ಪುಸ್ತಕ ಪರಿಚಯ

ಲೇಖಕರು: Ashwin Rao K P
September 05, 2023
ನೀಲಿ ನಕ್ಷೆ’ ಅಮಿತಾ ಭಾಗವತ್‌ ಅವರ ರಚನೆಯ ಕಾದಂಬರಿಯಾಗಿದೆ. ಕಡಲ ಕಿನಾರೆಯಲ್ಲೆ ಹುಟ್ಟಿದ ನದಿಯಂಥ ಸರಯೂಳ, ಕಾಣದ ಕಡಲ ಕಡೆಗಿನ ತುಡಿತದ ಹೊಳಪಿನ ಕಥನ ಇದು. ಲವಲವಿಕೆಯ ಸಣ್ಣ ಊರಾದ ಕಾರವಾರದಿಂದ, ಹತ್ತನೇ ತರಗತಿಯ ನಂತರ, ಕೇವಲ ಸಿನೆಮಾದಲ್ಲಷ್ಟೆ ಕಂಡಿದ್ದ ಮುಂಬಯಿ ಶಹರಕ್ಕೆ ಬಂದ ಹುರುಪಿನ ಕಿಶೋರಿ ಸರಯೂ, ಆ ಮಹಾನಗರದ 'ಮಗಜಮಾರಿ'ಯ ಗೌಜಿಯಲ್ಲಿ ತನ್ನ ಹೆಜ್ಜೆ ದನಿಗಳನ್ನು ಹೊಸದಾಗಿ ಆಲಿಸುತ್ತ, 'ಕಿಟಕಿಯನ್ನು ಒದ್ದೆ ಬಟ್ಟೆಯಿಂದ ಒರೆಸುತ್ತ', ರೂಪುಗೊಂಡ ನಿಬಿಡ ಆವರಣ ಇದು. ಸಮಾಜ ಹೇರುವ ಅಯಾಚಿತ…
ಲೇಖಕರು: Ashwin Rao K P
September 02, 2023
ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ಅವರು ತಮ್ಮ ಸಂಪಾದಕತ್ವದ ‘ವಿಶ್ವವಾಣಿ' ಪತ್ರಿಕೆಯ ಸಂಪಾದಕೀಯ ಕಾಲಂನ ಕೊನೆಯಲ್ಲಿ ಬರೆಯುತ್ತಿರುವ ಪುಟ್ಟ ಪುಟ್ಟ ಬರಹಗಳೇ 'ಸಂಪಾದಕರ ಸದ್ಯಶೋಧನೆ'. ಈ ಬರಹಗಳನ್ನು ತಲಾ ನೂರು ಅಧ್ಯಾಯಗಳಂತೆ ಸಂಗ್ರಹಿಸಿ ಮೂರು ಪುಸ್ತಕಗಳನ್ನು ಹೊರತಂದಿದ್ದಾರೆ. ಈ ಮೂರೂ ಪುಸ್ತಕಗಳಲ್ಲಿ ಯಾವುದನ್ನು ಬೇಕಾದರೂ ಮೊದಲು ಓದಬಹುದು. ಪುಸ್ತಕದಲ್ಲೂ ಯಾವ ಪುಟದಿಂದಲೂ ನಿಮ್ಮ ಓದನ್ನು ಪ್ರಾರಂಭಿಸಬಹುದಾಗಿದೆ ಎಂದು ಲೇಖಕರೇ ಹೇಳಿಕೊಂಡಿದ್ದಾರೆ. ಇದು ನಿಜವೂ ಹೌದು.  ಕಡಿಮೆ…
ಲೇಖಕರು: addoor
September 01, 2023
ಕರಕುಶಲ ಕಲೆಗಳು ಅಥವಾ ಗುಡಿಗಾರಿಕೆ ನಮ್ಮ ಸಂಪನ್ನ ಪರಂಪರೆಯ ಭಾಗ. ಭಾರತದ ಪ್ರತಿಯೊಂದು ರಾಜ್ಯವೂ ಅಲ್ಲಿನ ವಿಶೇಷ ಕರಕುಶಲ ಕಲೆಗೆ ಜಗತ್ಪ್ರಸಿದ್ಧ. ಕರಕುಶಲಗಾರರು ರಚಿಸುವ ಕರಕುಶಲ ವಸ್ತುಗಳು ನೋಡಲು ಚಂದ ಮಾತ್ರವಲ್ಲ ಬಳಕೆಗೂ ಅನುಕೂಲವಾದವುಗಳು. ಅವು ಬದುಕಿಗೂ ಒಂದು ಅರ್ಥ ಕೊಡುತ್ತವೆ ಎಂಬುದೇ ಅವುಗಳ ವಿಶೇಷತೆ. ಈ ಪುಟ್ಟ ಪುಸ್ತಕದಲ್ಲಿ ನಮ್ಮ ದೇಶದ ವಿವಿಧ ರಾಜ್ಯಗಳ ಕರಕುಶಲ ಕಲೆ ಹಾಗೂ ಆ ಕುಶಲಕರ್ಮಿಗಳು ನಿರ್ಮಿಸುವ ವಸ್ತುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. ರಾಮಾಯಣ ಕಾಲದಿಂದಲೂ…
ಲೇಖಕರು: Ashwin Rao K P
August 31, 2023
ನಾಟಕಗಳನ್ನು ಬರೆದು, ಮುದ್ರಿಸಿ ಹೊರತರುವ ನಾಟಕಕಾರರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಬಹುಷಃ ಇದಕ್ಕೆ ಕಾರಣ ಬರೆದ ನಾಟಕಗಳು ರಂಗದ ಮೇಲೆ ಪ್ರದರ್ಶನ ಕಾಣುವುದು ಬಹಳ ಕಡಿಮೆ. ಈ ಕಾರಣದಿಂದ ಬರೆದ ನಾಟಕಗಳು ಪ್ರದರ್ಶನದ ಭಾಗ್ಯವಿಲ್ಲದೆ ಸೊರಗತೊಡಗಿವೆ. ದಶಕಗಳ ಹಿಂದೆ ರಂಗ ಮಂದಿರಗಳಲ್ಲಿ ಬಹಳಷ್ಟು ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಆದರೆ ಈಗ ಇವುಗಳ ಸಂಖ್ಯೆ ಬೆರಳೆಣಿಕೆಯಷ್ಟು.  ಭರವಸೆಯ ನಾಟಕಕಾರ ಎನ್ ಸಿ ಮಹೇಶ್ ಅವರು ಬರೆದ ‘ಸಾಕು ತಂದೆ ರೂಮಿ' ಎಂಬ ನಾಟಕ ಪುಸ್ತಕ…
ಲೇಖಕರು: Ashwin Rao K P
August 29, 2023
೨೦೧೮ನೇ ಸಾಲಿನ ಸಾಹಿತ್ಯ ಅಕಾಡೆಮಿಯ ಚಿ.ಶ್ರೀನಿವಾಸರಾಜು ದತ್ತಿ ಪ್ರಶಸ್ತಿ ಪಡೆದ ಕೃತಿ ಕವಯತ್ರಿ ಸ್ಮಿತಾ ಮಾಕಳ್ಳಿ ಅವರ ‘ಒಂದು ಅಂಕ ಮುಗಿದು’. ಈ ಕೃತಿಗೆ ಡಾ.ಹೆಚ್.ಎಲ್. ಪುಷ್ಪ ಅವರ ಮುನ್ನುಡಿ ಹಾಗೂ ಸುಬ್ಬು ಹೊಲೆಯಾರ್ ಅವರ ಬೆನ್ನುಡಿ ಬರಹಗಳಿವೆ. ಸುಮಾರು ೧೦೬ ಪುಟಗಳ ಈ ಚೊಚ್ಚಲ ಕವನ ಸಂಕಲನದ ಕವಿತೆಗಳು ಬಹಳ ಸೊಗಸಾಗಿವೆ. ಕೃತಿಗೆ ಮುನ್ನುಡಿ ಬರೆದ ಡಾ ಹೆಚ್ ಎಲ್ ಪುಷ್ಪ ಅವರ ಮಾತುಗಳನ್ನು ಆಯ್ದು ಇಲ್ಲಿ ನೀಡಲಾಗಿದೆ... “ಸ್ಮಿತಾ ಮಾಕಳ್ಳಿಯವರ ಚೊಚ್ಚಲ ಕವನ ಸಂಕಲನದಲ್ಲಿ ಇಂತಹ ನಿರ್ಜನ…
ಲೇಖಕರು: Ashwin Rao K P
August 26, 2023
‘ನೀರು” ನಾ.ಮೊಗಸಾಲೆ ಅವರ ರಚನೆಯ ಕಾದಂಬರಿಯಾಗಿದೆ. ಒಂದು ಕುಟುಂಬ ಕತೆ ಮತ್ತು ಒಂದು ಸಣ್ಣ ವ್ಯಾಜ್ಯದಿಂದ ಪ್ರಾರಂಭವಾಗುವ ಈ ಕಾದಂಬರಿಯು ಹಲವು ಸಾಮಾಜಿಕ ವ್ಯವಸ್ಥೆಗಳ ಸಂಘರ್ಷಗಳ ನಿರೂಪಣೆಯಾಗುತ್ತದೆ. ನಾ. ಮೊಗಸಾಲೆಯವರ ಕಾದಂಬರಿಗಳು ವಿಶೇಷವಾಗುವುದೇ ಈ ಹೊಳವಿನಿಂದ. ಅವರ ಎಲ್ಲ ಸಾಮಾಜಿಕ ಪ್ರಯೋಗಗಳ ಉತ್ಪನ್ನವಾಗಿ ಸೀತಾಪುರ ಕಾಣಿಸಿಕೊಳ್ಳುತ್ತದೆ. ಪುರಾಣ, ಇತಿಹಾಸ ಪೂರ್ವ ಮತ್ತು ಪ್ರಸ್ತುತ ಭಾರತಗಳು ಅವರ ಸೀತಾಪುರವೆಂಬ ಬಿಂದುವಿನಲ್ಲಿ ಅಭಿಗಮಿಸುತ್ತವೆ. ಸೀತಾಪುರವು ತನ್ನ ರಕ್ತದಲ್ಲೇ…