ಪುಸ್ತಕ ಪರಿಚಯ

ಲೇಖಕರು: Ashwin Rao K P
April 23, 2025
ಕೋಟಿಗಾನಹಳ್ಳಿ ರಾಮಯ್ಯ ಅವರ ಆತ್ನಕಥೆಯ ಹೆಸರೇ ‘ದರ್ಗಾ ಮಾಳದ ಚಿತ್ರಗಳು’ ಇದನ್ನು ಸಂಪಾದಿಸಿದ್ದಾರೆ ಕೆ ಪಿ ಲಕ್ಷ್ಮಣ್ ಇವರು. “ನಾವು ಹೆಚ್ಚಿನ ಸಾರಿ ರಾಜಕಾರಣ, ಸರ್ವಾಧಿಕಾರ, ಇಕಾಲಜಿ, ಕಲೆ, ಜ್ಞಾನ, ಮಕ್ಕಳು, ಶಿಕ್ಷಣ, ಧರ್ಮ, ಪುರಾಣ ಇಂತ ಹಲವು ಸಂಕೀರ್ಣ ವಿಷಯಗಳನ್ನ ‘ಮೇಲಿನವರ’ ಮತ್ತು ‘ದೂರದ’ ಕಣೋಟದಿಂದ ನೋಡಿ ಗ್ರಹಿಸಲು ಪ್ರಯತ್ನಿಸುತ್ತೇವೆ. ಇಲ್ಲಿನ ಬರಹಗಳಲ್ಲಿ ರಾಮಯ್ಯನವರು ಇದರ ವಿರುದ್ಧವಾದ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಎಲ್ಲವನ್ನು ತನ್ನ ಸುತ್ತಲು ನಡೆಯುವ ಘಟನೆ, ಮಾತುಕತೆ,…
ಲೇಖಕರು: Ashwin Rao K P
April 21, 2025
`ಕುರು ದ್ವೀಪ’ ವೀಣಾ ರಾವ್ ಅವರ ಕಾದಂಬರಿ. ಒಂದು ಪ್ರಾಕೃತಿಕ ಆತಂಕವನ್ನು ಎದುರುಗೊಳ್ಳುವ ಈ ಕಥಾವಸ್ತು, ಕಾದಂಬರಿಯುದ್ದಕ್ಕೂ ದ್ವೀಪವಾದವರ ಬದುಕಿನ ಹಲವು ಹತ್ತು ಸಂಗತಿಗಳನ್ನು ಮಾನವೀಯ ನೆಲೆಯಿಂದ ಚಿತ್ರಿಸುತ್ತಾ ಸಾಗುತ್ತದೆ. ‘ಕುರುದ್ವೀಪ’ದಲ್ಲಿ ಕೇವಲ ಜನರ ಬದುಕು ಮಾತ್ರ ‘ದ್ವೀಪ’ವಾಗುವುದಿಲ್ಲ; ಪ್ರಕೃತಿ ಕೂಡ ಅಂತಹ ಒಂದು ಆತಂಕಕಾರೀ ದ್ವೀಪವೊಂದನ್ನು ಸೃಷ್ಟಿಸಿ ಮಾನವನ ಇಚ್ಛಾಶಕ್ತಿಯ ಪರಮೋಚ್ಛ ಬಳಕೆಯ ಬಗ್ಗೆ ಕರೆಕೊಟ್ಟು ಅದರಿಂದ ಹೊರಬರುವ ಮಾರ್ಗವನ್ನು ಅವರೇ ಸೃಷ್ಟಿಸಿಕೊಳ್ಳುವಂತೆ…
ಲೇಖಕರು: Ashwin Rao K P
April 18, 2025
ಡಾ. ಪ್ರಹ್ಲಾದ ಡಿ.ಎಂ ಅವರ ‘ಮ್ಯಾಸಬೇಡರ ಚಾರಿತ್ರಿಕ ಕಥನ’ ಎಂಬ ಕೃತಿಯು ಮ್ಯಾಸಬೇಡರ ಕುಲಮೂಲ, ಸಾಂಸ್ಕೃತಿಕ ವೀರರು, ಮಾತೃದೈವಗಳು ಮತ್ತು ಆ ಕುಲದ ಚಾರಿತ್ರಿಕ ಕಾವ್ಯಗಳನ್ನು ಕುರಿತಂತೆ ಅಧ್ಯಯನ ನಡೆಸಿದ ಕೃತಿಯಾಗಿದೆ. ಈ ಕೃತಿಯ ಲೇಖಕರಾದ ಡಾ.ಡಿ.ಎಂ. ಪ್ರಹ್ಲಾದ್ ಅವರು ಬಹಳ ಶ್ರಮಪಟ್ಟು ಆಕರಗಳನ್ನು ಸಂಗ್ರಹಿಸಿ ಬಹಳ ತಾಳ್ಮೆಯಿಂದ ವಿಶ್ಲೇಷಿಸಿದ್ದಾರೆ. ಕುಲಮೂಲದ ಚರಿತ್ರೆ ಭಾಗದಲ್ಲಿ ಬಹಳ ಪುರಾತನವಾದ ಹಸ್ತಪ್ರತಿಯನ್ನು ಉಲ್ಲೇಖಿಸಿ ಅದರಲ್ಲಿ ವಿವರಿಸಿರುವ ತ್ರಿಮೂರ್ತಿಗಳ ಪೌರಾಣಿಕ…
ಲೇಖಕರು: Ashwin Rao K P
April 16, 2025
ಚೆನ್ನಪ್ಪ ಅಂಗಡಿಯವರ ಕವನ ಸಂಕಲನ ‘ಇನ್ನು ಕೊಟ್ಟೆನಾದೊಡೆ’ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ೨೦೨೪ರ ಸಾಲಿನ ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ಲಭಿಸಿದೆ. ಈ ಕವನ ಸಂಕಲನಕ್ಕೆ ಆರ್. ತಾರಿಣಿ ಶುಭದಾಯಿನಿ ಇವರು ಮುನ್ನುಡಿಯನ್ನು ಬರೆದಿದ್ದು, ಅವರು ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗಗಳು… “ಚನ್ನಪ್ಪ ಅಂಗಡಿ ಅವರು ಕವಿ. ಕವಿಯಾದವನಿಗೆ ಒಳ್ಳೆಯ ಸದ್ದು, ರುಚಿ, ಸ್ಪರ್ಶ, ನೋಟ, ಗಂಧಗಳಿಗೆ ಸ್ಪಂದಿಸುವ ಗುಣವೇ ಪ್ರಧಾನವಾಗಿರುತ್ತದೆ ಎನ್ನುವುದು ಕಾವ್ಯ ಬಲ್ಲವರಿಗೆ ಗೊತ್ತು. ಆದರೆ…
ಲೇಖಕರು: Ashwin Rao K P
April 14, 2025
“ಇದೊಂದು ರೋಚಕ ಕತೆ. ಕೇವಲ ರೋಚಕ ಕತೆ ಮಾತ್ರವಲ್ಲ ಸತ್ಯ ಕತೆ. ಲೇಖಕ ಸುರೇಶ ಸೋಮಪುರ ಸ್ವತಃ ಕರ್ಣ-ಪಿಶಾಚಿನಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮನೆ-ಮಠ, ಹೆಂಡತಿ-ಮಕ್ಕಳು, ಬಂಧುಗಳು ಎಲ್ಲರನ್ನೂ ಬಿಟ್ಟು ದೀದಿ ಅಂಬಿಕಾದೇವಿಯ ಸಹಾಯದಿಂದ ಶ್ರೀ ಚೈತನ್ಯಾನಂದರನ್ನು ಭೇಟಿಯಾಗುತ್ತಾರೆ. ಅವರ ಮಾರ್ಗದರ್ಶನದಲ್ಲಿ ತಂತ್ರ-ಮಂತ್ರ, ಶವಸಾಧನೆ ಇತ್ಯಾದಿ ನಡೆಸುತ್ತಾರೆ. ಅಂತಿಮವಾಗಿ 'ಕರ್ಣ-ಪಿಶಾಚಿನಿ' ಅವರ ವಶವಾಗುತ್ತದೆ. ಯಾವುದೇ ಚಮತ್ಕಾರಕ್ಕೆ ಪಂಥಾಹ್ವಾನ ನೀಡುವುದು ಸುಲಭದ ಮಾತಲ್ಲ. ಈ ಕಾಲದಲ್ಲಿ…
ಲೇಖಕರು: Ashwin Rao K P
April 11, 2025
‘ಸಾಧನೆಯ ಸು‌ಗ್ಗಿ’ ನಾಗರಾಜು ಕೆಂಪಯ್ಯ ಅವರ ಕಾದಂಬರಿ. ಅಂತರ್ ಜಾತಿ ವಿವಾಹವಾದ ದಂಪತಿಗಳಿಗೆ ಜನಿಸಿದ ವ್ಯಕ್ತಿಯೋರ್ವನ ಜೀವನದ ಕಥೆ ಇಲ್ಲಿದೆ. ಆ ಹುಡುಗನ ಜೀವನ ವೃತ್ತಾಂತದ ಏಳು ಬೀಳುಗಳನ್ನು ಈ ಕೃತಿಯು ಒಳಗೊಂಡಿದೆ. ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ಊರ ಗೌಡರ ಮನೆಯ ಜೀತದಾಳಾಗಿ ದುಡಿಯುವ ಸಂತೋಷ ತನ್‌ನ ಸುತ್ತಲಿನ ವಿರೋಧಗಳನ್ನು ಎದುರಿಸುತ್ತಲೇ ಜೀವನವನ್ನು ರೂಪಿಸಿಕೊಳ್ಳುವ ಪರಿ ಇಲ್ಲಿ ವಿಶಿಷ್ಟವಾಗಿ ಮೂಡಿದೆ. ದ್ವೇಷ, ಅಸೂಯೆ, ಅಸಹಿಷ್ಣತೆ- ಇವೆಲ್ಲದರ ಮಧ್ಯೆ ಗಂಡು ಹೆಣ್ಣಿನ…