ಪುಸ್ತಕ ಪರಿಚಯ

ಲೇಖಕರು: Ashwin Rao K P
July 02, 2020
ಆರೋಗ್ಯವೇ ಭಾಗ್ಯ. ನಮ್ಮ ಸುತ್ತಮುತ್ತಲಿನ ತರಕಾರಿ, ಹಣ್ಣು ಹಂಪಲುಗಳಲ್ಲಿರುವ ರೋಗ ನಿವಾರಕ ಗುಣಗಳನ್ನು ಈ ಪುಸ್ತಕದ ಮೂಲಕ ನಮ್ಮ ಮುಂದೆ ಇರಿಸಿದ್ದಾರೆ ಡಾ. ಎಂ.ಎಚ್. ಸವಿತ ಇವರು. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದುಕೊಂಡು ತಮ್ಮ ಅನುಭವದ ನೆಲೆಗಟ್ಟಿನಲ್ಲಿ ಈ ಪುಸ್ತಕ ಬರೆದಿದ್ದಾರೆ. ನಿತ್ಯ ಬಳಸುವ ಆಹಾರದಲ್ಲಿ ಎಷ್ಟೊಂದು ವೈವಿಧ್ಯಮಯ ಪೋಷಕಾಂಶಗಳಿವೆ. ‘ಊಟ ಬಲ್ಲವನಿಗೆ ರೋಗವಿಲ್ಲ' ಎಂಬುದು ಮೊದಲಿನಿಂದ ಚಾಲ್ತಿಯಲ್ಲಿರುವ ಗಾದೆ. ನಮ್ಮ ಊಟದಲ್ಲಿರುವ…
8
ಲೇಖಕರು: Ashwin Rao K P
June 29, 2020
ಹಿರಿಯ ಲೇಖಕರಾದ ರಾಜಾರಾಂ ತಲ್ಲೂರು ಅವರ ನಾಲ್ಕನೇ ಕೃತಿ ಇದು. ನುಣ್ಣನ್ನ ಬೆಟ್ಟ (೨೦೧೭), ತಲ್ಲೂರು ಎಲ್ ಎನ್ (೨೦೧೮) ಮತ್ತು ಏನಿದು ಪೌರತ್ವ ತಿದ್ದುಪಡಿ ಕಾಯಿದೆ (೨೦೧೯) ರಾಜಾರಾಂ ತಲ್ಲೂರು ಅವರ ಪ್ರಕಟಿತ ಕೃತಿಗಳು. ಇವರಿಗೆ, ಇವರ ಕೃತಿಗಳಿಗೆ ೨೦೧೭ರಲ್ಲಿ ಅಮ್ಮ ಪ್ರಶಸ್ತಿ ಮತ್ತು ೨೦೨೦ರಲ್ಲಿ ಶಿವರಾಮ ಕಾರಂತ ಪುರಸ್ಕಾರ ಸಂದಿದೆ. ದುಪ್ಪಟ್ಟು ಆಕರ್ಷಕ ಮತ್ತು ಕುತೂಹಲ ಮೂಡಿಸುವ ಮುಖಪುಟ ಚಿತ್ರದೊಂದಿಗೆ ಗಮನಸೆಳೆಯುತ್ತದೆ. ತಲ್ಲೂರು ಅವರ ಕೃತಿ ಎಂದರೆ ಸಹಜವಾಗಿಯೇ ಅದು ಅಚ್ಚುಕಟ್ಟಾಗಿ…
11
ಲೇಖಕರು: Ashwin Rao K P
June 27, 2020
ಸ್ವಾಮಿ ಮತ್ತು ಅವನ ಸ್ನೇಹಿತರು ಖ್ಯಾತ ಸಾಹಿತಿ ಆರ್.ಕೆ.ನಾರಾಯಣ್ ಅವರ ಮಾಲ್ಗುಡಿ ಡೇಸ್ ಎಂಬ ಕಥಾ ಸಂಕಲನದ ಒಂದು ಕಥಾ ಭಾಗ. ಕನ್ನಡದ ಖ್ಯಾತ ನಟ, ನಿರ್ದೇಶಕ ಶಂಕರ್ ನಾಗ್ ಈ ಕಥೆಗಳನ್ನು ಕಿರುತೆರೆಗೆ ಧಾರವಾಹಿ ರೂಪದಲ್ಲಿ ತಂದಿದ್ದು ಎಲ್ಲರಿಗೂ ತಿಳಿದ ವಿಷಯ. ಹಿಂದಿಯಲ್ಲಿ ಬಹಳ ಹಿಂದೆ ಪ್ರಸಾರವಾದ ಮಾಲ್ಗುಡಿ ಡೇಸ್ ಈಗ ಮತ್ತೆ ಕನ್ನಡಕ್ಕೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.  ಸ್ವಾಮಿ ಮತ್ತು ಅವನ ಸ್ನೇಹಿತರು ಎಂಬ ಕಥೆಯು ಸ್ವಾಮಿನಾಥನ್ ಎಂಬ ೧೦ ವರ್ಷದ ಮುಗ್ಧ ಬಾಲಕನ ಸುತ್ತ…
12
ಲೇಖಕರು: Ashwin Rao K P
June 20, 2020
ನವಕರ್ನಾಟಕ ಪ್ರಕಾಶನದವರು ಡಾ. ಸಿ.ಆರ್. ಚಂದ್ರಶೇಖರ್ ಇವರ ಸಂಪಾದಕತ್ವದಲ್ಲಿ ವ್ಯಕ್ತಿ ವಿಕಸನ ಮಾಲೆ ಈ ಮಾಲಿಕೆಯಲ್ಲಿ ಹೊರತಂದ ಪುಸ್ತಕವೇ ‘ಮನಸ್ಸಿನ ಮ್ಯಾಜಿಕ್'. ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದ ಅಡ್ಡೂರು ಕೃಷ್ಣ ರಾವ್ ಇವರ ಪ್ರವೃತ್ತಿ ಬರವಣಿಗೆ. ಮಂಗಳೂರಿನ ಬಳಕೆದಾರರ ವೇದಿಕೆಯ ಸಂಚಾಲಕರಾಗಿ ಹಲವಾರು ಮಂದಿಗೆ ಸಲಹೆ ಸಹಾಯ, ಮಾರ್ಗದರ್ಶನ ಮಾಡಿಕೊಟ್ಟಿದ್ದಾರೆ. ಕೃಷಿಯ ಬಗ್ಗೆಯೂ ಆಸಕ್ತಿ ಇರುವ ಇವರು ‘ಹಸುರು ಹೆಜ್ಜೆ' ಎಂಬ ಕೃತಿಯನ್ನು ಹೊರತಂದಿದ್ದಾರೆ. ದಿನ ಹಾಗೂ ಮಾಸ…
13
ಲೇಖಕರು: Ashwin Rao K P
June 16, 2020
‘ಮನದಾಚೆ ದೂಡಿದ ಬಯಕೆ ಕನಸಾಗಿ ಕಾಡುವುದೇಕೆ?’ ಎಂಬ ಸಾಲುಗಳು ‘ರಾಜ್ ಲೀಲಾ ವಿನೋದ' ಪುಸ್ತಕದ ಮುಖಪುಟದಲ್ಲೇ ಮುದ್ರಿತವಾಗಿವೆ. ಕನ್ನಡದ ವರನಟರಾದ ಡಾ. ರಾಜ್ ಕುಮಾರ್ ಇವರ ತೀರಾ ಖಾಸಗಿ ಬದುಕಿನ ಪುಟಗಳನ್ನು ಖ್ಯಾತ ಲೇಖಕ, ಪತ್ರಕರ್ತ ರವಿ ಬೆಳಗೆರೆಯವರು ಅನಾವರಣ ಮಾಡಿದ್ದಾರೆ. ಸ್ವತಃ ಲೀಲಾವತಿಯವರೇ ತಮ್ಮ ಬದುಕಿನ ಕರುಣಾಜನಕ ಕಥೆಯನ್ನು ಈ ಲೇಖಕರ ಬಳಿ ತೆರೆದಿಟ್ಟಿದ್ದಾರೆ. ಅಣ್ಣಾವ್ರು ಬದುಕಿರುವಾಗ ಈ ಪುಸ್ತಕ ಹೊರ ಬಂದಿದ್ದರೆ ಅದರ ಕಥೆಯೇ ಬೇರೆ ಇತ್ತು. ಆದರೆ ಈ ಸಮಯ ಬದಲಾಗಿದೆ. ಸಮಾಜವೂ ಇಂಥಹ…
33
ಲೇಖಕರು: Ashwin Rao K P
June 13, 2020
‘ಕುಡು ಮಲ್ಲಿಗೆ’ ನಾಮಾಂಕಿತದಿಂದ ಖ್ಯಾತಿ ಪಡೆದ ಕೆ.ಕೃಷ್ಣ ಶೆಟ್ಟಿಯವರದ್ದು ಬಹುಮುಖ ಪ್ರತಿಭೆ. ಹುಟ್ಟಿದ್ದು ಮಲೆನಾಡಿನ ಕುಡುಮಲ್ಲಿಗೆಯಲ್ಲಿ. ಇವರು ಕಲಿತದ್ದು ಕಮ್ಮಿಯಾದರೂ ಅನುಭವ ಇವರನ್ನು ಪಕ್ವರನ್ನಾಗಿಸಿದೆ. ವೃತ್ತಿ ಸಂಬಂಧ ಮುಂಬೈ, ಉಡುಪಿಗಳಲ್ಲಿ ತಿರುಗಾಡಿದರೂ ನೆಲೆ ನಿಂತದ್ದು ಮಂಗಳೂರಿನಲ್ಲಿ. ಪತ್ರಿಕೆಯ ವರದಿಗಾರನಾಗಿ, ಅಂಕಣಗಾರನಾಗಿ, ಉಪಸಂಪಾದಕನಾಗಿ, ಯಕ್ಷಗಾನ ಕಲೆಯ ಉಪಾಸಕರಾಗಿ, ಕಲಾವಿಮರ್ಶಕರಾಗಿ ಇವರು ದುಡಿದಿದ್ದಾರೆ. ‘ಯಕ್ಷಗಾನ ಪುರಾಣ ಜ್ಞಾನ ದರ್ಶನ' ಎಂಬ ಕೃಉತಿ ಯಕ್ಷಗಾನ…
18