ಪುಸ್ತಕ ಪರಿಚಯ
ಲೇಖಕರು: Ashwin Rao K P
June 30, 2025

“ಈ ಕಥನವು ಜೊರಾಮಿ ಎಂಬ ಮಹಿಳೆಯ ಮದುವೆಯ ನೆನಪಿನೊಂದಿಗೆ ತೆರೆದುಕೊಳ್ಳುತ್ತದೆ. ಕಾದಂಬರಿಯು ಜೊರಾಮಿಯ ವೈವಾಹಿಕ ಬದುಕಿನ ಬಿರುಕನ್ನು ಚಿತ್ರಿಸುತ್ತಲೇ ಮಿಜೋರಾಮ್ ಭೌಗೋಳಿಕ ಪ್ರದೇಶ ಹಾಗೂ ಅಲ್ಲಿಯ ಸಮುದಾಯಗಳ ತಲ್ಲಣಗಳೊಂದಿಗೆ ನಿಕಟ ಸಂಬಂಧವನ್ನು ಬೆಸೆಯುತ್ತದೆ. ಈ ಕಥನವು ಮುಂದಕ್ಕೆ ಚಲಿಸಿದಂತೆ, ಕಮರಿ ಹೋಗಿರುವ ಮಿಜೋರಾಮ್‌ನ ಅಸ್ಮಿತೆ ಹಾಗೂ ಸಾಂಸ್ಕೃತಿಕ ಅನನ್ಯತೆಗಳು ಶೋಧಗೊಳ್ಳುತ್ತವೆ. ಸ್ವಾತಂತ್ರೋತ್ತರ ಕಾಲಘಟ್ಟದಲ್ಲಿ ಈ ನಾಡು ಅಸ್ಸಾಮಿನ ಭಾಗವಾಗಿತ್ತು; ಆಗ ಅಸ್ಸಾಮ್ ರೈಫಲ್ಸ್…
ಲೇಖಕರು: Ashwin Rao K P
June 27, 2025

“ಇದು ಜನಾರ್ದನ ಭಟ್ ಅವರ ವಿನೂತನ ಪ್ರತಿಮಾತ್ಮಕ ಕಾದಂಬರಿ. ಮೇಧಾವಿ ವಿದ್ವಾಂಸನೊಬ್ಬನ ವಿಶಿಷ್ಟ ಜೀವನ ದರ್ಶನ ಮತ್ತು ಸಾಧನೆಯ ಅನಾವರಣದ ಜತೆ ಜತೆಗೆ ಅಂದಿನ ಐತಿಹಾಸಿಕ ಸಾಂಸ್ಕೃತಿಕ ಪರಿಪ್ರೇಕ್ಷೆ ಈ ಕಾದಂಬರಿಯಲ್ಲಿ ರೋಚಕವಾಗಿ ಮೂಡಿಬಂದಿದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ.
ಖ್ಯಾತ ಲೇಖಕರು, ವಿಮರ್ಶಕರಾದ ಟಿ. ಎ. ಎನ್. ಖಂಡಿಗೆ ಪ್ರಕಾರ “ ಈ ನವೀನ ತಂತ್ರದ ಕಾದಂಬರಿ ಮನೆಯೊಡೆಯ ಮತ್ತು ದೇಹ ಆತ್ಮಗಳ ರೂಪಕಗಳ…
ಲೇಖಕರು: Ashwin Rao K P
June 25, 2025

ಮುದ್ದಣ ಮನೋರಮೆಯ ಕ್ಷಮೆಕೋರಿ ಶಾಲಿನಿ ಹೂಲಿ ಪ್ರದೀಪ್ ಅವರು ತಮ್ಮ ಮೊದಲ ಪುಸ್ತಕ ‘ಪದ್ದಣ ಮನೋರಮೆ’ ಹೊರತಂದಿದ್ದಾರೆ. ಇದು ಲಘು ಪ್ರಸಂಗಗಳು ಮತ್ತು ಕಥೆಗಳನ್ನು ಒಳಗೊಂಡಿದೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಗಿರಿಜಾ ಶಾಸ್ತ್ರಿ. ಇವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು…
“ಆಧುನಿಕ ಕನ್ನಡ ಸಾಹಿತ್ಯದ ಅರುಣೋದಯ ಕಾಲದಲ್ಲಿ ಹುಟ್ಟಿದ ರಮ್ಯ ದಾಂಪತ್ಯದ ತುಣುಕೊಂದು ಮುದ್ದಣ ಮನೋರಮೆಯರ ಸಲ್ಲಾಪದಲ್ಲಿ ಸಿಗುತ್ತದೆ. ಮುದ್ದಣ, ಆಧುನಿಕ ಕನ್ನಡ ಸಾಹಿತ್ಯದ ಮುಂಗೋಳಿಯೆಂದೇ…
ಲೇಖಕರು: Ashwin Rao K P
June 23, 2025

ಭಯಂಕರ ಹೆದರಿಕೆ ಹುಟ್ಟಿಸುವ ಕಥೆಗಳನ್ನು ಓದಬೇಕೆಂದು ಬಯಸುವವರಿಗಾಗಿಯೇ ಅನುಭವಿಸಿದವರ ಅನಿಸಿಕೆಗಳನ್ನು ಕೇಳಿ, ತಮ್ಮದೇ ಆದ ಕಲ್ಪನೆಯಲ್ಲಿ ಬರೆದಂತಹ ಕಥೆಗಳು ‘ಶಿರಾಡಿ ಘಾಟ್’ ನಲ್ಲಿವೆ. ರಮೇಶ್ ಶೆಟ್ಟಿಗಾರ್ ಮಂಜೇಶ್ವರ ತಮ್ಮ ಅನುಭವದಲ್ಲಿ ಕಂಡುಬಂದ ದೆವ್ವಗಳಿಗೆ ಒಂದಿಷ್ಟು ಕಥಾರೂಪ ಕೊಟ್ಟು ಬರೆದ ಕಥೆಗಳು ಭಯಂಕರವಾಗಿವೆ. ಹಗಲಿನಲ್ಲಿ ಓದುವಾಗ ಸರಾಗವಾಗಿಯೇ ಓದಿಸಿಕೊಂಡು ಹೋಗುವ ಈ ಕಥೆಗಳು ರಾತ್ರಿಯ ನೀರವತೆಯಲ್ಲಿ ಓದಿದಾಗ ಮಾತ್ರ ಸಕತ್ ಭಯ ಹುಟ್ಟಿಸುತ್ತವೆ. ಅದರಲ್ಲೂ ಜೋರಾದ ಮಳೆ, ಗಾಳಿ ಬರುವ…
ಲೇಖಕರು: Ashwin Rao K P
June 20, 2025

ಕಥೆಗಾರ ಗುರುರಾಜ ಕೋಡ್ಕಣಿ ಬರೆದ ‘ಪ್ಯಾರಾನಾರ್ಮಲ್’ ಎನ್ನುವ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ತುಂಬ ಹಿಂದಿನಿಂದಲೂ ಅತಿಮಾನುಷತೆಯ ಬಗ್ಗೆ ಕತೆಗಳು ಇದ್ದವಾದರೂ ಆಗ ಸರಿಯಾದ ಸಾಕ್ಷಿಗಳಿಲ್ಲದೇ ಅವೆಲ್ಲವೂ ಕೇವಲ ಕತೆಗಳಾಗಿ ಉಳಿದು ಹೋಗಿದ್ದವು. ಆದರೆ ಈಗ ಹಾಗಲ್ಲ, ಪ್ಯಾರಾನಾರ್ಮಲ್ ಕ್ಷೇತ್ರವೆನ್ನುವುದು ಸಾಕಷ್ಟು ಬೆಳವಣಿಗೆ ಕಂಡಿದೆ. ತಾರ್ಕಿಕ ವಿಶ್ಲೇಷಣೆ, ಸಂಶೋಧನಾ ಸಾಮರ್ಥ್ಯ ಮತ್ತು ಅಧ್ಯಯನಗಳಿಂದಾಗಿ ಒಂದು ಕಾಲಕ್ಕೆ ಕೇವಲ ಭ್ರಮೆಯಷ್ಟೇ ಎನ್ನಿಸುವಂತಿದ್ದ ಕೆಲವು ವಿಷಯಗಳು ಈಗ, ಕೇವಲ…
ಲೇಖಕರು: Ashwin Rao K P
June 18, 2025

“ನೀಲಿ ಬೆಳೆಯ ಮಧ್ಯೆ ಗಾಂಧೀಜಿಗೆ ಸಿಕ್ಕ ನೀಲನಕ್ಷೆ ಗಾಂಧೀಜಿ ಎಂಬ ಮಹಾನ್ ಚೇತನ ಮೊಗ್ಗಾಗಿ ಮೂಡಿದ್ದು ದಕ್ಷಿಣ ಆಫ್ರಿಕದಲ್ಲಾದರೂ ಅದು ಹೂವಾಗಿ ಅರಳಿದ್ದು ಬಿಹಾರದ ಚಂಪಾರಣ್ಯದಲ್ಲಿ. ಅಂದಿನ ಕಾಲದ ಇತರ ನೇತಾರರ ದೃಷ್ಟಿಯೆಲ್ಲ ಬ್ರಿಟಿಷ್ ರಾಜಸತ್ತೆಯನ್ನು ಮಣಿಸುವ ಕಡೆ ಇತ್ತು. ಗಾಂಧೀಜಿ ಚಂಪಾರಣ್ಯಕ್ಕೆ ಕಾಲಿಟ್ಟಾಗಲೇ ಅವರಿಗೆ ನಿಜವಾದ ಭಾರತದ ಸ್ಪಷ್ಟ ಚಿತ್ರಣ ಸಿಕ್ಕಿತು. ಇಲ್ಲಿನ ರೈತರ ಮತ್ತು ತಳಸಮುದಾಯದ ಅಜ್ಞಾನ, ಶೋಷಣೆ ಮತ್ತು ದಯನೀಯ ಬದುಕಿಗೆ ಬ್ರಿಟಿಷರಷ್ಟೇ ಅಲ್ಲ, ಸ್ಥಳೀಯ ಕುಲೀನರೂ…