ಪುಸ್ತಕ ಪರಿಚಯ
ಲೇಖಕರು: Ashwin Rao K P
September 10, 2024

ರಾಮಕೃಷ್ಣ ಹೆಗಡೆ ಇವರು ಬರೆದ 'ಒಲವ ಧಾರೆ' ಎನ್ನುವ ಕವನ ಸಂಕಲನ ಇತ್ತೀಚೆಗೆ ಕಾರ್ಕಳದ ಪುಸ್ತಕ ಮನೆ ಪ್ರಕಾಶನದ ಮುಖಾಂತರ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಜಯಲಕ್ಷ್ಮಿ ಕೆ. ಇವರು ತಮ್ಮ ಮುನ್ನುಡಿ ಬರಹದಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ...
“ನವೋದಯ-ನವ್ಯ ಸಾಹಿತ್ಯರಚನೆಯ ಈ ಕಾಲಘಟ್ಟದಲ್ಲಿ ಕವನಗಳನ್ನು ರಚಿಸಲು ನಿರ್ದಿಷ್ಟ ನಿಯಮಗಳೇನೂ ಇಲ್ಲವಾದರೂ ತೋಚಿದ್ದನ್ನೆಲ್ಲ ಗೀಚಿದರೆ ಅದು ಕವನ ಎನಿಸಿಕೊಳ್ಳುವುದಿಲ್ಲ. ಅನುಭವಗಳ ಸಾರವನ್ನು ಕಲ್ಪನೆಯ…
ಲೇಖಕರು: ಬರಹಗಾರರ ಬಳಗ
September 08, 2024

ಈಗಾಗಲೇ 2021 ರಲ್ಲಿ."ಮರುಳನ ಶಾಯಿರಿ ಲೋಕ "ಎಂಬ ಶಾಯಿರಿ ಸಂಕಲನದ ಮೂಲಕ ಶಾಯಿರಿ ಕವಿಯಂದು ಹೆಸರಾದವರು ಹುಲಕೋಟಿಯ ಮರುಳಸಿದ್ದಪ್ಪ ದೊಡಮನಿಯವರು.ಅವರ "ಮರುಳನ ಶಾಯಿರಿ" ಲೋಕದ ಗುಂಗು ಇನ್ನು ತಲೆಯಿಂದ ಮಾಸದಿರುವಾಗಲೇ,ಈ ಕವಿ ಎರಡನೆಯ ಶಾಯಿರಿ ಸಂಕಲನವನ್ನು ಓದುಗರ ಎದೆಗೆ ಇತ್ತಿದ್ದಾರೆ.ಅವರು ಸದಾ ಶಾಯಿರಿಯನ್ನೇ ಉಸಿರಾಡಿಸುವದಕ್ಜೆ ಇದೊಂದು ನಿದರ್ಶನ. ಕನ್ನಡದಲ್ಲಿ ಶಾಂತರಸ, ಇಟಗಿ ಈರಣ್ಣ ,ಎಸ್ ಜಿ ಸ್ವಾಮಿ , ಅಸಾದುಲ್ಲಾ ಬೇಗ್,ಮೊದಲಾದ ಹಿರಿಯರಿಂದ ಬರೆಯಲು ಶುರು ಹಚ್ಚಿಕೊಂಡು ಈ ಕಾವ್ಯ…
ಲೇಖಕರು: Ashwin Rao K P
September 05, 2024

‘ಭೂಮಿ' ಎನ್ನುವುದು ಲೇಖಕ ಈರಣ್ಣ ಬೆಂಗಾಲಿ ಇವರು ಬರೆದ ಕಾದಂಬರಿ. ಈ ಕಾದಂಬರಿಯ ಬಗ್ಗೆ ಮುನ್ನುಡಿಯನ್ನು ಬರೆದಿದ್ದಾರೆ ಶೇಖರಗೌಡ ವೀ ಸರನಾಡಗೌಡರ್ ತಾವರಗೇರಾ ಇವರು. ತಮ್ಮ ಮುನ್ನುಡಿಯಲ್ಲಿ ಶ್ರೀಯುತರು ವ್ಯಕ್ತ ಪಡಿಸಿದ ಭಾವ ಇಲ್ಲಿದೆ...
“ಬಿಸಿಲ ನಾಡು ಕಲ್ಯಾಣ ಕರ್ನಾಟಕದ ಒಂದು ಭಾಗ ರಾಯಚೂರು ಜಿಲ್ಲೆ. ಈ ಬಿಸಿಲ ನಾಡಿನಲ್ಲಿ ಅನೇಕ ಸಾಹಿತ್ಯ ದಿಗ್ಗಜರು ಕಲ್ಯಾಣ ಕರ್ನಾಟಕದ ಘನತೆ, ಗೌರವಗಳನ್ನು ರಾಜ್ಯ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಬೆಳಗುವಂತೆ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ.…
ಲೇಖಕರು: Ashwin Rao K P
September 03, 2024

ಯಶೋದಾ ಮೋಹನ್ ಅವರು ಬರೆದ ಚೊಚ್ಚಲ ಕಥಾ ಸಂಕಲನ ‘ಇಳಿ ಹಗಲಿನ ತೇವಗಳು' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಪುಸ್ತಕಕ್ಕಾಗಿ ಬರೆದ ಲೇಖಕಿಯ ಮಾತುಗಳ ಆಯ್ದ ಭಾಗ ಇಲ್ಲಿದೆ…
“‘ಇಳಿ ಹಗಲಿನ ತೇವಗಳು' ನನ್ನ ಮೊದಲನೆಯ ಕಥಾ ಸಂಕಲನ ಮತ್ತು ಮೂರನೆಯ ಕೃತಿ. ವಿದ್ಯಾರ್ಥಿ ಜೀವನ ಕಳೆದು ಸುಮಾರು ಮೂವತ್ತು ವರ್ಷಗಳ ನಂತರ ಮತ್ತೊಮ್ಮೆ ಬರವಣಿಗೆಯನ್ನು ಆರಂಭಿಸಲು ಪ್ರೇರಣೆ ಸಿಕ್ಕಿದಾಗ ನನ್ನೊಳಗಿನ ಭಾವಗಳು ಬಿಡುಗಡೆಗೊಂಡ ಹಲವು ಬಗೆಗಳಲ್ಲಿ ಸಣ್ಣ ಕತೆಯೂ ಒಂದು. ಆಗೊಮ್ಮೆ ಈಗೊಮ್ಮೆ ಬರೆದ ಕೆಲವು ಕತೆಗಳು ಈ…
ಲೇಖಕರು: ಬರಹಗಾರರ ಬಳಗ
September 01, 2024

೨೦೦೧ರಲ್ಲಿ ಬರೆದ ತಮ್ಮ ‘ಐಕ್ಯಗಾನ ಮೊಳಗಲಿ' (ನಾಡು-ನುಡಿ ಗೀತೆಗಳು) ಸಂಕಲನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಕವಿಗಳಾದ ಹಾ.ಮ.ಸತೀಶ ಇವರು ಒಟ್ಟು ಮೂವತ್ತು ಗೀತೆಗಳನ್ನು ಬರೆದಿದ್ದಾರೆ. ನಾಡು-ನುಡಿ ಗೀತೆಗಳನ್ನೇ ಒಂದಾಗಿಸಿ, ನಾಡಭಕ್ತಿ, ಪ್ರೇಮ ಮೆರೆದಿರುವುದು ಗೀತೆಯ ಸಾಲುಗಳಲ್ಲಿ ಪ್ರತಿಧ್ವನಿಸುತ್ತಿದೆ. ‘ಕನ್ನಡದ ಮಕ್ಕಳಿಗಾಗಿಯೇ’ ಬರೆದದ್ದು ಎನ್ನುವ ಮಾತು ತೂಕವುಳ್ಳದ್ದಾಗಿದೆ. ರಾಗ ಹಾಕಿ ಹಾಡು, ನೃತ್ಯ ಮಾಡುವಂತಿದೆ. ಈ ‘ಐಕ್ಯಗಾನ’ ನೋಡಲು ಪುಟ್ಟ ಪುಸ್ತಕವಾದರೂ ಪುಟಗಳ ಬಿಡಿಸುತ್ತಾ…
ಲೇಖಕರು: Ashwin Rao K P
August 30, 2024

ಯಾವುದೇ ಒಂದು ಪುಸ್ತಕಕ್ಕೆ ಉತ್ತಮ ವಿಮರ್ಶೆ ಕಲಶಪ್ರಾಯವಿದ್ದಂತೆ. ವಿಮರ್ಶೆ ಹೊಗಳಿಕೆಯಾಗಿರಲಿ, ತೆಗಳಿಕೆಯಾಗಿರಲಿ, ಸಲಹೆಯಾಗಿರಲಿ, ಟೀಕೆಯಾಗಿರಲಿ ಎಲ್ಲವೂ ಆ ಕೃತಿಯ ಲೇಖಕನಿಗೆ ಅತೀ ಮುಖ್ಯ. ವಿಮರ್ಶೆಗಳನ್ನು ಗಮನಿಸಿಯೇ ಆ ವ್ಯಕ್ತಿ ತನ್ನ ಮುಂದಿನ ಪುಸ್ತಕವನ್ನು ರೂಪಿಸಿಕೊಳ್ಳಬಹುದು. ಲೇಖಕರಾದ ನರೇಂದ್ರ ಪೈ ಅವರು ವಿಮರ್ಶೆಗಳ ಸಂಗ್ರಹವನ್ನೇ ಒಂದು ಕೃತಿಯನ್ನಾಗಿಸಿದ್ದಾರೆ. ಅದಕ್ಕೆ ಅವರಿಟ್ಟ ಹೆಸರು ‘ಸಾವಿರದ ಒಂದು ಪುಸ್ತಕ' ಈ ಬಗ್ಗೆ ಲೇಖಕರ ಮನದಾಳದ ಮಾತುಗಳು ಹೀಗಿವೆ...
“ನಾವು ನಮ್ಮ…