ಪುಸ್ತಕ ಪರಿಚಯ

ಲೇಖಕರು: Ashwin Rao K P
March 25, 2024
ಧ್ಯಾನಕ್ಕೆ ಕೂತ ನದಿ’ ಕೃತಿಯು ‘ಈ ಹೊತ್ತಿಗೆ’ ಕಥಾ ಪ್ರಶಸ್ತಿ ವಿಜೇತ ಕೃತಿಯಾಗಿದೆ. ಒಟ್ಟಾಗಿ ೧೦ ಕತೆಗಳನ್ನು ಒಳಗೊಂಡ ಈ ಕೃತಿಯು ಕತೆಗಳ ಮೂಲಕ ಹಲವಾರು ವಿಚಾರಗಳು ಪ್ರಸ್ತುತಪಡಿಸುತ್ತದೆ. ಇಲ್ಲಿನ ‘ಧ್ಯಾನಕ್ಕೆ ಕೂತ ನದಿ’ ಶೀರ್ಷಿಕೆಯ ಕತೆಯು ಭಿನ್ನವಾಗಿದ್ದು, ವಸ್ತು ವೈವಿಧ್ಯ, ಜಾಳಾಗದೇ ಇರುವ ನಿರೂಪಣೆ, ಭಾಷೆಯ ಬಳಕೆಯಲ್ಲಿ ತೋರಿದ ಕಾಳಜಿ, ಹೇಳಲು ಬಯಸಿದ ತಂತ್ರಗಳ ಜೊತೆಗೆ ಪ್ರಜ್ಞಾಪೂರ್ವಕವಾಗಿ ಸೇರಿಸಿರದ ಹಾಗೆ ಕಾಣುವ ರೂಪಕಗಳ ಸೃಷ್ಟಿ ವಿಶೇಷ ಗಮನ ಸೆಳೆಯುತ್ತದೆ. ಮನರಂಜನೆಯ ಜೊತೆಗೆ…
ಲೇಖಕರು: Ashwin Rao K P
March 22, 2024
ಖ್ಯಾತ ಪತ್ರಕರ್ತ, ಲೇಖಕ ದಿ. ರವಿ ಬೆಳಗೆರೆ ಅವರ ನೂರನೇ ಪುಸ್ತಕದ ರೂಪದಲ್ಲಿ ‘ರಜನೀಶನ ಹುಡುಗಿಯರು' ಹೊರಬಂದಿದೆ. ಆಚಾರ್ಯ ರಜನೀಶ್ ಅಥವಾ ಭಗವಾನ್ ರಜನೀಶ್ ಅಥವಾ ಓಶೋ ರಜನೀಶ್ ಎಂಬ ವ್ಯಕ್ತಿ ೮೦-೯೦ ರ ದಶಕದಲ್ಲಿ ವಿಶ್ವದಾದ್ಯಂತ ಮಾಡಿದ ಮೋಡಿಗೆ ಸಾಟಿ ಇಲ್ಲ. ರಜನೀಶ್ ಆಶ್ರಮದಲ್ಲಿ ಯಾವುದಕ್ಕೂ ನಿರ್ಭಂಧವಿರಲಿಲ್ಲ. ಹುಡುಗಿಯರು, ಸ್ವಚ್ಛಂದ ಕಾಮ, ಡ್ರಗ್ಸ್, ಹಾಡು, ಸಂಗೀತ, ನೃತ್ಯ ಯಾವುದಕ್ಕೂ ನಿಷೇಧವಿರಲಿಲ್ಲ. ಈ ಕಾರಣದಿಂದ ಬಹುತೇಕ ವಿದೇಶೀಯರೇ ಈ ಆಶ್ರಮದ ವಾಸಿಗಳಾಗಿದ್ದರು. ಎಲ್ಲಾ…
ಲೇಖಕರು: Ashwin Rao K P
March 20, 2024
‘ಜರ್ನಿ ಆಫ್ ಜ್ಯೋತಿ’ ಜ್ಯೋತಿ ಎಸ್ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಈ ಕೃತಿಯ ಕುರಿತು ಎಚ್.ಎಸ್. ಸತ್ಯನಾರಾಯಣ ಅವರು ಹೀಗೆ ಹೇಳಿದ್ದಾರೆ; ಇಲ್ಲಿ ಬಣ್ಣಬಣ್ಣದ ಚಿತ್ರಗಳನ್ನು ರಚಿಸಿಯೂ ಬದುಕಿನ ಬಣ್ಣ ಕಳೆದುಕೊಂಡು ಹೆಣಗಾಡುತ್ತಿರುವ, ಆದರೆ ಜೀವನೋತ್ಸಾಹವನ್ನು ಕುಂದಿಸಿಕೊಳ್ಳದ ಚಿತ್ರ ಕಲಾವಿದರಿದ್ದಾರೆ, ಛಾಯಾಗ್ರಾಹಕರಿದ್ದಾರೆ, ಬೀದಿ ಬದಿಯ ವ್ಯಾಪಾರಿಗಳಿದ್ದಾರೆ, ರಂಗಭೂಮಿ-ತೊಗಲುಬೊಂಬೆಯಾಟದ ಕಲಾವಿದರಿದ್ದಾರೆ, ಸಮಾಜಸೇವೆಯಲ್ಲಿ ಬದುಕಿನ ಸಾರ್ಥಕತೆಯನ್ನು ಅನುಭವಿಸುತ್ತಿರುವ…
ಲೇಖಕರು: Ashwin Rao K P
March 18, 2024
“ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಪ್ರವೃತ್ತಿಯಲ್ಲಿ ಕವಿ, ಸಾಹಿತಿ, ನಾಟಕಕಾರ, ಹಾಡುಗಾರ ಶ್ರೀ ಹಾ ಮ ಸತೀಶರ ಗಝಲ್ ಸಂಕಲನ ‘ಪ್ರಕೃತಿ' ಪ್ರೀತಿ ಬದುಕು ಸಂಕಲನಕ್ಕೆ ನನ್ನ ಅನುಭವದ ಒಂದೆರಡು ಸಾಲುಗಳನ್ನು ಬರೆಯಲು ಸಂತಸಪಡುತ್ತೇನೆ. ನಾನು ಕಂಡ ಹಾಗೆ ಸತೀಶರು ಸಾಹಿತ್ಯ ಪ್ರಪಂಚದ ದೈತ್ಯ ಪ್ರತಿಭೆ, ಎಲೆಯ ಮರೆಯ ಕಾಯಿ ಎನ್ನಬಹುದು. ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವ ಮಾತಿನಂತೆ ಸಾಹಿತ್ಯದಲ್ಲಿ ಕೈಯಾಡಿಸದ ಕ್ಷೇತ್ರವಿಲ್ಲ. ಯಾವುದೇ ಕನ್ನಡ ಪಂಡಿತರಿಗೆ ಕಡಿಮೆಯಿಲ್ಲದ ಸಾಹಿತ್ಯ ಜ್ಞಾನ…
ಲೇಖಕರು: addoor
March 17, 2024
ನರಭಕ್ಷಕ ಹುಲಿಗಳ ಬೇಟೆಯ ಮೈನವಿರೇಳಿಸುವ ಇನ್ನೊಂದು ಕಥನ ಇದು. ಇಂಗ್ಲಿಷಿನಲ್ಲಿ ಕೆನೆತ್ ಆಂಡರ್ಸನ್ ಬರೆದಿರುವ ಈ ಅನುಭವಗಳನ್ನು ಅನುವಾದಿಸಿ, ಸಂಗ್ರಹ ರೂಪಾಂತರವಾಗಿ ನೀಡಿದ್ದಾರೆ ಪೂರ್ಣಚಂದ್ರ ತೇಜಸ್ವಿ. ಲೇಖಕರ ಮಾತಿನಲ್ಲಿ ತೇಜಸ್ವಿಯವರು ಬರೆದಿರುವ ಈ ಮಾತುಗಳು ಗಮನಾರ್ಹ: "ಇಬ್ಬರು ಕಿರಿಯ ಮಿತ್ರರು “ಕಾಡಿನ ಕಥೆಗಳು” ಪುಸ್ತಕದ ಬಗ್ಗೆ ಪ್ರಸ್ತಾಪಿಸಿ, ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ಭಾರತದ ಕಾಡುಗಳ ಬಗ್ಗೆ ಹೇಳಿರುವುದೆಲ್ಲ ಸುಳ್ಳೆಂದೂ, ಅವು ಕೇವಲ ಪಾಶ್ಚಿಮಾತ್ಯ ಓದುಗರ ಮನರಂಜಿಸಲು…
ಲೇಖಕರು: Ashwin Rao K P
March 15, 2024
ಡಾ. ಸುರೇಶ ನೆಗಳಗುಳಿ ಅವರು ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಓರ್ವ ಕವಿ, ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ನೆಗಳಗುಳಿ ಅವರ ಗಜಲ್ ಎಂದರೆ ಬಹಳಷ್ಟು ಮಂದಿಯ ಮನ ಅರಳುತ್ತದೆ. ಏಕೆಂದರೆ ಮೂಲತಃ ಉರ್ದು ಭಾಷೆಯಲ್ಲಿನ ಒಂದು ಪ್ರಕಾರವಾದ ಗಜಲ್ ಗಳನ್ನು ಯಶಸ್ವಿಯಾಗಿ ಕನ್ನಡೀಕರಣಗೊಳಿಸಿದ್ದು ಇವರ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು. ಗಜಲ್ ನ ಮೂಲ ಆಶಯ ಮತ್ತು ನಿಯಮಾವಳಿಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಇವರು ಗಜಲ್ ರಚನೆ ಮಾಡುತ್ತಾರೆ. ಸಾಮಾಜಿಕ ಜಾಲ ತಾಣಗಳ ಬಳಗಗಳಲ್ಲಿ ಇವರು ತಮ್ಮದೇ…