ಪುಸ್ತಕ ಪರಿಚಯ

ಲೇಖಕರು: Ashwin Rao K P
December 08, 2023
೭೪ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಸಪ್ನ ಬುಕ್ ಹೌಸ್ ಹೊರತಂದ ಪುಸ್ತಕಗಳಲ್ಲಿ “ಉಳ್ಳಾಲದ ವೀರರಾಣಿ ಅಬ್ಬಕ್ಕ” ಸಹ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲ ಎಂಬಲ್ಲಿ ರಾಜ್ಯವಾಳುತ್ತಿದ್ದ ಅಬ್ಬಕ್ಕ ಎಂಬ ಮಹಿಳೆ ನಮ್ಮ ಸ್ವಾತಂತ್ರ್ಯದ ಇತಿಹಾಸದ ಪುಟಗಳಲ್ಲಿ ಅಮರಳಾಗಿ ಸೇರಿಹೋದ ಸಂಗತಿ ಎಲ್ಲರಿಗೂ ಗೊತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಗ್ರಗಣ್ಯ ಮಹಿಳೆಯರಲ್ಲಿ ಒಬ್ಬರಾದ ಅಬ್ಬಕ್ಕನ ಬಗ್ಗೆ ಬಹುತೇಕರಿಗೆ ತಿಳಿದಿರುವುದು ಅಲ್ಪವೇ. ಪೋರ್ಚುಗೀಸ್ ಸೈನಿಕರ ವಿರುದ್ಧ…
ಲೇಖಕರು: addoor
December 07, 2023
ಈಗಾಗಲೇ 12 ಸಲ ಮುದ್ರಣವಾಗಿರುವ, ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಳ್ಳಬೇಕಾದ ಪುಸ್ತಕ ಇದು - ಯಾಕೆ? ಎಂಬುದನ್ನು ಲೇಖಕರ ಮಾತಿನಲ್ಲೇ ಕೇಳೋಣ: “ಡಿಪ್ರೆಷನ್, ಇನ್‌ಪೀರಿಯಾರಿಟಿ ಕಾಂಪ್ಲೆಕ್ಸ್, ಆಂಕ್ಸೈಟಿ … ಮೊದಲಾದ ಅನುಭವಗಳಿಗೆ ಅಂಟಿಕೊಂಡು, ಸಂತೋಷ ಅನುಭವಿಸಬೇಕಾದ ಹರಯವನ್ನು ಸಂತೋಷವಿಲ್ಲದೆಯೇ ಕಳೆದ ನಂತರ, ಶಾಂತಿಯಾದರೂ ಸಿಕ್ಕೀತೇ ಎಂದು (ಹಿಂದಿನ ಬಾಗಿಲಿನಿಂದಲೋ? ಮುಖಕ್ಕೆ ಮುಸುಕು ಹಾಕಿಕೊಂಡೋ?) ಸೈಕಾಲಜಿಸ್ಟ್‌-ರನ್ನು ನೋಡುವ ಜನರೇ ಹೆಚ್ಚು ಇರುವ ಈ ಸಮಾಜದಲ್ಲಿ …. ಎಳೆ ಹರೆಯ ಇನ್ನೂ…
ಲೇಖಕರು: Ashwin Rao K P
December 06, 2023
ವೀರೇಂದ್ರ ರಾವಿಹಾಳ್ ಅವರ ನೂತನ ಕಥಾ ಸಂಕಲನ “ಡಂಕಲ್ ಪೇಟೆ" ಇತ್ತೀಚೆಗೆ ಬಿಡುಗಡೆಯಾಗಿದೆ. ಸುಮಾರು ೧೫೦ ಪುಟಗಳನ್ನು ಹೊಂದಿರುವ ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಹಿರಿಯ ಲೇಖಕರಾದ ಜಿ ಪಿ ಬಸವರಾಜು. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮಓದಿಗಾಗಿ... “ಡಂಕಲ್‌ಪೇಟೆ' ಒಂದು ಕಲ್ಪನಾ ವಿಲಾಸದಲ್ಲಿ ಕಟ್ಟಿದ ಪೇಟೆಯಲ್ಲ. ಅದು ಈ ನೆಲದ ಗಾಳಿ- ಮಳೆ- ದೂಳು-ಕೆಸರು- ಉಸಿರು- ಬೆವರು- ಜನ- ಭಾಷೆ- ಸಂಸ್ಕೃತಿ- ನಂಬಿಕೆ-ನಿತ್ಯದ ಗೋಳು-ನಗುವಿನ ಅಬ್ಬರ-ಎಲ್ಲವನ್ನೂ…
ಲೇಖಕರು: Ashwin Rao K P
December 04, 2023
ನಾವಿಂದು ಮನೆ, ಕಚೇರಿಗಳಲ್ಲಿ ಬಳಸುತ್ತಿರುವ AC ವಿದ್ಯುತ್ ವ್ಯವಸ್ಥೆಯನ್ನು ರೂಪಿಸಿದ್ದು ನಿಕೊಲಾ ಟೆಸ್ಲಾ ಎಂಬ ವಿಜ್ಞಾನಿ. ಈತನ ಬಗ್ಗೆ ನಮಗೆ ಪಠ್ಯ ಪುಸ್ತಕಗಳಲ್ಲಾಗಲೀ, ವಿಜ್ಞಾನ ಸಂಬಂಧೀ ಪುಸ್ತಕಗಳಲ್ಲಾಗಲೀ ಮಾಹಿತಿ ದೊರೆತದ್ದು ಕಡಿಮೆ. ಈ ಕೊರತೆಯನ್ನು ನೀಗಿಸಲು ಲೇಖಕರಾದ ಡಿ ಆರ್ ಬಳೂರಗಿ ಅವರು “ವಿದ್ಯುತ್ ಮಾಂತ್ರಿಕ ನಿಕೊಲಾ ಟೆಸ್ಲಾ” ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಈ ಪುಸ್ತಕದ ಲೇಖಕರ ಮಾತಿನಲ್ಲಿ ಅವರು ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ...  “ಕ್ರಿಸ್ತಪೂರ್ವದಲ್ಲಿಯೇ…
December 03, 2023
"ಸಾಸಿವೆ ತಂದವಳು" ಓದುತ್ತಾ, ಶುರುವಿನಲ್ಲಿ ನನ್ನ ಬಗ್ಗೆನೇ ಓದಿಕೊಳ್ಳುತ್ತಾ ಇದ್ದೆನಾ ಅನ್ನಿಸಿತು. ತಕ್ಷಣವೇ ಭಾರತೀ ಅಕ್ಕನಿಗೆ ಮೆಸೇಜ್ ಕೂಡಾ ಮಾಡಿದೆ. ಓದ್ತಾ ಓದ್ತಾ, ಅವರು ಬರೆದಿದ್ದ ಒಂದೊಂದು ವಿಷಯಗಳೂ ಹಾಗೇ ಕಣ್ಣ ಮುಂದೆ ಬರಕ್ಕೆ ಶುರು ಆದ್ವು. ಹತ್ರತ್ರ 14 ವರ್ಷ ಆಗಿತ್ತು ಈ ಥರ ಕೂತು ಬುಕ್ ಓದದೇ. ಅಡುಗೆನೂ ಮಾಡದೇ ಕೂತು ಓದಿ ಮುಗಿಸಿದೆ,''  ಇವರು ನನಗೆ ಪರಿಚಯ ಆಗಿ 6- 7 ವರ್ಷ ಆಗಿರಬಹುದು. 5 ವರ್ಷದ ಹಿಂದೆ, ನಾನು ಇಲ್ಲಿಗೆ ಬರುವ ಮೊದಲೂ ಈ ಬುಕ್ ತೊಗೊಬೇಕು ಅಂದುಕೊಂಡು, ಅದು…
ಲೇಖಕರು: Ashwin Rao K P
December 02, 2023
ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಯಶೋಧರಾ ದಾಸಪ್ಪ ಅವರು ರಾಜಕಾರಣಿಯಾಗಿ, ಶಾಸನ ಸಭೆಯ ಪ್ರತಿನಿಧಿಯಾಗಿ, ಸ್ವತಂತ್ರ ಭಾರತದಲ್ಲಿ ರಾಜ್ಯದ ಸರಕಾರದ ಮಂತ್ರಿಯಾಗಿ ಕೆಲಸ ನಿರ್ವಹಿಸಿ ಯಶಸ್ವಿಯಾದವರು. ದೇಶ ಕಂಡ ಈ ಅಪರೂಪದ ರಾಜಕಾರಣಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರೂ ಆಗಿದ್ದರು. ಇವರು ನಮ್ಮ ರಾಜ್ಯದ ಪ್ರಥಮ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ. ಇವರ ನಂತರ ಈವರೆಗೂ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ಅಧ್ಯಕ್ಷರ ನೇಮಕ ಆಗಿಲ್ಲ. ಇಂದಿನ ಕಾಂಗ್ರೆಸ್ ಮಂದಿಗೇ…