ಪುಸ್ತಕ ಪರಿಚಯ
ಲೇಖಕರು: Ashwin Rao K P
March 26, 2025

ಆರ್. ವೆಂಕಟರೆಡ್ಡಿ ಅವರ ‘ನೂರಕ್ಕೆ ನೂರು’ ಕಲಿಕೆ ಮತ್ತು ಅಂಕಗಳಿಕೆ ಕೃತಿಯು ವಿದ್ಯಾರ್ಥಿಗಳಿಗೆ ಮನೋವೈಜ್ಞಾನಿಕ ಸಲಹೆಗಳನ್ನು ನೀಡುವ ಸಂಕಲನವಾಗಿದೆ. ಕೃತಿಯ ಕುರಿತು ಬೆನ್ನುಡಿಯಲ್ಲಿ ಎಂ. ಬಸವಣ್ಣ ಅವರು ಹೀಗೆ ಹೇಳಿದ್ದಾರೆ; ಬಹಳ ಕಾಲದಿಂದಲೂ ಮನೋವಿಜ್ಞಾನವನ್ನು ಅಧ್ಯಯನ ಮಾಡುವವರಲ್ಲಿ ಎರಡು ಪ್ರಮುಖ ಗುಂಪುಗಳಿರುವುದು ಕಂಡುಬರುತ್ತದೆ. ಒಂದು ಗುಂಪಿನವರ ಅಧ್ಯಯನ ಮತ್ತು ಆಸಕ್ತಿ ಇರುವುದೆಲ್ಲ 'ಮನೋವಿಜ್ಞಾನವೆಂದರೆ ಏನು?” ಎನ್ನುವುದರ ಮೇಲೆ. ಇನ್ನೊಂದು ಗುಂಪಿನವರ ಆಸಕ್ತಿ ಇರುವುದು "…
ಲೇಖಕರು: ಬರಹಗಾರರ ಬಳಗ
March 25, 2025

ಈ ವರ್ಷ ಓದಿದ ಮೊದಲ ಕಥಾಸಂಕಲನ ಅಶ್ವಿನಿ ಸುನಿಲ್ ಅವರ 'ಅತೀತಭವ'. ಕಳೆದವರ್ಷ ನಿತ್ಯೋತ್ಸವ ಅಭಿಯಾನದಲ್ಲಿ ವೀಣಾಮೇಡಂ ಅವರಿಂದ ಬಹುಮಾನವಾಗಿ ದೊರೆತ ಕೃತಿಯಿದು. ಸಣ್ಣಕತೆಗಳು ಯಾರಿಗೆ ತಾನೇ ಇಷ್ಟವಾಗುವುದಿಲ್ಲ! ಹದಿನೈದು ಸಣ್ಣಕತೆಗಳು ಈ ಸಂಕಲನದಲ್ಲಿವೆ. ಇಲ್ಲಿನ ಬಹುತೇಕ ಕತೆಗಳು ಐದಾರು ಪುಟಗಳಲ್ಲಿ ಮುಗಿದುಬಿಡುತ್ತವೆ. ಹೀಗಾಗಿ ಓದುಗನಿಗೆ ಒಂದೇ ಗುಕ್ಕಿನಲ್ಲಿ ನಾಲ್ಕಾರು ಕತೆಗಳನ್ನು ಒಮ್ಮೆಲೆ ಓದಲು ಸಾಧ್ಯವಾಗುತ್ತದೆ. ಹೆಚ್ಚಿನ ಕಥಾವಸ್ತುಗಳು ದೈನಂದಿನ ಜೀವನಕ್ಕೆ ಸಂಬಂಧಿಸಿದವೇ ಆದ್ದರಿಂದ,…
ಲೇಖಕರು: Ashwin Rao K P
March 24, 2025

ಹಿರಿಯ ಪತ್ರಕರ್ತರು ಮತ್ತು ಕತೆಗಾರರು ಆಗಿರುವ ಎಫ್.ಎಂ. ನಂದಗಾವ ಅವರ `ಘಟ ಉರುಳಿತು’ ಇದು ಇವರ ಎಂಟನೇ ಕಥಾ ಸಂಕಲನ. ವಿವಿಧ ವಾರ, ಮಾಸ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕತೆಗಳನ್ನು ಸಂಚಲನ ಪ್ರಕಾಶನ ಓದುಗರ ಮುಂದಿಟ್ಟಿದೆ. ಪತ್ರಕರ್ತನಾಗಿ ಅಪಾರ ಜೀವನಾನುಭವ ಇರುವ ನಂದಗಾವ ಅವರು ದಿನನಿತ್ಯ ನಡೆಯುವ ಸಾಮಾನ್ಯ ಘಟನೆಗಳನ್ನು ಕತೆಯನ್ನಾಗಿಸಿದ್ದಾರೆ. ಸಾಮಾನ್ಯ ಘಟನೆಗಳನ್ನು ಕತೆಯಾಗಿ ನಿರೂಪಿಸುವಾಗ ಅವುಗಳಿಗೆ ಸಾಕ್ಷಿ ಚಿತ್ರದ ಸ್ವರೂಪ ಬಂದುಬಿಡುತ್ತದೆ. ಕತೆಗಳಿಗಿರುವ ಕುತೂಹಲದಿಂದ…
ಲೇಖಕರು: Ashwin Rao K P
March 21, 2025

“ವಿವೇಕದಿಂದ ಆನಂದ” ದಲ್ಲಿ ಲೇಖಕರಾದ ಡಾ. ಎಸ್ ಎಸ್ ಓಂಕಾರ್ ಇವರು ಸ್ವಾಮಿ ವಿವೇಕಾನಂದರ ಜೀವನವನ್ನು ಮಾದರಿಯಾಗಿ ಇಟ್ಟುಕೊಂಡು ಪತಂಜಲಿ ಮಹರ್ಷಿಗಳ ಘನವಾದ 'ಯಮ' ಮತ್ತು 'ನಿಯಮ' ತತ್ತ್ವಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಯೋಗದ ಶಾರೀರಿಕ ಅಂಶಗಳಿಗೆ ಆಧುನಿಕ ದೃಷ್ಟಿಕೋನ ಹೆಚ್ಚು ಮಹತ್ವ ಕೊಟ್ಟಿದ್ದರೂ, ಈ ಮೂಲಭೂತ ತತ್ತ್ವಗಳು ಅತಿ ಮುಖ್ಯ ಹಾಗೂ ವಿವೇಕಪೂರ್ಣವಾದ, ಅರ್ಥಪೂರ್ಣವಾದ, ಸಮರಸದ ಜೀವನಕ್ಕೆ ಉತ್ತಮ ಮಾರ್ಗದರ್ಶಿ. ಈ ಪುಸ್ತಕದ ಒಂದೊಂದು ಅಧ್ಯಾಯವೂ ಈ ತತ್ತ್ವಗಳ ಆಳಕ್ಕೆ ಇಳಿದು ಅವುಗಳ…
ಲೇಖಕರು: Ashwin Rao K P
March 19, 2025

ಮೂರು ಸಾಹಿತಿಗಳು ಸೇರಿ ಬರೆದ ಗಝಲ್ ಗಳ ಸಂಕಲನವೇ ‘ಕಡಲ ಹನಿ ಒಡಲ ಧ್ವನಿ. ಪುಸ್ತಕದ ಬೆನ್ನಿಗೆ ಹಿಮ್ಮಾತು ಹೀಗಿದೆ “ನಾವು ಮೂವರು ನೆರೆಕರೆಯವರು ರತ್ನಾ ಟಿ ಭಟ್ಟ, ಪುತ್ತೂರು, ಹಾ ಮ ಸತೀಶ ಬೆಂಗಳೂರು ಮತ್ತು ನಾನು ಡಾ ಸುರೇಶ ನೆಗಳಗುಳಿ ಒಟ್ಟು ಸೇರಿ ನಮ್ಮ ಹವ್ಯಾಸಗಳಲ್ಲಿ ಒಂದಾದ ಗಜಲ್ ರಚನೆಗಳನ್ನು ಪ್ರಕಾಶಿಸುವ ಇಚ್ಚೆ ಹೊಂದಿ ‘ಕಡಲ ದನಿ ಒಡಲ ಧ್ವನಿ’ ಎಂಬ ಶೀರ್ಷಿಕೆಯಡಿಯಲ್ಲಿ ತಲಾ ಮೂವತ್ತರಂತೆ ಒಟ್ಟು ತೊಂಬತ್ತು ವಿಭಿನ್ನ ರೀತಿಯ ಗಜಲ್ ಗಳನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ.”
ಈ ಕೃತಿಗೆ…
ಲೇಖಕರು: Ashwin Rao K P
March 17, 2025

ಗಝಲ್ ಕವಿ ಸಿದ್ಧರಾಮ ಹೊನ್ಕಲ್ ಅವರ ನೂತನ ಗಝಲ್ ಸಂಕಲನ ‘ಇದು ಪ್ರೇಮ ಮಹಲ್’ ಪ್ರಕಟವಾಗಿದೆ. ಪ್ರೇಮೋನ್ಮಾದದ ಆಯ್ದ ನೂರು ಗಝಲ್ ಗಳ ಸಂಗ್ರಹ ಈ ಕೃತಿಯಲ್ಲಿದೆ. ಇದಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಕವಿ ಅಬ್ದುಲ್ ಹೈ ತೋರಣಗಲ್ಲು. ಇವರು ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ…
“ಭಯೋತ್ಪಾದನೆ ಒಂದು ಭೂತ
ಖಂಡ ಖಂಡಾಂತರಗಳ ಪ್ರಶ್ನೆ
ಶವಗಳು ಬದುಕುತ್ತಿವೆ!
ಕರೀಮ್ !
ಯಾಕೋ ಮನುಷ್ಯರೇ ಮರಣಿಸುತ್ತಿದ್ದಾರೆ.
ಅಬಾಬಿಯ ಈ ಸಂದೇಶ ಧರ್ಮದ ಹೆಸರಲ್ಲಾಗುವ ಮನುಷ್ಯರ ಕೊಲೆಯನ್ನ,…