ಪುಸ್ತಕ ಪರಿಚಯ

ಲೇಖಕರು: Shreerama Diwana
September 18, 2020
ಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡಿರಿಳ ಆತ್ಮಕಥೆ “ಮರುಭೂಮಿಯ ಹೂ”. ವಾರಿಸ್ ಡಿರಿ ಜಗತ್ತಿನ ಜಾಹಿರಾತು ಲೋಕದಲ್ಲಿ ಒಂದು ಅಚ್ಚಳಿಯದ ಹೆಸರು. ಆತ್ಮಕಥೆಯ ವಸ್ತು, ವಿವರ ಹಾಗೂ ಜಗತ್ ಪ್ರಸಿದ್ಧ ರೂಪದರ್ಶಿಯಾಗಿದ್ದುಕೊಂಡು ವಾರಿಸ್ ಡಿರಿ ತೆರೆದಿಟ್ಟ ತನ್ನ ಬದುಕಿನ ಬಡತನ, ಅಪಮಾನ, ಅತ್ಯಾಚಾರದಂತಹ ಸಂಗತಿಗಳು ಹಾಗೂ ಆಫ್ರಿಕಾದ ಬುಡಕಟ್ಟು ಜನಾಂಗಗಳಲ್ಲಿ ಆಚರಣೆಯಲ್ಲಿರುವ ಯೋನಿ ಛೇದನ ಎಂಬ ಕ್ರೂರ ಪದ್ಧತಿ ಇವೆಲ್ಲವುಗಳಿಂದಾಗಿ ಈ ಕೃತಿಯು ಓದುಗರನ್ನು ಕಾದಂಬರಿಯಂತೆ ಓದಿಸಿಕೊಂಡು ಹೋಗುವ ಗುಣವನ್ನು…
22
ಲೇಖಕರು: Ashwin Rao K P
September 17, 2020
ಬೆಂಗಳೂರಿನ ಛಂದ ಪುಸ್ತಕದವರು ಪ್ರತೀ ವರ್ಷ ಉದಯೋನ್ಮುಖ ಬರಹಗಾರರ ಪುಸ್ತಕಗಳನ್ನು ಮುದ್ರಿಸುತ್ತಾರೆ. ೨೦೨೦ರ ಸಾಲಿನಲ್ಲಿ ಬಿಡುಗಡೆಯಾದ ೪ ಪುಸ್ತಕಗಳಲ್ಲಿ ಒಂದು ಪುಸ್ತಕವೇ ಹರೀಶ್ ಹಾಗಲವಾಡಿಯವರ ಕಾದಂಬರಿ ಋಷ್ಯಶೃಂಗ. ತುಮಕೂರಿನ ಬಳಿಯ ಹಾಗಲವಾಡಿಯವರಾದ ಹರೀಶ್ ಇವರಿಗೆ ವಿದ್ಯಾಭ್ಯಾಸದ ಕಾಲದಿಂದಲೂ ಸಂಸ್ಕೃತಿ, ಆಧ್ಯಾತ್ಮಗಳ ಸೆಳೆತ. ಈಗ ಪ್ರಸ್ತುತ ಸಂಸ್ಕೃತ ಅಧ್ಯಾಪಕರಾಗಿ, ಭಾರತೀಯ ಸಂಸ್ಕೃತಿಯ ಸಂಶೋಧಕ ವಿದ್ಯಾರ್ಥಿಯಾಗಿ ದುಡಿಯುತ್ತಾ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ‘ನ್ಯಾಸ' ಇವರ ಮೊದಲ…
115
ಲೇಖಕರು: Ashwin Rao K P
September 12, 2020
ಪ್ರಾಮಾಣಿಕತೆ ಮತ್ತು ಸರಳತೆ ಎಂಬ ವಿಷಯ ಮನಸ್ಸಿಗೆ ಬಂದಾಗಲೆಲ್ಲಾ ನೆನಪಾಗುವುದು ನಮ್ಮ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು. ತಮ್ಮ ಬದುಕಿನ ಉದ್ದಕ್ಕೂ ಅವರು ನಂಬಿದ ತತ್ವ ಸಿದ್ಧಾಂತದಂತೆಯೇ ಬಾಳಿ ಬದುಕಿದರು. ಆದರೆ ಅವರ ಸಾವು ಅವರ ಬದುಕಿನಷ್ಟು ಸರಳವಾಗಿರಲಿಲ್ಲ. ಭಾರತ-ಪಾಕಿಸ್ತಾನದ ನಡುವೆ ರಷ್ಯಾದ ತಾಷ್ಕೆಂಟ್ ಎಂಬಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ರಾತ್ರಿಯೇ ಶಾಸ್ತ್ರೀಜಿಯವರ ಮರಣವಾಗುತ್ತದೆ. ಆದರೆ ಇದು ಸಹಜ ಮರಣ ಅಲ್ಲವೆಂದೇ ಬಹುತೇಕರ ಸಂಶಯ. ಈ ಎಲ್ಲಾ ಸಂಶಯಗಳನ್ನು…
40
ಲೇಖಕರು: Ashwin Rao K P
September 04, 2020
೨೦೦೧ರಲ್ಲಿ ಚೆನ್ನೈನ ಕೊಡೈಕೆನಾಲ್ ನಲ್ಲಿ ನಡೆದ ಒಂದು ಕೊಲೆಯ ಸುತ್ತ ಈ ಪುಸ್ತಕದ ಕಥೆ ಸುತ್ತುತ್ತದೆ. ಕೋಟ್ಯಾಧೀಶ್ವರ, ಖ್ಯಾತ ಶರವಣ ಭವನದ ಮಾಲಕ ಅಣ್ಣಾಚ್ಚಿ ಪಿ. ರಾಜಗೋಪಾಲ್ ಮಾಡಿಸಿದ ಹೇಯ ಕೊಲೆಯ ಬಗ್ಗೆ ಈ ಪುಸ್ತಕ ಬಹಳ ಮಾಹಿತಿ ನೀಡುತ್ತದೆ. ಜ್ಯೋತಿಷ್ಯದ ಮೇಲೆ ರಾಜಗೋಪಾಲ್ ಗೆ ಬಹಳಷ್ಟು ನಂಬಿಕೆ. ಕೃಪಾನಂದ ವಾರಿಯರ್ ಸ್ವಾಮಿಗಳ್ ಭಕ್ತರಾಗಿದ್ದ. ಆದರೆ ಕುಳಂತೈ ಪಂಡಿಚ್ಚಿ ಎಂಬ ಜ್ಯೋತಿಷಿಯ ಮಾತು ಕೇಳಿಯೇ ಈ ಕೊಲೆ ಮಾಡಿಸುವಂತಹ ದುಸ್ಸಾಹಸಕ್ಕೆ ಕೈ ಹಾಕಿದ. ಅತ್ಯಂತ ಕಡು ಬಡತನದ ಹಿನ್ನಲೆಯಿಂದ…
27
ಲೇಖಕರು: Ashwin Rao K P
August 31, 2020
ಚೈತ್ರಾ ಕುಂದಾಪುರ ಮೂಲತಃ ಕುಂದಾಪುರದವರಾಗಿದ್ದು ರಾಷ್ಟ್ರೀಯತೆ ಹಿಂದೂಪರ ಚಿಂತನೆಯಲ್ಲಿ ಮಂಚೂಣಿಯಲ್ಲಿರುವವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿರುವ ಇವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಹಲವಾರು ಸಾಮಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಪತ್ರಿಕೆಯಲ್ಲಿ, ಸುದ್ದಿ ವಾಹಿನಿಗಳಲ್ಲಿ, ಕಾಲೇಜು ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಅತ್ಯಂತ ಚಿಕ್ಕ ಪ್ರಾಯದಲ್ಲಿ ಯುವ ಮಾಧ್ಯಮ ರತ್ನ ಪ್ರಶಸ್ತಿಗೆ…
174
ಲೇಖಕರು: Ashwin Rao K P
August 28, 2020
ಅಂಕಣಕಾರ, ಲೇಖಕ ರೋಹಿತ್ ಚಕ್ರತೀರ್ಥ ಇವರು ವಿಶ್ವವಾಣಿ ಪತ್ರಿಕೆಯಲ್ಲಿ ‘ಚಕ್ರವ್ಯೂಹ' ಎಂಬ ಅಂಕಣವನ್ನು ಬರೆಯುತ್ತಿದ್ದರು. ಆ ಅಂಕಣ ಬರಹಗಳಿಂದ ಆಯ್ದ ಕೆಲವು ವ್ಯಕ್ತಿಚಿತ್ರಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ರೋಹಿತ್ ಅವರ ಬರಹಗಳು ಸಾಕಷ್ಟು ಅಧ್ಯಯನ ಮಾಡಿ ಬರೆದವುಗಳಾಗಿರುತ್ತವೆ. ಏಕೆಂದರೆ ವ್ಯಕ್ತಿ ಚಿತ್ರಗಳನ್ನು ರೂಪಿಸುವಾಗ ಅವರ ಬಗ್ಗೆ ನಿಖರವಾದ ದಾಖಲೆಗಳಿರುವುದು ಅತ್ಯಂತ ಅವಶ್ಯಕ. ಅಯೋಧ್ಯಾ ಪ್ರಕಾಶನದವರು ಈ ಪುಸ್ತಕದ ಜೊತೆಗೆ ಇನ್ನೊಂದು ಪುಸ್ತಕವನ್ನೂ ಹೊರತಂದಿದ್ದಾರೆ.…
13