ಪುಸ್ತಕ ಪರಿಚಯ

ಲೇಖಕರು: Ashwin Rao K P
August 24, 2023
ನವೀನ್ ಸೂರಿಂಜೆ ಅವರು ಬರೆದ ‘ನೇತ್ರಾವತಿಯಲ್ಲಿ ನೆತ್ತರು' ಕೃತಿ ರಕ್ತಸಿಕ್ತ ಹೋರಾಟದ ಸಮಗ್ರ ಚಿತ್ರಣವನ್ನು ನೀಡುತ್ತದೆ. ೧೮೪ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ನಿವೃತ್ತ ಎಸಿಪಿ ಬಿ.ಕೆ.ಶಿವರಾಂ ಅವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ನಿಮ್ಮ ಓದಿಗಾಗಿ...  “ನವೀನ್ ಸೂರಿಂಜೆಯವರು ತಮ್ಮ `ನೇತ್ರಾವತಿಯಲ್ಲಿ ನೆತ್ತರು’ ಪುಸ್ತಕಕ್ಕೆ ಮುನ್ನುಡಿ ಬರೆಯಲು ಹೇಳಿದಾಗ ಒಂದು ಕ್ಷಣ ತಬ್ಬಿಬ್ಬಾದೆ. ಈ ಪುಸ್ತಕವನ್ನು ಕರ್ನಾಟಕ ಕಂಡ ಮಾನವೀಯ…
ಲೇಖಕರು: addoor
August 24, 2023
ನಮ್ಮ ಭಾರತದ ಸಾವಿರಾರು ವರುಷ ಪುರಾತನ “ಸಾರ್ವಕಾಲಿಕ ಪುಸ್ತಕ”ಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಪುಸ್ತಕ ಇದು. ಇದನ್ನು ಬರೆದವರು ಮನೋಜ್ ದಾಸ್ ಮತ್ತು ಕನ್ನಡಕ್ಕೆ ಅನುವಾದಿಸಿದವರು ಪ್ರಖ್ಯಾತ ಸಾಹಿತಿ ಹಾಗೂ ಕವಿ ಎಂ. ಗೋಪಾಲಕೃಷ್ಣ ಅಡಿಗರು. ಸುಕುಮಾರ್ ಚಟರ್ಜಿ ರಚಿಸಿದ ಚಂದದ ಚಿತ್ರಗಳು ಪುಸ್ತಕಕ್ಕೆ ಮೆರುಗು ನೀಡಿವೆ. ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಪುರಾಣಗಳು, ತಿರುಕುರಳ್, ಕಥಾಸರಿತ್ಸಾಗರ, ಪಂಚತಂತ್ರ ಮತ್ತು ಜಾತಕ ಕತೆಗಳನ್ನು ಪ್ರತ್ಯೇಕ ಅಧ್ಯಾಯಗಳಲ್ಲಿ…
ಲೇಖಕರು: Ashwin Rao K P
August 22, 2023
“ವಿನೋದಕ್ಕಾಗಿ ಹೇಳಿದ ಮಾತುಗಳನ್ನು ನಿಜಾರ್ಥದಲ್ಲಿ ಗಂಭೀರವಾಗಿ ಪರಿಗಣಿಸಬೇಡಿ.” ಎನ್ನುವ ಮಾತನ್ನು ಪುಸ್ತಕದ ಮೊದಲ ಪುಟಗಳಲ್ಲೇ ಓದುಗರ ಗಮನಕ್ಕೆ ತಂದಿದ್ದಾರೆ ನ್ಯಾಯವಾದಿಗಳೂ, ಲೇಖಕರೂ ಆಗಿರುವ ಕೆ ಎಂ ಕೃಷ್ಣ ಭಟ್. “ಕುದುರೆ ವ್ಯಾಪಾರ" ಎನ್ನುವ ಲಲಿತ ಪ್ರಬಂಧಗಳ ಕೃತಿಯನ್ನು ಹೊರತಂದಿರುವ ಇವರ ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಲೇಖಕರಾದ ಡಾ. ವಸಂತಕುಮಾರ ಪೆರ್ಲ. ಅವರು ತಮ್ಮ ಮುನ್ನುಡಿಯಲ್ಲಿ “ಕೆ ಎಂ ಕೃಷ್ಣ ಭಟ್ಟರು ಕಾಸರಗೋಡು ಜಿಲ್ಲೆಯ ನೀರ್ಚಾಲು ಪ್ರದೇಶದವರು. ೮೩ರ ಈ ಇಳಿವಯಸ್ಸಿನಲ್ಲಿ…
ಲೇಖಕರು: Ashwin Rao K P
August 19, 2023
ವಿಶ್ವ ಶ್ರೇಷ್ಟ ಸಾಧಕರ ಸಾಧನೆಗಳ ಬಗ್ಗೆ ಸವಿವರವಾಗಿ ತಿಳಿಸುವ ಪುಸ್ತಕವೇ ‘ಅಮೂಲ್ಯ ರತ್ನಗಳು' ಈ ಪುಸ್ತಕದಲ್ಲಿ ಲೇಖಕರಾದ ಎಲ್ ಪಿ ಕುಲಕರ್ಣಿ ಇವರು ವಿಶ್ವಕಂಡ ಅತ್ಯದ್ಭುತ ಸಾಧಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಖ್ಯಾತ ವೈದ್ಯರೂ, ಬರಹಗಾರರೂ ಆಗಿರುವ ಡಾ. ಕರಮವೀರಪ್ರಭು ಕ್ಯಾಲಕೊಂಡ ಇವರು. ಇವರು ತಮ್ಮ ಬೆನ್ನುಡಿಯಲ್ಲಿ “ ಅಮೂಲ್ಯ ರತ್ನಗಳು ಪುಸ್ತಕದಲ್ಲಿ ದೇಶಕ್ಕಾಗಿ ಪ್ರಾಣ ಪಣಕ್ಕಿಟ್ಟು ಹೋರಾಡಿ ಬದುಕಿದವರ ಜೀವನ ಚರಿತ್ರೆಗಳಿವೆ…
ಲೇಖಕರು: Ashwin Rao K P
August 17, 2023
“ದಿಬ್ಬದಿಂದ ಹತ್ತಿರ ಆಗಸ”ಕ್ಕೆ ಎನ್ನುವುದು ಕರ್ಕಿ ಕೃಷ್ಣಮೂರ್ತಿ ಅವರ ಕಥಾ ಸಂಕಲನ. ಸುಮಾರು ೧೫೦ ಪುಟಗಳ ಈ ಸಂಕಲನದ ಒಂದು ಕಥೆ ‘ದಿ ಗ್ರೇಟ್ ವಾಲ್ ಆಫ್ ಚೈನಾ’ ಇದರ ಆಯ್ದ ಭಾಗ ಇಲ್ಲಿದೆ… “ಜೊಂಪು ಜೊಂಪಾಗಿ ಬೆಳೆದಿದ್ದ ಗಿಡಗಂಟಿಗಳನ್ನು ಕೈಯ್ಯಿಂದ ಅತ್ತಿತ್ತ ತಳ್ಳುತ್ತ ಮಣ್ಣಿನ ಸಣ್ಣ ಗುಡ್ಡವೊಂದನ್ನು ಏರಿ ಉಧ್ಗರಿಸಿದ ಸ್ಯಾಂಡಿ. ಅವನ ಹಿಂದೆಯೇ ಎದುರುಸಿರು ಬಿಡುತ್ತ ಬಂದು, ದಿಬ್ಬದ ತುದಿಯಲ್ಲಿ ಸೊಂಟದ ಮೇಲೆ ಕೈಯ್ಯಿಟ್ಟು ನಿಂತ ಸದಾಶಿವ. ಸುತ್ತಲೂ ಕಣ್ಣಾಡಿಸಿದ. ಅಂಥಾ ದಟ್ಟ ಕಾಡಲ್ಲದಿದ್ದರೂ…
ಲೇಖಕರು: addoor
August 16, 2023
“ಕಾಲಮಾನದ ಮೊದಲು" ಎಂಬ ಆರಂಭದ ಬರಹದಲ್ಲಿ ಲೇಖಕ ಶಿವಾನಂದ ಕಳವೆ ಬರೆದಿರುವ ಒಂದು ಮಾತು: "ಈಸ್ಟ್ ಇಂಡಿಯಾ ಕಂಪೆನಿ ನಿರ್ದೇಶನದಂತೆ ಡಾ. ಫ್ರಾನ್ಸಿಸ್ ಬುಕಾನನ್ ಎಂಬ ವಿದೇಶಿ ಪ್ರವಾಸಿ ಕ್ರಿ.ಶ.1801ರಲ್ಲಿ ಉತ್ತರ ಕನ್ನಡದಲ್ಲಿ ಪ್ರವಾಸ ಮಾಡಿದ್ದರು. ಅವರು ಫೆಬ್ರವರಿ 18ರಿಂದ ಮಾರ್ಚ್ 16ರ ವರೆಗೆ ಆಗ ಭಟ್ಕಳದಿಂದ ಬನವಾಸಿಯ ವರೆಗೆ ಕೃಷಿ - ಕಾಡು - ಜನಜೀವನದ ಬಗೆಗೆ ಅಧ್ಯಯನ ನಡೆಸಿದರು. ಸರಿಯಾಗಿ 200 ವರ್ಷಗಳ ಬಳಿಕ ಬುಕಾನನ್ ಮಾರ್ಗದಲ್ಲಿ ಮರುಪ್ರಯಾಣ ನಡೆಸಿರುವೆ…" ಆ ಮರುಪ್ರಯಾಣದ ದಾಖಲಾತಿ ಈ…