ಪುಸ್ತಕ ಪರಿಚಯ
ಲೇಖಕರು: Ashwin Rao K P
February 21, 2025

“ಗುಣ ಲಕ್ಷಣ + ಅವಕಾಶ = ಯಶಸ್ಸು ಎನ್ನುವ ಇನ್ ಫೋಸಿಸ್ ನ ಸ್ಥಾಪಕರಲ್ಲೊಬ್ಬರಾದ ಎನ್ ಆರ್ ನಾರಾಯಣ ಮೂರ್ತಿಯವರ ಮಾತನ್ನು ಮುಖಪುಟದಲ್ಲೇ ಪ್ರಕಟಿಸಿದ್ದಾರೆ ‘ಸಾಧಕರ ೮ ವಿಶೇಷ ಗುಣಗಳು’ ಕೃತಿಯ ಲೇಖಕರಾದ ಸುಂಬರ್ ಬಾಬು ಇವರು. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ‘ಉಪ್ಪಿಗಿಂತ ರುಚಿ ಬೇರೆ ಇಲ್ಲ’ ಎಂಬ ಕೃತಿಯ ಲೇಖಕರಾದ ರಾಮಸ್ವಾಮಿ ಹುಲಕೋಡು. ಅವರು ತಮ್ಮ ‘ಎಂಟರ ನಂಟು ಬೆಳೆಯಲಿ’ ಎನ್ನುವ ಬರಹದಲ್ಲಿ “ ಎಂಟು ಎಂದರೆ ಸಂಸ್ಕೃತದಲ್ಲಿ ‘ಅಷ್ಟ’. ಅಷ್ಟ ಸಿದ್ದಿ ಸಾಧಿಸಿದರೇನೆ ಯೋಗಿಯಾಗಲು ಸಾಧ್ಯ…
ಲೇಖಕರು: Ashwin Rao K P
February 19, 2025

ಸಂತೆಕಸಲಗೆರೆ ಪ್ರಕಾಶ್ ಎಬವರು ‘ಬೂಸ್ಟರ್ ಡೋಸ್ ಮುನಿಯಪ್ಪ’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಕೇಶವ ಮಳಗಿ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…
“ಎರಡು-ಮೂರು ವರ್ಷಗಳ ಕಾಲ ಕಾಡಿದ ಸೋಂಕಿನ ಕರಾಳಛಾಯೆ ನಮ್ಮ ಸಮಾಜವನ್ನು ಇನ್ನೂ ಸಂಪೂರ್ಣವಾಗಿ ತೊರೆದುಹೋಗಿಲ್ಲ. ಸಮಾಜವೊಂದರಲ್ಲಿ ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುವ ಸಾಂಕ್ರಾಮಿಕ ಜಾಡ್ಯವೊಂದು ಏನನ್ನು ಸೂಚಿಸುತ್ತದೆ ಎಂಬ ಪ್ರಶ್ನೆ ಕೇಳಿಕೊಂಡು…
ಲೇಖಕರು: Ashwin Rao K P
February 17, 2025

ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಸೂರ್ಯೋದಯ’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ಸುವಿಚಾರಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ ಸಂಕಲನವನ್ನು ಮಾಡಿದ್ದಾರೆ. ಕೆಲವೇ ಕೆಲವು ವಾಕ್ಯಗಳಲ್ಲಿ ನಮಗೆ ಜೀವನ ಮೌಲ್ಯಗಳನ್ನು ಕಲಿಸಬಲ್ಲ ಶಕ್ತಿ ಈ ಸುವಿಚಾರಗಳಿಗಿವೆ. ತಮ್ಮ ಮನದಾಳದ ನುಡಿಗಳನ್ನು ರತ್ನಾ ಭಟ್ ಅವರು ಹಂಚಿಕೊಂಡಿರುವುದು ಹೀಗೆ…
“ ಮೊದಲಿನಿಂದಲೂ ಬರೆಯುವ ಹವ್ಯಾಸವಿಟ್ಟುಕೊಂಡಿದ್ದ ನನಗೆ…
ಲೇಖಕರು: Ashwin Rao K P
February 14, 2025

‘ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ವಾರೆನೋಟ ಎನ್ನುವ ಅಂಕಣ ಬರೆಯುತ್ತಿದ್ದ ದೀಕ್ಷಿತ್ ನಾಯರ್ ಎನ್ನುವ ಚಿಗುರು ಮೀಸೆಯ ಹುಡುಗನ ಸಾಧನೆ ದೊಡ್ದದು. ಬರೆದ ಬರಹಗಳನ್ನು ಒಟ್ಟುಗೂಡಿಸಿ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಬೆನ್ನುಡಿ ಬರೆದು ಹುದಿದುಂಬಿಸಿದ್ದಾರೆ ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಪಾದಕಿ ಭಾವನಾ ಬೆಳಗೆರೆ. ಅಗಲಿದ ತನ್ನ ಅಪ್ಪ ರವಿ ಬೆಳಗೆರೆಯವರ ಅಪ್ಪಟ ಅಭಿಮಾನಿಯಾಗಿರುವ ದೀಕ್ಷಿತ್ ನಾಯರ್ ಎಂಬ ಹುಡುಗನ ಬಗ್ಗೆ ಅವರು…
ಲೇಖಕರು: Ashwin Rao K P
February 12, 2025

ಲೇಖಕ ಮಂಜುನಾಥ್ ಚಾಂದ್ ಅವರ ‘ಕಾಡ ಸೆರಗಿನ ಸೂಡಿ’ ಕಾದಂಬರಿಯು 1930ರ ದಶಕದ ಭಾರತ ಸ್ವಾತಂತ್ರ್ಯ ಹೋರಾಟವನ್ನು ಹಿನ್ನೆಲೆಯಾಗಿರಿಸಿಕೊಂಡು ರಚಿಸಿದ ತ್ಯಾಗ ಮತ್ತು ಬಲಿದಾನದ ಕಥನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಲೇಖಕ ಜಗದೀಶ್ ಕೊಪ್ಪ ಅವರು “ ಅನೇಕ ರೋಚಕ ತಿರುವುಗಳ ನಡುವೆಯೂ ಈ ಕಾದಂಬರಿಯು ಹಲವು ಬಗೆಯ ಕುತೂಹಲ, ವಿಷಾದಗಳ ಜೊತೆ ರೋಮಾಂಚನವನ್ನುಂಟು ಮಾಡುತ್ತಾ, ಓದಿದ ನಂತರವೂ ಓದುಗರನ್ನು ನಿರಂತರವಾಗಿ ಕಾಡುವ ಗುಣವನ್ನು ಒಳಗೊಂಡಿರುವುದು ವಿಶೇಷವಾಗಿದೆ’ ಎಂದು ಪ್ರಶಂಸಿಸಿದ್ದಾರೆ.
ಈ…
ಲೇಖಕರು: addoor
February 11, 2025

ಸುಮಾರು ಐದು ಸಾವಿರ ವರುಷಗಳ ಪರಂಪರೆ ಇರುವ ಭಾರತದ ಆಯುರ್ವೇದದ ಬಗ್ಗೆ ನಮ್ಮೆಲ್ಲರ ಕಣ್ಣು ತೆರೆಸಬಲ್ಲ ಪುಸ್ತಕ ಇದು. ಮುಂಬೈ ವೈದ್ಯರಾದ ಶರದಿನಿ ದಹನೂಕರ್ ಮತ್ತು ಊರ್ಮಿಳಾ ತಟ್ಟೆ ಬರೆದಿರುವ ಈ ಪುಸ್ತಕವನ್ನು ಡಾ. ಎಚ್.ಡಿ. ಚಂದ್ರಪ್ಪ ಗೌಡ ಕನ್ನಡಕ್ಕೆ ಅನುವಾದಿಸಿದ್ದಾರೆ.
ಇದರಲ್ಲಿರುವ 14 ಅಧ್ಯಾಯಗಳು:
1)ಪ್ರಸ್ತಾವನೆ 8)ನಾಲ್ಕನೆಯ ಆಯಾಮ: ಕಾಲ
2)ಒಂದು ಪಕ್ಷಿನೋಟ 9)ಪಥ್ಯಾಹಾರ
3)ಆಳುವವರು: ದೋಷಗಳು 10)ಮೊದಲನೆ ಮತ್ತು ಎರಡನೆ ಬಾಲ್ಯಾವಸ್ಥೆ
4)ಜನತೆ:…