ಪುಸ್ತಕ ಪರಿಚಯ

ಲೇಖಕರು: Ashwin Rao K P
September 20, 2023
‘ಯಾಬ್ಲಿ’ ಎಚ್.ಆರ್. ರಮೇಶ ಅವರ ಕಥಾಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಬದುಕಿನ ಅನೇಕ ಸಂಗತಿ ಮತ್ತು ಅನುಭವಗಳಿಗೆ ಮುಖಾಮುಖಿಯಾಗಿ ಅದನ್ನೆಲ್ಲ ಕತೆಯಲ್ಲಿ ಹಿಡಿದಿಡುವುದು ಅಸಾಧ್ಯದ ಮಾತು. ಹಿಡಿದಿಡಲು ಪ್ರಯತ್ನಪಟ್ಟರೂ ಸಿಕ್ಕುವುದು ಒಂದು ಚುಕ್ಕಿಯಷ್ಟು ಮಾತ್ರ. ಆ ಅಷ್ಟಾದರೂ ಕತೆಯಲ್ಲಿ / ಕಲೆಯಲ್ಲಿ ಯಥಾವತ್ತಾಗಿ ಮೂಡುವುದಾ, ನೋ ವೇ! ವಾಸ್ತವವೆನ್ನುವುದು ಯಾವ ಕಾರಣಕ್ಕೂ ಭಾಷೆಯಲ್ಲಿ ಇದ್ದ ಹಾಗೆ ಮೂಡುವುದೇ ಇಲ್ಲ. ಅದು ಬೇರೆ ಬಗೆಯಲ್ಲೇ ಇರುತ್ತದೆ. ಏನನ್ನೋ ಹೇಳಲು…
ಲೇಖಕರು: Ashwin Rao K P
September 16, 2023
ಆಂಧ್ರಪ್ರದೇಶ ಮೂಲದ ವಲ್ಲೂರು ಹುಸೇನಿ ಅವರು ತಮ್ಮ “ಹುಸೇನಿ ದ್ವಿಪದಿಗಳು” ಎಂಬ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಕವಿ, ವಿಮರ್ಶಕರೂ ಆದ ನಾಗೇಶ ಜೆ ನಾಯಕ ಇವರು ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ. ವಲ್ಲೂರು ಹುಸೇನಿ ಅವರು ತಮ್ಮ ಲೇಖಕರ ನುಡಿ “ದಿಲ್ ಕೀ ಬಾತ್" ನಲ್ಲಿ ಮನದಾಳದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದು ಹೀಗೆ... “ಆಂಧ್ರ ಮೂಲದ 'ಹುಸೇನಿ' ಕೇವಲ 'ಕವಿ'ಯೆಂದೆನಿಸಿಕೊಳ್ಳಲು ಅವಸರದಿ ಕೃತಿ ಪ್ರಕಟಿಸಿದರೆಂದ ಹಿರಿಯರ ಮಾತಿಗೆ ಐದು ವರ್ಷಗಳ ಬೊಗಸೆ…
ಲೇಖಕರು: Ashwin Rao K P
September 14, 2023
ತ್ರಿಕೋನ ಪ್ರೇಮದ ಕಥಾ ಹಂದರವನ್ನು ಹೊಂದಿರುವ "ಚಂದ್ರಮಾನೆ" ಎಂಬ ಕಾದಂಬರಿಯನ್ನು ಬರೆದವರು ಕಗ್ಗೆರೆ ಪ್ರಕಾಶ್. ಇವರು ತಮ್ಮ ಈ ಪುಟ್ಟ ಕಾದಂಬರಿಯಲ್ಲಿ ತ್ರಿಕೋನ ಪ್ರೇಮವನ್ನು ಬಹಳ ಸೊಗಸಾಗಿ ಹೇಳ ಹೊರಟಿದ್ದಾರೆ. ಈ ಬಗ್ಗೆ ಅವರೇ ತಮ್ಮ ಮಾತು ‘ನಿಮ್ಮೊಂದಿಗೆ..." ಇಲ್ಲಿ ಹೇಳಿದ್ದು ಹೀಗೆ… “ಕಥಾನಾಯಕ ‘ಚಂದ್ರ’ ಅರವತ್ತು ವರ್ಷ ವಯಸ್ಸಿನ ಗಂಡ. ಕಥಾನಾಯಕಿ ‘ಮಾನೆ’ ಐವತ್ತು ವರ್ಷದ ಹೆಂಡತಿ. ಇವರಿಬ್ಬರ ಜೋಡಿಯ ಕಾದಂಬರಿ ಶೀರ್ಷಿಕೆಯೇ ‘ಚಂದ್ರಮಾನೆ.’ ಇವರಿಬ್ಬರ ನಡುವೆ ವಿಲನ್‌ನಂತೆ ಬರುವ…
ಲೇಖಕರು: addoor
September 14, 2023
ಕನ್ನಡದ ಮೇರು ಸಾಹಿತಿಗಳಲ್ಲಿ ಒಬ್ಬರಾದ ಕುವೆಂಪು ಅವರು ಬರೆದ ಒಂಭತ್ತು ಕತೆಗಳು ಈ ಸಂಕಲನದಲ್ಲಿವೆ. ಗ್ರಾಮೀಣ ಬದುಕನ್ನು ಕಟ್ಟಿ ಕೊಡುವ ಇಲ್ಲಿನ ಕೆಲವು ಕತೆಗಳಲ್ಲಿ ಕುವೆಂಪು ಅವರ ಬಾಲ್ಯದ ಅನುಭವಗಳ ಪ್ರಭಾವ ಗಾಢವಾಗಿದೆ. ಮೊದಲ ಕತೆ "ಸನ್ಯಾಸಿ". ಸಂಸಾರ ತೊರೆದು, ಸನ್ಯಾಸಿ ದೀಕ್ಷೆ ಪಡೆದು ನೆಮ್ಮದಿ ಕಂಡುಕೊಂಡ ಚೈತನ್ಯ ಅನಂತರ ಅಚಾನಕ್ ದ್ವಂದ್ವವನ್ನು ಎದುರಿಸಬೇಕಾಗುತ್ತದೆ. ತನ್ನ ಗುರುಗಳ ಆಶೀರ್ವಾದದಿಂದಲೇ ಆತನು ಆ ದ್ವಂದ್ವದಿಂದ ಹೊರಬರುವುದು ಈ ಕತೆಯ ಹಂದರ. ಅಧ್ಯಾತ್ಮದ ಹಾದಿಯಲ್ಲಿ…
ಲೇಖಕರು: Ashwin Rao K P
September 12, 2023
೧೯೭೫ರ ಜೂನ್ ೨೫ರಂದು ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗುತ್ತದೆ. ನಂತರದ ೬೩೫ ದಿನಗಳು ಭಾರತದ ಇತಿಹಾಸದ ಕರಾಳದಿನಗಳಾಗಿ ದಾಖಲಾಗಿವೆ. ಭಾರತದ ಪ್ರಜಾಪ್ರಭುತ್ವವನ್ನೂ, ಸ್ವಾತಂತ್ರ್ಯವನ್ನೂ ಅತಿಕ್ರಮಿಸಿ ನುಂಗಿದ ಸರ್ವಾಧಿಕಾರಿಯ ಆಜ್ಞೆಯಂತೆ ಭಾರತದ ಸಂವಿಧಾನಕ್ಕೆ ವಿರುದ್ಧವಾದ ರಾಜನೀತಿ, ಜನರ ಮನಸ್ಸಿನಲ್ಲಿ ಭಯಾತಂಕಗಳ ಕರಾಳ ನೆನಪುಗಳನ್ನು ಅಚ್ಚೊತ್ತಿ ಬಿಟ್ಟಿದೆ. ತುರ್ತು ಪರಿಸ್ಥಿತಿಯ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಹೊರಬಂದಿವೆ. ಈಗ ಹೊರಬಂದಿರುವ “ತುರ್ತು ಪರಿಸ್ಥಿತಿಯ ಕರಾಳ…
ಲೇಖಕರು: Ashwin Rao K P
September 09, 2023
‘ಚೋದ್ಯ’ ಅನುಪಮಾ ಪ್ರಸಾದ್‌ ಅವರ ಕಥಾಸಂಕಲನವಾಗಿದೆ. ಏಕಾಂತಕ್ಕಿಳಿದು ಬರೆಯಲು ತೊಡಗುವುದು.. ನಂತರ ಅದು ಬರೆಸಿಕೊಳ್ಳುತ್ತಾ ಹೋಗುವ ಪ್ರಕ್ರಿಯೆ.. ಮತ್ತೆಲ್ಲೊ ಒಂದು ಕಡೆ ಅದೇ ಕಂಡುಕೊಳ್ಳುವ ನಿಲುಗಡೆ.. ಇದೆಲ್ಲ ಸೇರಿದಾಗ ಸಿಗುವ ಮೊತ್ತವೇ ಕಥೆಯೆಂಬ ಚೋದ್ಯ ಅಂತಹ ಕೆಲವು ಈಗ ಮತ್ತೆ ನಿಮ್ಮ ಓದಿಗಾಗಿ ಕಾಯುತ್ತಿವೆ. ಕೈಗೆತ್ತಿಕೊಳ್ಳುವ ನಿಮಗೆ ಶರಣು. ಇಲ್ಲಿರುವ ಕಥೆಗಳಲ್ಲಿ ಕೆಲವು ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ ಹಾಗು ಮಯೂರ, ತುಷಾರ, ತರಂಗ ವಿಶೇಷಾಂಕ, ವಿಜಯವಾಣಿ ವಿಶೇಷಾಂಕ, ಸುಧಾ…