ದರ್ಗಾ ಮಾಳದ ಚಿತ್ರಗಳು

ದರ್ಗಾ ಮಾಳದ ಚಿತ್ರಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದನೆ ಮತ್ತು ಪರಿಚಯ : ಕೆ ಪಿ ಲಕ್ಷ್ಮಣ್
ಪ್ರಕಾಶಕರು
ಆಕೃತಿ ಪುಸ್ತಕ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೭೫.೦೦, ಮುದ್ರಣ: ೨೦೨೫

ಕೋಟಿಗಾನಹಳ್ಳಿ ರಾಮಯ್ಯ ಅವರ ಆತ್ನಕಥೆಯ ಹೆಸರೇ ‘ದರ್ಗಾ ಮಾಳದ ಚಿತ್ರಗಳು’ ಇದನ್ನು ಸಂಪಾದಿಸಿದ್ದಾರೆ ಕೆ ಪಿ ಲಕ್ಷ್ಮಣ್ ಇವರು. “ನಾವು ಹೆಚ್ಚಿನ ಸಾರಿ ರಾಜಕಾರಣ, ಸರ್ವಾಧಿಕಾರ, ಇಕಾಲಜಿ, ಕಲೆ, ಜ್ಞಾನ, ಮಕ್ಕಳು, ಶಿಕ್ಷಣ, ಧರ್ಮ, ಪುರಾಣ ಇಂತ ಹಲವು ಸಂಕೀರ್ಣ ವಿಷಯಗಳನ್ನ ‘ಮೇಲಿನವರ’ ಮತ್ತು ‘ದೂರದ’ ಕಣೋಟದಿಂದ ನೋಡಿ ಗ್ರಹಿಸಲು ಪ್ರಯತ್ನಿಸುತ್ತೇವೆ. ಇಲ್ಲಿನ ಬರಹಗಳಲ್ಲಿ ರಾಮಯ್ಯನವರು ಇದರ ವಿರುದ್ಧವಾದ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಎಲ್ಲವನ್ನು ತನ್ನ ಸುತ್ತಲು ನಡೆಯುವ ಘಟನೆ, ಮಾತುಕತೆ, ಜಗಳಗಳಿಂದ ಹಿಡಿದಿಡಿದಲು ಪ್ರಯತ್ನಿಸಿದ್ದಾರೆ. ಅದು ಶನಿದೇವರ ದೇವಸ್ಥಾನದ ಮೈಕ್‌ಸೆಟ್‌ನಲ್ಲಿ ಕೇಳುವ ‘ಯುದ್ಧಕಾಂಡ’ದ ಹಾಡಿನಿಂದ ಹಿಡಿದು ಮಕ್ಕಳ ಕಣ್ಣಿಗೆ ಕಾಣದಾಗಿರುವ ಮಾವಿನ ಚಿಗುರಿನವರೆಗೂ; ಅದರ ಹಿಂದೆ ಇರಬಹುದಾದ ಅನೂಹ್ಯ ಕಾರಣಗಳನ್ನು ಬಗೆಯುತ್ತಾ ಹೋಗುತ್ತಾರೆ. ಹಿಡಿಮಣ್ಣನ್ನು ಸೂಕ್ಷ್ಮವಾಗಿ ಜಾಲಾಡಿ ನೋಡಿ, ಇಡೀ ನೆಲದ ಗುಣವನ್ನು ಅರಿಯುವ ವಿಜ್ಞಾನಿಯಂತೆ, ಆದರೆ ಅದು ವ್ಯಕ್ತವಾಗುವ ರೀತಿ ಘನ ಗಂಭೀರವಾಗಿಯಲ್ಲದೆ ತುಂಬಾ ಜಾಗಗಳಲ್ಲಿ ತಿಳಿಯಾಗಿಯೂ ಹಗೂರವಾಗಿಯೂ ವ್ಯಕ್ತವಾಗುತ್ತದೆ.” ಎಂದಿದ್ದಾರೆ ಲಕ್ಷ್ಮಣ್ ತಮ್ಮ ಮಾತಿನಲ್ಲಿ.