ಪುಸ್ತಕ ಪರಿಚಯ

ಲೇಖಕರು: VEDA ATHAVALE
March 28, 2015
ಈ ಪುಸ್ತಕವನ್ನು ಕೈಗೆತ್ತಿಕೊಂಡಾಗ ನನ್ನ ಮನದ ಮೂಲೆಯಲ್ಲಿ ಇದ್ದ - ಇದು ಕೂಡಾ ಮಧ್ಯಪ್ರಾಚ್ಯದ ಮಹಿಳೆಯರ ಗೋಳಿನ ಕತೆ ಇರಬಹುದೇ? ಎಂಬ ಸಂಶಯ, ಪುಟಗಳು ಸರಿಯುತ್ತಿದ್ದಂತೆ ಮರೆಯಾಯಿತು. ಮಲಾಲಾ ಎಂಬ ಬಾಲಕಿಯ ಕಂಗಳಿಂದ ಕಂಡಂತೆ  ದೇಶದ ರಾಜಕೀಯ , ಸಾಮಾಜಿಕ ತಲ್ಲಣಗಳನ್ನು ಮನ ಮುಟ್ಟುವಂತೆ ಇಲ್ಲಿ  ನಿರೂಪಿಸಲಾಗಿದೆ. ತಾಲಿಬಾನ್ ಎಂಬುದು ಕೇವಲ ಧರ್ಮಾಂಧರ , ದುಷ್ಟರ ಗುಂಪು ಎನ್ನುವುದಕ್ಕಿಂತ ಅದೊಂದು ಸಾಮಾಜಿಕ ಪ್ರಜ್ಞೆ ಎಂಬ ದೃಷ್ಟಿಕೋನ ಎದ್ದು ಕಾಣುತ್ತದೆ. ಜೊತೆಗೆ ಪಾಕಿಸ್ತಾನದ ಚಾರಿತ್ರಿಕ,…
6
2,572
ಲೇಖಕರು: Tejaswi_ac
March 20, 2015
ತೇಜಸ್ವಿ ಎ.ಸಿ ಯವರ ಕವನ ಸಂಕಲನ "ನೆರಳ ಹೆಜ್ಜೆ" ಮಾರ್ಚ್ ೧೫, ೨೦೧೫ರಂದು ಬಿಡುಗಡೆಗೊಂಡಿದೆ. ಜೀವನದ ಅನುಭವಗಳನ್ನು ಅನುಭವಿಸುತ್ತಾ, ಸಣ್ಣ ಪುಟ್ಟ ವಿಷಯಗಳಲ್ಲೂ ಸ್ವಾರಸ್ಯವನ್ನು ಕಾಣುತ್ತ, ಜೀವನದ ಹಲವು ಮಜಲುಗಳನ್ನು ಕವನಗಳ ರೂಪದಲ್ಲಿ ಸೆರೆ ಹಿಡಿದು. ಈ ಎಲ್ಲಾ ಕವನಗಳನ್ನು ಪೋಣಿಸಿ ಕವನ ಸಂಕಲವನ್ನಾಗಿ ಮಾಡಲಾಗಿದೆ. ಬಾಲ್ಯದಲ್ಲಿ ಮಕ್ಕಳ ತುಂಟಾಟ, ಪ್ರಕೃತಿ ವರ್ಣನೆ, ಜೀವನ ಪಾಠಗಳು, ಸ್ಫೂರ್ತಿ ಕೊಡುವ ವಿಷಯಗಳು, ಕನಸುಗಳು, ನೆನಪುಗಳು, ಮಧುರ ಭಾವನೆಗಳು ಹೀಗೆ ಹಲವಾರು ವಿಷಯಗಳನ್ನು ಕವನದ…
2
1,572
ಲೇಖಕರು: DR.S P Padmaprasad
January 14, 2015
ಕನ್ನಡ‌ದ‌ ಹೆಸರಾಂತ‌ ಕಾದಂಬರಿಕಾರ‌ ಹಾಗೂ ಕವಿ, ಡಾ. ನಾ. ಮೊಗಸಾಲೆಯವರ‌ ಮತ್ತೊಂದು ಬ್ಱುಹತ್ ಕಾದಂಬರಿ 'ಮುಖಾಂತರ‌' ಇದೀಗ‌ ಧಾರವಾಡದ‌ ಪ್ರಸಿದ್ಧ‌ 'ಮನೋಹರ‌ ಗ್ರಂಥಮಾಲೆ' ಯಿಂದ‌ ಪ್ರಕಟಗೊಂಡಿದೆ. ಅವ‌ ಹಿಂದಿನ‌ ಬ್ರುಹತ್ ಕಾದಂಬರಿ 'ಉಲ್ಲಂಘ‌ನೆ' ದಕ್ಷಿಣ‌ ಕನ್ನಡ‌ ಜಿಲ್ಲೆಯ‌ ಬಂಟ‌ ಸಮಾಜದ‌ ಮೂರು ತಲೆಮಾರುಗಳ‌ ಜೀವನ‌ ವಿಧಾನದಲ್ಲಾ ಏರುಪೇರುಗಳನ್ನು ಚಿತ್ರಿಸಿತ್ತು. ಅದು ಮರಾಠಿ ಮತ್ತು ತೆಲುಗು ಬಾಷೆಗಳಿಗೆ ಅನುವಾದವಾಗಿದೆ.ಈಗ‌ ಪ್ರಕಟಗೊಂಡಿರುವ‌ ಮುಖಾಂತರ‌ ಕಾದಂಬರಿಯು ಕಾಸರಗೋದು ,…
1,634
ಲೇಖಕರು: hpn
November 15, 2014
ನಿನ್ನೆ ಕೆಲಸದ ಒತ್ತಡದ ನಡುವೆ ತೀರ ಬೇಸರವಾಗಿ ಯಾವುದಾದರೊಂದು ಪುಸ್ತಕವನ್ನು ಓದಬೇಕೆಂದು ನನ್ನದೇ ಪುಸ್ತಕಗಳ ಕಲೆಕ್ಷನ್ನಿನಲ್ಲಿ ಹುಡುಕುತ್ತಿದ್ದೆ. ಪ್ರೇಮಾ ಕಾರಂತರ "ಸೋಲಿಸಬೇಡ ಗೆಲಿಸಯ್ಯ" ಪುಸ್ತಕ ಕಣ್ಣಿಗೆ ಬಿತ್ತು. ಮನೋಹರ ಗ್ರಂಥಮಾಲೆಯಿಂದ ಅಂಚೆಯ ಮೂಲಕ ವರ್ಷಗಳ ಹಿಂದೆಯೇ ನನಗೆ ಈ ಪುಸ್ತಕ ತಲುಪಿತ್ತು. ಆದರೆ ಸರಿಯಾಗಿ ಓದಲು ಆಗಿರಲಿಲ್ಲ. ನಿನ್ನೆಯಷ್ಟೆ ಬೇಸರ ಕಳೆಯಲು ॑ಹಂಸಗೀತೆ॑ಯ ಹಾಡುಗಳನ್ನು ಕೇಳುತ್ತ ಕುಳಿತಿದ್ದ ನನಗೆ ಅದಕ್ಕೆ ಹಿನ್ನೆಲೆ ಸಂಗೀತ ನೀಡಿದ್ದ ಬಿ ವಿ ಕಾರಂತ…
1
3,502
ಲೇಖಕರು: Dhaatu
March 19, 2014
ಸಂಪದ ಸ್ನೇಹಿತರೇ, ನಿಮ್ಮಲ್ಲಿ ನನ್ನದೊಂದು ವಿಜ್ಞಾಪನೆ. ಅದೇನೆಂದರೆ, ಗೋಪಾಲಕೃಷ್ಣ ಪೈ ಅವರು ಕನ್ನಡಕ್ಕೆ ಅನುವಾದಿಸಿರುವ “ಆಧುನಿಕ ಚೀನೀ ಸಣ್ಣಕತೆಗಳು” ಎಂಬ ಕಥಾಸಂಕಲನವನ್ನು ಹೇಗಾದರು ಸಂಪಾದಿಸಿ, ಅದರ ಸ್ವಾದವನ್ನು ಆಘ್ರಾಣಿಸಬೇಕೆಂದು ಪ್ರೀತಿಯಿಂದ ಆಗ್ರಹಿಸುತ್ತಿದ್ದೇನೆ.        ಪ್ರತಿಯೊಂದು ಕತೆಯೂ ತನ್ನ ಮುಕ್ತಾಯದಲ್ಲಿ ಪ್ರಾರಂಭದ ಸೂಚನೆಯನ್ನು ಕೊಡುತ್ತೆ. ಅದು ಕತೆಗಿರಬಹುದು ಇಲ್ಲವೆ ಓದುಗನ ವಿಚಾರ ಸರಣಿಗಿರಬಹುದು. ನಾನು ಒಂದಂತೂ ಹೇಳಬಲ್ಲೆ, ಸಮಯವನ್ನು ಸಾರ್ಥಕಗೊಳಿಸಿಕೊಂಡ ಮತ್ತು…
899
ಲೇಖಕರು: nageshamysore
January 28, 2014
ಈಚೆಗೆ ರಜೆಯಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದಾಗ ಕನ್ನಡ ಪುಸ್ತಕ ಖರೀದಿಸಲು ಹೋದಾಗ ಕೊಂಡ ಪುಸ್ತಕಗಳಲ್ಲಿ ವಸುಧೇಂದ್ರರ ಇತ್ತೀಚೆಗೆ ಬಿಡುಗಡೆಯಾದ ಹೊಸ ಸಣ್ಣ ಕಥೆಗಳ ಸಂಕಲನ 'ಮೋಹನಸ್ವಾಮಿ' ಒಂದು. ಈ ಪುಸ್ತಕದ ಕಿರು ಪರಿಚಯದ ಯತ್ನ ಈ ಬರಹ. ಈ ಸಂಕಲನದಲ್ಲಿ ಒಟ್ಟು ಹನ್ನೊಂದು ಕಥೆಗಳಿದ್ದು ಅದರಲ್ಲಿ ನಾಲ್ಕೈದು ಕಥೆಗಳು ನಮ್ಮ ಕಥೆಗಳಲ್ಲಿ ಅಪರೂಪವಾದ 'ಹೆಣ್ಣಿಗ'  (ಸಲಿಂಗಕಾಮಿ) ವ್ಯಕ್ತಿತ್ವವನ್ನು ಬಿಂಬಿಸುವ ಕಥೆಯಾಗಿರುವುದು ಈ ಸಂಕಲನದ ವಿಶೇಷಗಳಲ್ಲಿ ಒಂದು. ಸಂಕಲನದ ಮೊದಲ ಕಥೆ '…
2
4,143