ಪುಸ್ತಕ ಪರಿಚಯ
ಲೇಖಕರು: Ashwin Rao K P
August 23, 2024

“ರವಿ ಬೆಳಗೆರೆ ! ಅವರು ಕನ್ನಡಿಗರ ಮನೆ ಮಾತು. ಅತ್ಯಂತ ಹೆಚ್ಚು ಬರೆದ, ಓದಿಸಿಕೊಳ್ಳುವ ಲೇಖಕ, ಪತ್ರಕರ್ತ, ಕಾದಂಬರಿಕಾರ, ಅನುವಾದಕ. ಅವರ ಒಂದು ಹೊಸ ಪುಸ್ತಕ ಬಿಡುಗಡೆಯಾಗುತ್ತದೆ ಅಂದರೆ ಸಾವಿರಾರು ಓದುಗರು ಕರ್ನಾಟಕದಾದ್ಯಂತ ಅದಕ್ಕಾಗಿ ಕಾಯುತ್ತಿದ್ದರು. ಅವರು ಒಂದು ವಿಷಯ, ಒಂದು ಸಂಗತಿ ಅಥವಾ ಒಂದು ಸಬ್ಜೆಕ್ಟ್ ಇಟ್ಟುಕೊಂಡು ಬರೆದವರಲ್ಲ. ಮನುಷ್ಯ ಸಂಬಂಧಗಳು ಅವರ ಆಸಕ್ತಿಯ ಪ್ರಥಮ ವಿಷಯ. ಆದರೆ ಅವರು ಅತ್ಯಂತ ಆಸಕ್ತಿಯಿಂದ ದೇಶ, ಇತಿಹಾಸ, ಯುದ್ಧಗಳ ಬಗ್ಗೆ ಬರೆದಿದ್ದಾರೆ. ಯುದ್ಧಗಳ…
ಲೇಖಕರು: Ashwin Rao K P
August 21, 2024

‘ವಯನಾಡು - ಸಾವು ಬಂದ ಹೊತ್ತಿಗೆ ಹೇಳದೇ ಉಳಿದ ಸತ್ಯಗಳು' ಎನ್ನುವ ಕೃತಿಯನ್ನು ಬರೆದಿದ್ದಾರೆ ಪತ್ರಕರ್ತರಾದ ಆಶಿಕ್ ಮುಲ್ಕಿ. ಈ ವರ್ಷದ ಬಹು ದೊಡ್ದ ದುರಂತವಾದ ವಯನಾಡು ಭೂಕುಸಿತ, ನೆರೆ ಬಗ್ಗೆ ಮತ್ತು ಕಳೆದು ಹೋದ, ಮೃತ ಪಟ್ಟ ಜನರ ಬಗ್ಗೆ ಬಹಳ ದುಃಖದಿಂದ ಮಾಹಿತಿ ನೀಡಿದ್ದಾರೆ. ಸ್ವತಃ ವಯನಾಡಿಗೆ ಹೋಗಿ ಈ ದುರಂತವನ್ನು ಕಣ್ಣಾರೆ ಕಂಡ ಆಶಿಕ್ ಮುಲ್ಕಿಯವರು ತಮ್ಮ ಜೊತೆಗೇ ವರದಿಗಾರಿಕೆ ಮಾಡುತ್ತಿದ್ದ ವಿಕ್ರಂ ಕಾಂತಿಕೆರೆಯವರಿಗೆ ಮುನ್ನುಡಿ ಬರೆಯುವ ಹೊಣೆಯನ್ನು ವಹಿಸಿದ್ದಾರೆ. ವಿಕ್ರಂ…
ಲೇಖಕರು: Ashwin Rao K P
August 19, 2024

“ನೀವು ಇಸ್ಲಾಂ ಧರ್ಮದ ಕುರಿತು ಹಲವಾರು ಕಥೆ ಮತ್ತು ಕಾದಂಬರಿಗಳನ್ನು ಓದಿರಬಹುದು. ಅವೆಲ್ಲವನ್ನು ಬರೆದಿರುವುದು ಇಸ್ಲಾಂ ಧರ್ಮದ ಕುರಿತು. ಆದರೆ ಈ ‘ಖದೀಜಾ’ ಕಾದಂಬರಿ ಇಸ್ಲಾಂ ಕುರಿತಾಗಿ ಅಲ್ಲ; ಒಬ್ಬಳು ಮಾನವತಾವಾದಿ, ಹೃದಯವಂತಿಕೆಯುಳ್ಳವರ ಕುರಿತ ಐತಿಹಾಸಿಕ ಕಾದಂಬರಿ. ಈ ಕಾದಂಬರಿ ಸಂಪೂರ್ಣವಾಗಿ 1400 ವರ್ಷಗಳ ಹಿಂದೆ ಅಂದರೆ, ಪ್ರವಾದಿ ಮುಹಮ್ಮದ್ ಪೈಗಂಬರ ಮತ್ತು ಅವರ ಧರ್ಮಪತ್ನಿ ಖದೀಜಾರ ಜೀವನದಲ್ಲಿ ನಡೆದ ಘಟನಾವಳಿಗಳ ಕುರಿತಾದ್ದು. ಒಂದು ಧರ್ಮ ಗ್ರಂಥವನ್ನು ಓದಿ ನನ್ನದೇ ಆದ…
ಲೇಖಕರು: addoor
August 18, 2024

ಈಗಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಮನೆಯಲ್ಲಿ ಏನು ಕಲಿಸುತ್ತಿದ್ದೇವೆ? ಶಾಲೆಗಳಲ್ಲಿ ಏನು ಕಲಿಸಲಾಗುತ್ತಿದೆ? ಎಂದು ಒಂದು ಕ್ಷಣ ಯೋಚಿಸಿ. ಈಗ ಶೇಕಡಾ 80ರಷ್ಟು ಕುಟುಂಬಗಳು ಒಂಟಿ ಕುಟುಂಬಗಳಾಗಿವೆ. ಅಲ್ಲಿ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸಲು ಅಜ್ಜ-ಅಜ್ಜಿಯರು ಹಾಗೂ ಹಿರಿಯರು ಆ ಕುಟುಂಬಗಳಲಿಲ್ಲ. ಹೆತ್ತವರಿಗಂತೂ ಮನೆಗೆಲಸಗಳ ನಿರ್ವಹಣೆ ಮತ್ತು ವೃತ್ತಿಯ ಒತ್ತಡದಿಂದಾಗಿ ಮಕ್ಕಳ ಜೊತೆ ನಿರಾಳವಾಗಿ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಶಾಲೆಗಳಲ್ಲಂತೂ ಸಿಲೆಬಸ್ಸಿನಲ್ಲಿ ಕಡ್ಡಾಯ…
ಲೇಖಕರು: Ashwin Rao K P
August 14, 2024

ಕೆ ಎಂ ಕೃಷ್ಣ ಭಟ್ ಇವರು ‘ರಾಮಾಯಣ ಮತ್ತು ಮಹಾಭಾರತ' ಎನ್ನುವ ಕುತೂಹಲ ಕೆರಳಿಸುವ ಪ್ರಬಂಧಗಳ ಸಂಕಲನವನ್ನು ಹೊರತಂದಿದ್ದಾರೆ. ರಾಮಾಯಣ ಹಾಗೂ ಮಹಾಭಾರತದ ಕುರಿತಾದ ಕೆಲವು ಸಂಶಯಗಳು, ದೃಷ್ಟಿಕೋನಗಳು, ಅಭಿಪ್ರಾಯ ಭೇದಗಳನ್ನು ವಿಮರ್ಶೆ ಮಾಡುವ ಪ್ರಯತ್ನ ಈ ಕೃತಿಯಲ್ಲಿ ಲೇಖಕರು ಮಾಡಿದ್ದಾರೆ. ಲೇಖಕರು ಸ್ವತಃ ಹಿರಿಯ ನ್ಯಾಯವಾದಿಗಳಾಗಿರುವುದರಿಂದ ಪ್ರತಿಯೊಂದು ವಿಷಯಕ್ಕೂ ಇನ್ನೊಂದು ಬಗೆಯ ತರ್ಕವೂ ಇರಬಹುದು ಎನ್ನುವ ಯೋಚನೆ ಮಾಡಿದ್ದಾರೆ. ಅವರೇ ತಮ್ಮ ‘ಒಂದು ಮಾತು' ಎನ್ನುವ ಬರಹದಲ್ಲಿ ಬರೆದಂತೆ “…
ಲೇಖಕರು: Ashwin Rao K P
August 12, 2024

‘ಪೀಜಿ’ ಸುಶೀಲ ಡೋಣೂರ ಅವರ ಕಾದಂಬರಿಯಾಗಿದೆ. ಇದಕ್ಕೆ ರಾಗಂ ಬೆನ್ನುಡಿ ಬರಹವಿದೆ; ಕಾಡುವ ಕಥೆ ತಟ್ಟನೆ ಬರೆಯಿಸಿಕೊಳ್ಳುವುದಿಲ್ಲ, ಅದು ಒಳಗೊಳಗೆ ವಿಸ್ತಾರಗೊಳ್ಳುತ್ತದೆ. ಅಲ್ಲಿ ವಿಷಾದ ಮಡುಗಟ್ಟಿದಂತೆ ಮಾತು ಮೌನವಾಗುತ್ತದೆ. ಪ್ರೇಮ್ ಚಂದ್, ಅಲೆಕ್ಸಾಂಡರ್ ಪುನ್, ಕಾಮುಗಳ ಕಾದಂಬರಿಗಳು ಘಟಿಸಿದ್ದೇ ಹೀಗೆ. ಘನ ಗಂಭೀರ ಕಾರ್ಮೋಡಗಳು ಆಕಾಶ ತುಂಬಿದಂತೆ ತಟ್ಟನೆ ಮಳೆ ಸುರಿಯುವುದಿಲ್ಲ. ಓಡಾಡುತ್ತವೆ, ಕಾಡುತ್ತವೆ ಕೊನೆಗೊಮ್ಮೆ ಸುರಿದುಬಿಟ್ಟರೆ ನಿಂತ ನೆಲದ ಗತಿ ಏನಾದೀತು ಎನ್ನುವ ಭಯ…