ಹೀರೋ ಆಗುವುದು ಬಹಳಾ ಕಷ್ಟ, ಝೀರೋ ಬರೀ ಸುಲಭ.

ಹೀರೋ ಆಗುವುದು ಬಹಳಾ ಕಷ್ಟ, ಝೀರೋ ಬರೀ ಸುಲಭ.

ಸೌಂದರ್ಯ ವರ್ಷಗಳುರುಳಿದಂತೆ ಕಮ್ಮಿಯಾಗುತ್ತಾ ಹೋಗುವುದು ಸಾಮಾನ್ಯ.ಆದರೆ ಕೆಲವರಲ್ಲಿ ವಯಸ್ಸಾದಂತೆ ಸೌಂದರ್ಯ ವರ್ಧಿಸುತ್ತಾ ಹೋಗುವುದು.
ಹೇಮಾಮಾಲಿನಿ ಆ ಕಾಲದ 'ಡ್ರೀಮ್ ಗರ್ಲ್'ಈ ಕಾಲಕ್ಕೂ ಅವಳ ಮಗಳಿಗಿಂತ ಸುಂದರವಾಗಿದ್ದಾಳೆ.ರೇಖಾ ವಯಸ್ಸು ಮುಂದೆ ಹೋಗೇ ಇಲ್ಲ ಅನಿಸುತ್ತದೆ.ಅಮಿತಾಭ್ ಬಿಳಿಗಡ್ಡದಲ್ಲಿಯೂ ಯುವ ಅಭಿಷೇಕ್ ಗಿಂತ ಜಾಸ್ತಿ ಅಭಿಮಾನಿಗಳನ್ನು ಹೊಂದಿರುವನು.
ಭಾರತದಾದ್ಯಂತ ಎಲ್ಲರೂ ದಿನವೂ ನೋಡುವ ಅತೀ ಸುಂದರ ಮುಖ-"ಗಾಂಧೀಜೀ"ಯದ್ದು.
ಗಾಂಧೀಜಿ,ಶಾಸ್ತ್ರೀ,ವಲ್ಲಭ ಭಾಯಿ ಪಟೇಲ್,ಹೋಮಿ ಜಹಾಂಗೀರ್ ಬಾಬಾ,ಶಿವರಾಮ ಕಾರಂತ,ಎಮ್.ಸಿ.ಮೋದಿ,ಕೆ.ಆರ್.ನಾರಾಯಣನ್ ಎಲ್ಲಾ ವಯಸ್ಸಿನಲ್ಲಿ ಎಷ್ಟು ಸುಂದರವಿದ್ದರೋ ವಯಸ್ಸಾದ ಮೇಲೆ ಇನ್ನೂ ಸುಂದರವಾಗಿ ಕಾಣುತ್ತಿದ್ದರು.
ನಮ್ಮ ನಿಮ್ಮೆಲ್ಲರ ಮೆಚ್ಚಿನ ಮಾಜಿ ರಾಷ್ಟ್ರಪತಿ ಕಲಾಂ,ಅವರ ಹೈರ್ ಸ್ಟೈಲ್ ಸರಿ ಇಲ್ಲ ಎಂದು ಅನೇಕರು ಹೇಳಿದರೂ,ಅದೇ ರೂಪು ಪುನಃ ರಾಷ್ಟ್ರಪತಿಯಾಗಬೇಕೆಂದು ಬಯಸಲಿಲ್ಲವೆ?
ಮೇಲೆ ಹೇಳಿದ ಮಹನೀಯರೆಲ್ಲರಲ್ಲೂ ಸಾಮಾನ್ಯತೆ ಎಂದರೆ-"ಎಲ್ಲರೂ ಅಕ್ಟೋಬರ್ ತಿಂಗಳಲ್ಲಿ ಜನಿಸಿದವರು."(ರಿಟೈರ್ ಆಗುವ ಹೊತ್ತಿಗೆ ಒನ್ ಡೇ ಮ್ಯಾಚಲ್ಲಿ ಸೆಂಚುರಿ ಹೊಡೆದ ಅನಿಲ್ ಕುಂಬ್ಲೆ ಸಹ ಅಕ್ಟೋಬರ್ ನಲ್ಲಿ ಜನಿಸಿದ್ದು)
ಈಗ ಮುಖ್ಯ ವಿಷಯ-"ಜನಪ್ರಿಯತೆ".ಜನಪ್ರಿಯರಾಗುವುದು ಸುಲಭದ ಮಾತಲ್ಲ.ಅದನ್ನು ಕೊನೆತನಕ ಉಳಿಸಿಕೊಳ್ಳುವುದು ಬಹಳ ಕಷ್ಟ.ಸಿನೆಮಾದವರನ್ನು ಬಿಟ್ಟು ಮೇಲೆ ಹೇಳಿದ ಉಳಿದವರು ಜನಪ್ರಿಯರಾದುದು ಹೇಗೆ ಎಲ್ಲರಿಗೂ ಗೊತ್ತಿದೆ.ಜನಪ್ರಿಯತೆಯನ್ನು ನಂತರವೂ ಉಳಿಸಿಕೊಂಡಿದ್ದು ಈ ಗುಣಗಳಿಂದ- ಅವರ ಉತ್ತಮ
ನಡವಳಿಕೆ,ಅಹಂಕಾರವಿಲ್ಲದಿರುವುದು,ಮಾತಿಗೆ ತಪ್ಪದಿರುವುದು,ಹಿಡಿದ ಕೆಲಸ ಸಾಧಿಸುವಲ್ಲಿ ಇರುವ ಹಠ... ಗಾಂಧೀಜಿ ಉಪವಾಸ ಮಾಡುತ್ತಾರೆ ಎಂದ ಕೂಡಲೇ ಕೆಲಸವಾದಂತೆ,ಬ್ರಿಟಿಷರು ನಡುಗುತ್ತಿದ್ದರು,ನೆಹರು,ಪಟೇಲರು ಗಾಬರಿಯಾಗಿ ಓಡಿಬಂದು ಏನಾಗಬೇಕೆಂದು ಕೇಳುತ್ತಿದ್ದರು.ಅದೇ ಈಗಿನ ಮಹಾತ್ಮರು 'ನನ್ನ ಹೆಣದ ಮೇಲೆ',"ನನ್ನ ಹೆಣದಮೇಲೆ.."ಎಂದು ಅತ್ತು ಕರೆದರೂ ಯಾರೂ ಕ್ಯಾರೆ ಮಾಡುವುದಿಲ್ಲ.
ಕಾರಂತರಿರಲಿ,ಕಲಾಂರಿರಲಿ,ಪುಟ್ಟ ಮಕ್ಕಳ ಸ್ಕೂಲ್ ನಲ್ಲಿ ಮಾತನಾಡುವುದಾದರೂ,ತಯಾರಿ ನಡೆಸಿಯೇ ಹೋಗುವರು.ಅದೇ,ಯಾವ ಒಂದು,ಜನನಾಯಕ,ಏನು ಈ ಶಬ್ದಗಳ ನಡುವೆ ಏನು ಹೇಳುತ್ತಾರೆಂದು ಗೊತ್ತೇ ಆಗುವುದಿಲ್ಲ.
ಶ್ರೀಶಾಂತ್,ಹರ್ಭಜನ್ ಇತ್ಯಾದಿ ಸ್ಲೆಡ್ಜಿಂಗ್ ನ್ನು ಆಸ್ಟ್ರೇಲಿಯದವರಿಂದ ಕಲಿಯುವ ಬದಲು ಮೈದಾನದಲ್ಲಿ ಹೇಗಿರಬೇಕೆಂದು ಕುಂಬ್ಲೆಯನ್ನು ನೋಡಿ ಕಲಿಯಬೇಕು.
ಹೀರೋ ಆಗುವುದು ಬಹಳಾ ಕಷ್ಟ.ಝೀರೋ ಆಗುವುದು ಬಹಳ ಸುಲಭ.

Rating
No votes yet