ಪುಸ್ತಕ ಪರಿಚಯ

ಲೇಖಕರು: Ashwin Rao K P
May 11, 2023
‘ಸಂಶೋಧನ ಸಂಪದ' ಎನ್ನುವುದು ಕ್ಷಮಾ ವಿ ಭಾನುಪ್ರಕಾಶ್ ಅವರ ನೂತನ ಕೃತಿ. ೧೫೮ ಪುಟಗಳ ಈ ಪುಸ್ತಕವು ಸಂಶೋಧನೆಗಳನ್ನು ನಡೆಸುವ ಅಗತ್ಯತೆ ಮತ್ತು ಈ ಸಂಶೋಧನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯದ ಬಗ್ಗೆ ಬಹಳಷ್ಟು ವಿಷಯಗಳನ್ನು ತಿಳಿಸಿಕೊಡುತ್ತದೆ. ಲೇಖಕರಾದ ಟಿ. ಜಿ. ಶ್ರೀನಿಧಿ ಇವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ...  “ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳ ವೇಗ ಬೆರಗುಗೊಳಿಸುವಂಥದ್ದು…
ಲೇಖಕರು: Ashwin Rao K P
May 09, 2023
‘ತುಷಾರ ಹಾರ' ಇದು ಲೇಖಕಿಯಾದ ಶ್ಯಾಮಲಾ ಮಾಧವ ಅವರ ಕಣ್ಣೀರ ಕಥೆ. ಬರೆದೂ ಬರೆದು ನೋವನ್ನು ಹಗುರ ಮಾಡಿ ಕೊಂಡ ತಾಯಿಯ ಕಥೆಯಿದು. ಕಂದನ ನೋವಿನ ನುಡಿ ಹಾರವೇ ಈ ‘ತುಷಾರ ಹಾರ’ ಎನ್ನುತ್ತಾರೆ ಶ್ಯಾಮಲಾ ಮಾಧವ ಇವರು. ತಮ್ಮ ಕೃತಿಗೆ ಅವರು ಬರೆದ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ...  “ನನ್ನ ಪಾಲಿಗೆ ಸರ್ವಸ್ವವೂ ಆಗಿದ್ದ ನನ್ನ ಕಂದನನ್ನು ಕಳೆದುಕೊಂಡ ನೋವನ್ನು ಅಕ್ಷರಕ್ಕಿಳಿಸಿ ಹೆಣೆದ ನುಡಿಹಾರವೇ ಈ 'ತುಷಾರ ಹಾರ'. ನೆನೆದಷ್ಟೂ ಗಾಢವಾಗುವ ಈ ನೋವನ್ನು ಬರೆದು ಹಗುರಾಗುವುದೆಂದಿದೆಯೇ? ಎಷ್ಟು…
ಲೇಖಕರು: Ashwin Rao K P
May 06, 2023
ವಿವಿಧ ಯಕ್ಷಗಾನ ಪ್ರಕಾರಗಳ ಬಗ್ಗೆ ಮಾಹಿತಿ ನೀಡುವ ‘ಮಣಿಹಾರ' ಎಂಬ ಪುಸ್ತಕವನ್ನು ಬರೆದಿದ್ದಾರೆ ಲೇಖಕರಾದ ಎಸ್ ಎನ್ ಪಂಜಾಜೆ. ಸುಮಾರು ೧೬೦ ಪುಟಗಳ ಈ ಕೃತಿಯು ಯಕ್ಷಗಾನ ಪ್ರೇಮಿಗಳಿಗೆ ಹಾಗೂ ಯಕ್ಷಗಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಜ್ಞಾನಾಸಕ್ತರಿಗೆ ಬಹಳ ಉಪಕಾರಿಯಾಗಿದೆ.  “ಯಕ್ಷಗಾನ ಮತ್ತು ಅದರ ಸೋದರ ಕಲೆಗಳನ್ನು ಒಟ್ಟಾಗಿ ಕಂಡು ಅವುಗಳಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮುಂದಿನ ಕಲಾಸಕ್ತರಿಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಸ್ತುತ ಯಕ್ಷಗಾನ ಕಲೆಯಲ್ಲಿನ ಜಾಗತೀಕರಣದ…
ಲೇಖಕರು: addoor
May 05, 2023
ನಮ್ಮ ದೇಶ ಭಾರತವು ಸ್ವಾತಂತ್ರ್ಯ ಗಳಿಸಿ 75 ವರುಷಗಳು ದಾಟಿವೆ. ಇದೀಗ ಎಪ್ರಿಲ್ 2023ರಲ್ಲಿ ಭಾರತವು (ಚೀನಾವನ್ನು ಹಿಂದಿಕ್ಕಿ) ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾಗಿದೆ. ಈ ಸನ್ನಿವೇಶದಲ್ಲಿ ಇಂತಹ ಪುಸ್ತಕವೊಂದರ ಅಧ್ಯಯನವು ಭಾರತವು ಹಾದು ಬಂದಿರುವ ಹಾದಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕ. ಯಾಕೆಂದರೆ ಭಾರತದ ವಿವಿಧ ಪ್ರದೇಶಗಳ ಹತ್ತು ಹಳ್ಳಿಗಳ 50 ವರುಷಗಳ ಹಿಂದಿನ ಚಿತ್ರಣವನ್ನು ಈ ಪುಸ್ತಕ ನಮಗೆ ಒದಗಿಸುತ್ತದೆ. ಪ್ರಸಿದ್ಧ ಸಾಮಾಜಿಕ ಶಾಸ್ತ್ರಜ್ನರಾದ ಲೇಖಕರು ಮುನ್ನುಡಿಯಲ್ಲಿ ಹೀಗೆ…
May 05, 2023
ಶುಭಶ್ರೀ ಭಟ್ಟ ಇವರು ಬರೆದ ‘ಹಿಂದಿನ ನಿಲ್ದಾಣ' ಕೃತಿಯನ್ನು ಓದಿದಾಗ ನನಗೆ ಅನಿಸಿದ್ದು ಈ ಪುಸ್ತಕವು ನಮ್ಮ ಬಾಲ್ಯದ ನೆನಪುಗಳನ್ನು ಇಣುಕುವಂತೆ ಮಾಡುವ ಕೃತಿ ಎಂದು. “ಮಕ್ಕಳು ಬದುಕನ್ನು ತೀವ್ರವಾಗಿ ಬದುಕುತ್ತಾರೆ. ಅವರಿಗೆ ಎಲ್ಲವೂ ವಿಶೇಷ ಮತ್ತು ಎಲ್ಲವೂ ಊಹಿಸಿಕೊಳ್ಳುವಷ್ಟೆ ಸಲೀಸು ಎಂಬ ಮಕ್ಕಳ ಮನೋಪ್ರಜ್ಞಾವಸ್ಥೆಯನ್ನು ರೂಪಿಸುವಲ್ಲಿ ಶುಭಶ್ರೀ ಯಶಸ್ವಿಯಾಗಿದ್ದಾರೆ” ಎನ್ನುವುದು ನನ್ನ ಅನಿಸಿಕೆ. ಸಖಿ ಶುಭಶ್ರೀ ಭಟ್ಟ ಅವರ 'ಹಿಂದಿನ ನಿಲ್ದಾಣ' ದಲ್ಲಿ ಒಟ್ಟು 23 ಲಲಿತ ಪ್ರಬಂಧಗಳಿದ್ದು…
ಲೇಖಕರು: Ashwin Rao K P
May 04, 2023
ನೂರ್ ಜಹಾನ್ ಅವರು ಬರೆದ ನೂತನ ಕಥಾ ಸಂಕಲನ -ಪರಿವರ್ತನೆ. ೧೩೬ ಪುಟಗಳ ಈ ಪುಟ್ಟ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಕೇಶವ ಮಳಗಿ ಇವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭಾಗ ಇಲ್ಲಿದೆ... “ನೂರ್‌ ಜಹಾನ್‌ ಅವರದು ಅದಮ್ಯ ಸಾಹಿತ್ಯ ಪ್ರೀತಿಯ ಜೀವ. ಅವರು ಈಗಾಗಲೇ ಪ್ರಕಟಿಸಿರುವ ಕಥಾ ಸಂಕಲನ, ಕಾವ್ಯ ಸಂಗ್ರಹಗಳು ಈಗ ಪ್ರಕಟಿಸುತ್ತಿರುವ ಹೊಸ ಕಥಾಕೃತಿ ನೂರ್‌ ಜಹಾನ್‌ ಅವರ ಸಾಹಿತ್ಯ ರಚನೆಯ ಉತ್ಸುಕತೆಯನ್ನೇ ತೋರಿಸುತ್ತದೆ. ದಣಿವೇ ಇಲ್ಲದ ಈ…