು ಸಮಾಧಾನ ಪಡಿಸಲು ಮಗನನ್ನು convience ಮಾಡಿ ಕರ್ಕೊಂಡುಬರುವ ಸುಳ್ಳು ಹೇಳಿದ್ದರು, ಅದನ್ನು ಹೇಗೆ ಕಾರ್ಯರೂಪಕ್ಕೆ ತರುವುದೆಂದು ಯೋಚಿಸಲಾರಂಬಿಸಿದರು, ಸುಹಾಸನಿಗೆ ತಂದೆಯ ಮೇಲಿರುವಷ್ಟೆ ಗೌರವ ರಾಮಮುರ್ತಿಯವರ ಮೇಲು ಇತ್ತು, ಎಷ್ಟೊ ಬಾರಿ ಕೆಲವೊಂದು ವಿಷಯದಲ್ಲಿ ಅವರ ಮಾರ್ಗದರ್ಶನ ಪಡೆಯುತಿದ್ದ, ಅವರ ಮೇಲೆ ವಿಷೇಶವಾದ ಗೌರವ ಹೊಂದಿದ್ದ, ನನ್ನ ಮಾತಿಗಲ್ಲದಿದ್ರು ರಾಮಮುರ್ತಿ ಮಾತಿಗೆ ಒಪ್ಪುವನೆಂಬ ಭರವಸೆ ಇತ್ತು ರಾಯರಿಗೆ, ಇರಲಿ ಇದರ ಬಗ್ಗೆ ನಾಳೆ ರಾಮಮುರ್ತಿ ಜೊತೆ ಮಾತನಾಡಿದರಾಯಿತು ಎಂದು ಹಾಗೆ ಯೋಚಿಸುತ್ತಾ ಮಲಗಿದರು.

ಶುಕ್ಲಾಂಬರದರ್ಂ ವಿಷ್ಣುಂ ....ಶಶಿವರ್ಣಮ್ ಚತುರ್ಭುಜಮ್................ರೇಡಿಯೋದಿಂದ ಸುಪ್ರಭಾತ ಕೇಳಿಬರುತಿತ್ತು. ಕಣ್ತೆರೆದು ನೋಡಿದಳು ಕವನ , ಆಗಲೆ ಬೆಳಗಾಯಿತೆ? ಕಿಟಕಿಯಿಂದಾಚೆ ದೃಷ್ಟಿ ಹಾಯಿಸಿದಳು ದಟ್ಟವಾಗಿ ಕವಿದಿದ್ದ ಮಂಜು ಮುಸುಕಿದ ಮೋಡದಿಂದ ಆಗಿನ್ನು ಬೆಳಕು ಹೊರಬರಲಾರದೆ ಬರುತಿತ್ತು, ಮೈ ಮುರಿದು ಎದ್ದು ಅಕ್ಕನ್ನನ್ನು ನೋಡಿದಳು, ಬೆಳಗಿನ ಜಾವದ ಸಿಹಿ ನಿದ್ರೆಯಲ್ಲಿರುವಂತೆ ಕಂಡಳು ಪಾಪ.... ಮಲಗಲಿ ಮದುವೆಯಾಗಿ ಹೋಗುವವಳು ಅದು ಅಲ್ಲದೆ ಎರಡು ತಿಂಗಳಿಂದ ಪರೀಕ್ಷೆಗೆ ಓದಲಿ ಎಂದು ಅಮ್ಮ, ಅಕ್ಕ ಇಬ್ಬರು ಯಾವ ಕೆಲಸವನ್ನು ಮಾಡಿಸಿರಲಿಲ್ಲ ಎಂದು ನೆನೆದು ಎದ್ದು ಹೊರಬಂದಳು, ಮುಂಬಾಗಿಲನ್ನು ಹೊರಗಿನಿಂದ ಹಾಕಿರುವುದನ್ನು ನೋಡಿ ಅಪ್ಪ ಅಮ್ಮ ಇಬ್ಬರು ಆಗಲೆ ವಾಕಿಂಗ್ ಹೋಗಿರುವುದು ಅರಿತು, ಬಾಗಿಲಿಗಾದರು ನೀರಾಕೋಣವೆಂದು ಬಚ್ಚಲು ಮನೆಗೆ ಹೋದಳು ಆಗಲೆ ನೀರು ಕಾದಿರುವುದು ಕಂಡು ವಾಕಿಂಗ್ ನಿಂದ ಬಂದ ಕೂಡಲೆ ಅಪ್ಪ ಸ್ನಾನ ಮಾಡುವುದು ನೆನೆದು, ತಾನು ಬೇಗ ಸ್ನಾನ ಮುಗಿಸಿ ಹಿಂದಿನ ಬಾಗಿಲಿಂದ ಮುಂದೆ ಬಂದಳು ಆಗಿನ್ನು ಗೂಡಿನಿಂದ ಚಿಲಿಪಿಲಿ ಸದ್ದು ಮಾಡುತ್ತ ಹಾರಿ ಹೋಗುತ್ತಿರುವ ಹಕ್ಕಿಗಳು , ಅರಳಿ ಸುಗಂಧ ಬೀರುತ್ತಿರುವ ಹೂಗಳು ಮನಸ್ಸಿಗೆ ದೇಹಕ್ಕೆ ತಂಪೆನಿಸಿತು, ಪರೀಕ್ಷೆವತಿಯಿಂದ ಇಷ್ಟುದಿನ ಇದುನ್ನೆಲ್ಲ miss ಮಾಡ್ಕೊಂಡೆ ಎನಿಸಿತು, ನಡುಗುವಷ್ಟು ಚಳಿ ಸ್ನಾನ ಮಾಡಿದ್ದರಿಂದ ಅಷ್ಟು ಚಳಿ ಎನಿಸಲಿಲ್ಲ, ಹೋಗಿ ಅಲ್ಲೆ ಇದ್ದ ನಲ್ಲಿಗೆ ಪೈಪ್ ಹಾಕಿ ಬಾಗಿಲಿಗೆ, ಗಿಡಗಳಿಗೆ ನೀರಾಕತೊಡಗಿದಳು.. ಒಹೋ!!! ಎನಮ್ಮ ಹಾಗ್ಲೆ ಎದ್ ಬಿಟ್ಟಿದೀಯ.... ತಂದೆಯ ಸ್ವರ ಕೇಳಿ ಹಿಂದಿರುಗಿ ನೋಡಿದಳು, ಓ ಅಪ್ಪ ಆಯ್ತಾ ವಾಕು ನಕ್ಕಳು,.... ಇವಾಗಿನ್ನು ಪರೀಕ್ಷೆ ಮುಗ್ದಿದೆ ಎರಡು ತಿಂಗಳಿಂದ ಒಂದೆ ಸಮನೆ ಓದಿದೀಯ ಇನ್ನು ಸ್ವಲ್ಪ ಹೊತ್ತು ಮಲ್ಕೊಬಾರ್ದಿತ್ತೇನೆ ಹುಡ್ಗಿ ಅಮ್ಮ ಅಕ್ಕರೆಯಿಂದ ಹೇಳುತ್ತ .. ಸುಮಿ ಇನ್ನು ಎದ್ದಿಲ್ವ? ಎನ್ನುತ್ತ ಒಳನಡೆದರು ಅಮ್ಮ...... ಯಾಕ್ ಕವನ ನಿದ್ದೆ ಬರ್ಲಿಲ್ವ ಮಗಳೆ ಎಂದು ತಂದೆ ಪೂಜೆಗೆ ಹೂ ಕೀಳಲು ಪ್ರಾರಭಿಸಿದರು.........ಆಗೆನಿಲ್ಲಪ್ಪ ಈ nature miss ಮಾಡ್ಕೊಳ್ಳೋಕೆ ಅದ್ರಲ್ಲು ಈ ಬೆಳಗಿನ ಜಾವನ್ miss ಮಾಡ್ಕೊಳ್ಳೋದು ನನಿಗಂತು ಇಷ್ಟ ಇಲ್ಲ ಅಪ್ಪ, ನಿಮಿಗ್ ಗೊತ್ತಲ. ನವಿರಾಗಿ ನಕ್ಕಳು...... ತಂದೆಗು ಗೊತ್ತು ಕವನ ಚಿಕ್ಕವಳಿದ್ದಾಗಿನಿಂದಲು ಹಾಗೆ ಹೂವು, ಹೂದೋಟ ಎಂದರೆ ಪ್ರಂಚಪ್ರಾಣ ತನ್ನ ಬಿಡುವಿನ ವೇಳೆಯನ್ನೆಲ್ಲ ಅಲ್ಲೆ ಕಳಿಯುತ್ತಿದ್ದಳು.........ಕವನ?..... ಎನಪ್ಪ? ಮುಂದೆ ಏನ್ ಮಾಡ್ಬೇಕು ಅಂತಿದೀಯ ಮಗಳೆ, ಇನ್ನು ಏನ್ decision ತಗೊಂಡಿಲ್ಲ ಅಪ್ಪ, ಮುಂದೆ ಓದ್ಬೇಕು ಅಂದ್ರೆ ಹೊರಗಡೆ ಹೋಗ್ಬೇಕಾಗುತ್ತೆ ಅದು ನನಿಗಿಷ್ಟ ಇಲ್ಲ.........ಅದುಕ್ಕೆ Auditor ಹತ್ರ practice ಮಡೋದು ಇಲ್ಲಾಂದ್ರೆ CA correspondence ಮಾಡೋದು ......ಆದ್ರೆ ಇನ್ನು ಯಾವ್ದು decide ಮಾಡಿಲ್ಲ ಅಪ್ಪ. ಏನ್ ಮಾಡ್ಲಿ ಎಂಬಂತೆ ತಂದೆಯ ಮುಖ ನೋಡಿದಳು? ನೀನ್ ಏನ್ decide ಮಾಡಿದ್ರು ಅದುಕ್ಕೆ ನನ್ ಒಪ್ಗೆ ಇದ್ದೆ ಇರುತ್ತೆ ಆದ್ರೆ ಸ್ವಲ್ಪ ದಿನ ರೆಸ್ಟ ತಗೊ... ಎಂದು ನಕ್ಕು ಹೂ ತೆಗೆದು ಕೊಂಡು ಒಳನಡೆದರು.

ಶಾರು... ತಗೊ ಹೂ ದೇವ್ರ ಮನೇಲಿ ಇಟ್ಬಿಡು ಸ್ನಾನ ಮಾಡ್ಕೊಂಡ್ ಬರ್ತೀನಿ ಎಂದು ಸ್ನಾನಕ್ಕೆ ಹೊರಟರು.ಇತ್ತ ಸುಮ ಆಗ್ಲೆ ಸ್ನಾನ ಮಾಡ್ಕೊಂಡು ಹೊರಬರುತ್ತಿದ್ದಳು, ಒಹೋ ಎನಮ್ಮ ಆಗ್ಲೆ ನೀನು ಎದ್ಬಿಟ್ಟಿದೀಯ ಸ್ನಾನ ಆಯ್ತಾ........... ಆಯ್ತಪ್ಪ, ಮಗಳ ಮುಖದಲ್ಲಿ ಏನೊ ಹೊಸ ಕಳೆ ಕಂಡಂತಾಯಿತು ಅರಿತವರಂತೆ ನಕ್ಕು ಸ್ನಾನಕ್ಕೊರಟರು.ದೇವರಿಗೆ ನಮಸ್ಕರಿಸಿ....... ಅಮ್ಮಾ....ಕವನ ಎಲ್ಲಮ್ಮ??? ಎಂದು ಹೊರ ನಡೆದಳು ತಂಗಿ ಗಿಡಗಳಿಗೆ ನೀರಾಕುವುದನ್ನು ಕಂಡು ಏಯ್ ಕವನ ನೆನ್ನೆ ಇನ್ನು ಅಷ್ಟೊಂದು ಮಳೆ ಬಂದಿದೆ ಯಾಕೆ ನೀರಾಕ್ತಿದಿಯಾ? ಅಕ್ಕನ ಧ್ವನಿ ಕೇಳಿ ಯಾವುದೊ ಗುಂಗಿನಲ್ಲಿದ್ದ ಕವನ ಎಚ್ಚೆತ್ತವಳಂತೆ ಹೋ ಎನಕ್ಕ ಆಗ್ಲೆ ಸ್ನಾನ ಆಯ್ತಾ? ಆಯ್ತು ನೀನೇನು ಏನೊ ಯೋಚ್ನೆ ಮಾಡ್ಕೊಂಡು!!!!! ನೆನ್ನೆಇನ್ನು ಅಷ್ಟೊಂದು ಮಳೆ ಬಂದಿದ್ರು ಎಷ್ಟೊಂದು ನೀರಾಕ್ತಾ ಇದೀಯಲ ಯಾಕೆ? ಕವನ ಅಕ್ಕನನ್ನೆ ದಿಟ್ಟಿಸಿದಳು ಮುಖದಲ್ಲಿ ಏನೊ ಹೊಸತನ ಕಂಡಂತಾಯಿತು ನಕ್ಕು ಸುಮ್ಮನಾದಳು, ಎಲ್ಲದಕ್ಕು ನಕ್ತೀಯ ನಡಿ ದೇವಸ್ಥಾನಕ್ಕೋಗ್ ಬರೋಣ exam ಅಂತ ದೇವಸ್ಥಾನಕ್ಕು ಇಷ್ಟ್ ದಿನ ಬಂದಿಲ್ಲ ಕೈ ಇಡಿದು ಎಳೆದಳು ಸುಮ.........ತಡಿಯಕ್ಕ ಪೈಪ್ ಕಟ್ಟಿಟ್ಟು ಅಮ್ಮಂಗೇಳ್ ಬರ್ತೀನಿ ಸರ ಸರ ನಡೆದಳು ಕವನ ಓಳಗೆ.......ಅಮ್ಮ ಅಮ್ಮ ...........ಅಕ್ಕ ನಾನು ದೇವಸ್ಥಾನಕ್ಕೆ ಹೋಗ್ ಬರ್ತೀವಿ...........ಸರಿ ಕವನ ಹುಷಾರು ಬೇಗ ಬಂದ್ಬಿಡಿ ಮಳೆ ಬಂದ್ಬಿಟ್ಟಾತು.........ಸರಿ ಎನ್ನುವಂತೆ ಬೇಗ ಬೇಗ ಗಾಳಿಗೆ ಹಾರುತ್ತಿದ್ದ ಮುಂಗುರುಳನ್ನು ಸರಿ ಮಾಡಿಕೊಂಡು ಹೊರ ನಡೆದಳು. ಆಗಲೆ ಪಕ್ಕದ ಮನೆ ರಾಧಾಳು ಜೊತೆಗೂಡಿದ್ದಳು. ಮೊವರು ಮಾತನಾಡುತ್ತಾ ಸಾಗಿದರು. ಕವನ ಅಂತು ಎಮ್ ಕಾಮ್ ಮುಗುಸ್ದೆ, ಮುಂದೇನ್ ಮಾಡ್ಬೇಕು ಅಂತಾ ಇದೀಯ? ಇನ್ನು ಯೋಚ್ನೆ ಮಾಡಿಲ್ಲ ರಾಧ ಸಧ್ಯಕ್ಕೆ ಅಕ್ಕನ ಮಧ್ವೆ ಬಗ್ಗೆ ಯೋಚ್ನೆ ಮಾಡ್ತಾಇದೀನಿ....... ಮಧ್ವೆ? ಯಾರ್ದೆ ನಮ್ ಸುಮಿದ? ಯೇ ಸುಮಿ ಕಳ್ಳಿ ನನಿಗೇನು ಹೇಳ್ಲೆ ಇಲ್ಲ? ಅಯ್ಯೋ ಇನ್ನು ಎಂಥಾದ್ದು ಇಲ್ವೆ ನೆನ್ನೆ ಇನ್ನು ಒಂದು offer ಬಂದಿದೆ ಅಷ್ಟೆ ಮರೆತ ಚಂದ್ರಕಾಂತನನ್ನು ನೆನೆಯುತ್ತ ನಸು ನಾಚಿದಳು.ಹಾಗೆ ತಾಮಾಷೆಯಾಗೆ ಮಾತನಾಡುತ್ತ ದೇವಸ್ಥಾನ ಸೇರಿದರು.

ಇತ್ತ ರಾಮಮುರ್ತಿ ಸ್ನಾನ ಪೂಜೆ ಮುಗಿಸಿ ಸ್ಪಟಿಕಕ್ಕೆ ಹೋಗಲು ತಯಾರಿ ನಡೆಸಿದ್ದರು...ಶಾರು ಸಂಜೆ ಬೇಗ ಬರ್ತೀನಿ ರೆಡಿಯಾಗಿರು ಹೋಗಿ ಜೋಯಿಸ್ರತ್ರ ಜಾತಕ ತೋರಿಸ್ಕೋಂಡು ಬರೋಣ............ಸರಿ ಆಗೆ ಆಗ್ಲಿ ಎನ್ನುತ್ತ ತಿಂಡಿ ತಟ್ಟೆ ತಂದು ಕೈಗಿಟ್ಟಳು ಬಿಸಿ ಬಿಸಿ ಉಪ್ಪಿಟ್ಟು ಕೇಸರೆ ಭಾತು ಸ್ವಾಧ ಭರಿತ ಅದರ ಪರಿಮಳ ಸುತ್ತಲು ಪಸರಿಸಿತ್ತು. ಹೆಂಡತಿಯ ಕೈ ರುಚಿ ನೆನೆದು ಪ್ರೀತಿಯಿಂದ ಅವಳೆಡೆ ನೋಡಿ ಶಾರು ನಿನ್ ಕೈ ರುಚಿನೆ ರುಚಿ ಕಣೆ .....ನೀವ್ ಬಿಡಿ ಎಲ್ಲಾದುನ್ನು ಹೊಗುಳ್ತೀರ ಯಾವ್ದುನ್ನ ಚೆನಾಗಿಲ್ಲ ಅಂದಿದೀರ ಗಂಡನ ಗುಣ ನೆನೆದು ನಗುತ್ತ ಮಾತನಾಡುತ್ತಿರಲು.ಮಕ್ಕಳಿಬ್ಬರು ಒಳ ಬಂದರು.........ಎಲ್ಲರು ಒಟ್ಟಿಗೆ ತಿಂಡಿ ತಿಂದರು.

ರಾಮಮುರ್ತಿಯವರು ಸ್ಪಟಿಕವನ್ನು ತಲುಪಿ ರಾಯರನ್ನು ಅರಸಿದರು ಯಾವಗಲು ತಾವು ಬರುವುದಕ್ಕಿಂತ ಮೊದಲೆ ತಯಾರಾಗಿ ಬಂದು ಆಳು ಕಾಳಿನ ಜೊತೆ ಮಾತುಕತೆಯಲ್ಲಿ ತೊಡಗಿರುತ್ತಿದ್ದ ರಾಯರು ಇಂದು ಕಾಣಲಿಲ್ಲ, ಕಾರಣವೇನೆಂದು ತಿಳಿಯಲು ಸೀದ ಮನೆಗೆ ನಡೆದರು,ಆಗಲೆ ಭವಾನಿ ಮಗ ಮನೆಗೆ ಬಂದೆ ಬಿಟ್ಟ ಎನ್ನುವಷ್ಟು ಸಂತಸದಲ್ಲಿ ಮನೆಯೆಲ್ಲ ಓಡಾಡುತಿದ್ದಳು ಅವರ ಸಂಭ್ರಮವನ್ನು ಕಂಡು ಪ್ರಶ್ನಾರ್ಥಕವಾಗಿ ರಾಯರು ಇದಾರ ಮನೇಲಿ ? ಎಂದು ಕೇಳಿದರು. ಓಹೋ ರಾಮಮುರ್ತಿಯವರು ತನ್ನ ಪಾಲಿನ ಆಪದ್ಬಾಂದವ ಎನ್ನುವಂತೆ ಬನ್ನಿ ಕೂತ್ಕೊಳಿ.. ಕರಿತೀನಿ ಆತ್ಮೀಯತೆಯಿಂದ ಕರೆದದನ್ನು ನೋಡಿ ಎನೋ ವಿಷೇಶವಿರಬೇಕೆಂದು ಕೊಂಡರು.ರಂಗನಾಥ್.............ರಂಗನಾಥ್ ........ಕೂಗಿದಳು ಭವಾನಿ ಬಂದೆ ಎನ್ನುವಂತೆ ಇಳಿದು ಬಂದರು ರಾಯರು........ಯಾವಾಗಲು ನಗು ನಗುತಿದ್ದ ಅವರ ಮುಖದಲ್ಲಿ ಕಾಣುತಿದ್ದ ಚಿಂತೆಯ ಗೆರೆಗಳನ್ನು ಕಂಡು ರಾಮಮುರ್ತಿಗೆ ಆಶ್ಚ್ರ್ಯವಾಯಿತು ಕಾರಣವೇನಿರಬಹುದು ತಲೆಕೆಡಸಿಕೊಂಡರು.ಭವಾನಿಯೆ ಇಬ್ಬರಿಗು ಬಾದಾಮಿ ಹಾಲು ತೆಗೆದು ಕೊಂಡು ಬಂದಳು, ಒತ್ತಾಯ ಪೂರ್ವಕವಾಗಿ ನಗುತ್ತ ರಾಯರು any special ಭವಾನಿ ಎಂದು ಕೇಳಿದರು ನಕ್ಕು ತಲೆಯಾಡಿಸಿದಳು ಭವಾನಿ. ಎನೋ ಮಾತನಾಡಲು ಮುಂದಾದ ಭವಾನಿಯನ್ನು ಅವಸರವಸರವಾಗಿ ಹಾಲು ಕುಡಿದು ಒತ್ತಾಯವಾಗಿ ರಾಮಮುರ್ತಿಗೆ ಇಲ್ಲದ ವಿಷಯವನ್ನು ಕೇಳುತ್ತ ಹೊರನಡೆದರು ರಾಯರು. ರಾಯರ ಈ ವರ್ತನೆ ರಾಮಮುರ್ತಿಗೆ ಒಗಟಾಗೆ ಕಂಡಿತು.

Rating
No votes yet

Comments