ಪುಸ್ತಕ ಪರಿಚಯ

ಲೇಖಕರು: addoor
November 18, 2021
ಅಮೆರಿಕ ಕನ್ನಡ ಕೂಟಗಳ ಆಗರ (“ಅಕ್ಕ”) ೮ನೇ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟಿಸಿದ ಒಂಬತ್ತು ಆಹ್ವಾನಿತ ಕತೆಗಳ ಸಂಕಲನ ಇದು. ಇದರ ಬಗ್ಗೆ ಸಂಪಾದಕ ಮಂಡಲಿಯ ಪರವಾಗಿ ಪ್ರಧಾನ ಸಂಪಾದಕರು ಬರೆದ ಕೆಲವು ಮಾತುಗಳು: “ಈ ಕಥಾಸಂಕಲನಕ್ಕಾಗಿ ನಮಗೆ ಲಭ್ಯವಿದ್ದ ಅನುಕೂಲತೆಗಳ ಇತಿಮಿತಿಯಲ್ಲಿ ಪ್ರಚಲಿತ ಲೇಖಕರನ್ನು ಸಂಪರ್ಕಿಸಿ ಈ ಕಥೆಗಳನ್ನು ಪಡೆದುಕೊಳ್ಳಲಾಯಿತು. ಬೊಗಸೆಯಲ್ಲಿ ಸಾಗರದ ನೀರನ್ನು ಹಿಡಿದು, ಇದೇ ಸಾಗರವೆನ್ನುವುದು ದುಸ್ಸಾಹಸವಾದಿತು. ಒಟ್ಟು ಒಂಬತ್ತು ಕಥೆಗಳ ಈ ಕಥಾಸಂಕಲನವನ್ನು…
ಲೇಖಕರು: Ashwin Rao K P
November 16, 2021
ಸಂಪಟೂರು ವಿಶ್ವನಾಥ್ ಅವರು ಜಗತ್ತಿನ ೩೬೫ ಶ್ರೇಷ್ಠ ವಿಜ್ಞಾನಿಗಳು ಹಾಗೂ ಗಣಿತಜ್ಞರ ಮಾಹಿತಿಯನ್ನು ಈ ಪುಸ್ತಕದಲ್ಲಿ ನೀಡಿದ್ದಾರೆ. ಈ ಪುಸ್ತಕದಲ್ಲಿ ವಿಜ್ಞಾನ, ಗಣಿತ-ಶೋಧಕರು, ತಂತ್ರಜ್ಞಾನಿಗಳು, ಆವಿಷ್ಕಾರರು ಇವರೆಲ್ಲರ ವಿವರಗಳನ್ನು ಹಾಗೂ ಭಾವಚಿತ್ರ ಸಹಿತ ನೀಡಿದ್ದಾರೆ. ಲೇಖಕರು ಈ ವಿವರಗಳನ್ನು ನೀಡುವಾಗ ಎಲ್ಲೂ ಆ ವಿಜ್ಞಾನಿಯ ಹೆಸರನ್ನು ನಮೂದಿಸಿಲ್ಲ. ಒಂದು ರೀತಿಯಲ್ಲಿ ಕ್ವಿಝ್ ತರಹ ‘ವಿವರ ಓದಿ, ಚಿತ್ರ ನೋಡಿ, ಹೆಸರಿಸಿ' ಎಂದು ಬರೆದಿದ್ದಾರೆ. ನಿಮಗೆ ಗೊತ್ತಾಗದಿದ್ದರೆ ಪುಸ್ತ್ರಕದ…
ಲೇಖಕರು: Ashwin Rao K P
November 13, 2021
ಪವಾಡ ಪುರುಷರಾದ ಶಿರಡಿಯ ಸಾಯೀ ಬಾಬಾ ಬಗ್ಗೆ ಮಕ್ಕಳಿಗಾಗಿ ಒಂದು ಪುಟ್ಟ ಪುಸ್ತಕವನ್ನು ‘ಬಾಲ ಸಾಹಿತ್ಯ ಮಾಲೆ' ಮೂಲಕ ಸಪ್ನ ಬುಕ್ ಹೌಸ್ ನವರು ಹೊರತಂದಿದ್ದಾರೆ. ಸಾಯೀ ಬಾಬಾ ಕಥೆಯನ್ನು ಕನ್ನಡಕ್ಕೆ ಅನುವಾದ ಮಾಡಿದವರು ಗಿರಿಜಾ ಶಾಸ್ತ್ರಿಯವರು. ಸಾಯೀ ಬಾಬಾ ಅವರ ಜೀವನದ ಬಗ್ಗೆ ಪುಟ್ಟ ಪುಟ್ಟ ಘಟನೆಗಳನ್ನು ರೇಖಾಚಿತ್ರಗಳ ಮೂಲಕ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.  ಸಾಯೀ ಬಾಬಾ ಅವರ ಪರಿಚಯದಲ್ಲಿ ಹೀಗೆ ಬರೆದಿದ್ದಾರೆ “ಮತಗಳನ್ನೂ ಮೀರಿ ಹೋದ ಶಿರಡಿ ಸಾಯೀಬಾಬಾ ಎಂಬ ಭಾರತದ ಸಂತರು, ಸರಳವಾದ…
ಲೇಖಕರು: addoor
November 11, 2021
ಇದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು “ಶ್ರೀನಿವಾಸ" ಕಾವ್ಯನಾಮದಲ್ಲಿ ಬರೆದಿರುವ ಎರಡು ಕವನ ಸಂಕಲನಗಳ ಸಂಯುಕ್ತ ಪುಸ್ತಕ. ಮೊದಲ ಪ್ರಕಟಣೆ: ೧೯೩೧ರಲ್ಲಿ “ಚೆಲುವು" ಮತ್ತು ೧೯೪೬ರಲ್ಲಿ “ಸುನೀತ”. “ಚೆಲುವು" ಸಂಕಲನದಲ್ಲಿ ೧೪ ಕವನಗಳಿವೆ. ಎಲ್ಲವೂ ಮನಮುಟ್ಟುವ ಕವನಗಳು. “ಬೆಳವನ ಹಕ್ಕಿ” ಎಂಬ ಕವನದ ಆರಂಭದ ಸಾಲುಗಳು ಹೀಗಿವೆ: ತೋಪಿನ ಮರದಲಿ ಮೊಳಗಲು ತೊಡಗಿವೆ ಬೆಳವನ ಹಕ್ಕಿ ಸಖಿ. ಓಪನ ಓಪಳ ಕೂಗಿದು ಜಗದಲಿ ಹಳೆ ಕಾಲದ ಕೂಗು. (ಎರಡನೆಯ ಚರಣ) ಕೂಯೆನ್ನುವುದಿದು ಕೂಯೆನ್ನುವುದದು ಅರೆ ಅರೆ…
ಲೇಖಕರು: Ashwin Rao K P
November 11, 2021
‘ಕಪಿಧ್ವಜ ಮೊದಲಾದ ಕೆಲವು ಸತ್ಯಸಾಯೀ ಕತೆಗಳು' ಈ ಕೃತಿಯನ್ನು ರಚಿಸಿದವರು ಖ್ಯಾತ ಸಾಹಿತಿ ಜಿ.ಪಿ.ರಾಜರತ್ನಂ ಅವರು. ಇವರು ಮಕ್ಕಳ ಸಾಹಿತಿ ಎಂದೂ ಖ್ಯಾತಿಯನ್ನು ಪಡೆದಿದ್ದಾರೆ. ಭಗವಾನ್ ಶ್ರೀ ಸತ್ಯಸಾಯಿಬಾಬಾ ಅವರ ‘Sathya Sai Speaks’ ಸಂಪುಟಗಳಿಂದ ಈ ಕತೆಗಳನ್ನು ಆಯ್ದುಕೊಳ್ಳಲಾಗಿದೆ. ಈ ಕತೆಗಳು ‘ಸುಧಾ’ ಹಾಗೂ ‘ಮಯೂರ' ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟವಾಗಿವೆ.  ಕೃತಿಯ ಬಗ್ಗೆ ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು ತಮ್ಮ ಬೆನ್ನುಡಿಯಲ್ಲಿ “ತಮ್ಮ ಅನ್ಯದುರ್ಲಭ ವ್ಯಕ್ತಿತ್ವ…
ಲೇಖಕರು: Ashwin Rao K P
November 09, 2021
‘ನರರಾಕ್ಷಸ' ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ…