ಪುಸ್ತಕ ಪರಿಚಯ

ಲೇಖಕರು: Ashwin Rao K P
July 17, 2024
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೭ನೇ ಪುಸ್ತಕವೇ ಲೋಳೆಸರ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ.  ಲೋಳೆಸರ ಎನ್ನುವುದು ಬಹು ಆರೋಗ್ಯಕರ ಸಸ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಲೆವೋರಾ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಈ…
ಲೇಖಕರು: Ashwin Rao K P
July 15, 2024
ದೀಪದ ಮಲ್ಲಿ ಬರೆದಿರುವ ‘ಹುಣಸೇ ಚಿಗುರು ಮತ್ತು ಇತರ ಕಥೆಗಳು' ಎಂಬ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಉದಯೋನ್ಮುಖ ಕಥೆಗಾರ್ತಿಯಾಗಿ ಗುರುತಿಸಲ್ಪಡುತ್ತಿರುವ ದೀಪದ ಮಲ್ಲಿಯವರ ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ದಯಾ ಗಂಗನಘಟ್ಟ. ಇವರು ಈ ಕೃತಿಯಲ್ಲಿರುವ ಮೂಲ ಸೆಲೆ ಮಾನವೀಯ ಕಳಕಳಿ ಎಂದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ... “ಪರಂಪರೆ ಮತ್ತು ಆಧುನಿಕತೆ ಎರಡರ ಕಡೆಗೂ ಒಲವಿರುವ ದೀಪದಮಲ್ಲಿ ಅವರಿಗೆ ಹೊಸ ಹೊಸ…
ಲೇಖಕರು: Ashwin Rao K P
July 12, 2024
‘ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ' ಎನ್ನುವುದು ಪ್ರಮೋದ ಕರಣಂ ಅವರ ಎರಡನೇ ಕೃತಿ. ೮೫ ಪುಟಗಳ ಪುಟ್ಟ ಕಾದಂಬರಿಯೇ ಆದರೂ ಇದು ಹೇಳುವ ಭಾವನೆಗಳು ಹಲವಾರು. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಎ.ಕೆ.ರಾಮೇಶ್ವರ. ಇವರು ತಮ್ಮ ಪುಟ್ಟ ಮುನ್ನುಡಿಯಲ್ಲೇ ಈ ಕಾದಂಬರಿಯ ಸಾರವನ್ನು ಕಟ್ಟಿಕೊಟ್ಟಿದ್ದಾರೆ. ಅವರ ಮುನ್ನುಡಿಯ ಆಯ್ದ ಭಾಗಗಳು ಇಲ್ಲಿವೆ… “‘ಪರಿಣಯ್' ಬಿಸಿಲು ನಾಡಿನ ಕಲಬುರುಗಿಯ ಯುವಕ, ಬೆಂಗಳೂರು ನಗರದಲ್ಲಿ ಕೆಲಸ. ‘ಪ್ರೀತಿ' ಬೆಂಗಳೂರು ಮೂಲದವಳು. ಬಿಸಿಲುನಾಡು…
ಲೇಖಕರು: Ashwin Rao K P
July 10, 2024
ಜೀವ ಜಾತ್ರೆ’ ಮೌನೇಶ ಬಡಿಗೇರ ಅವರ ನೂತನ ಕಾದಂಬರಿಯಾಗಿದೆ. ಇದಕ್ಕೆ ಎಚ್. ಎಸ್. ರಾಘವೇಂದ್ರ ರಾವ್ ಅವರ ಬೆನ್ನುಡಿ ಬರಹವಿದೆ; ಕಥೆ, ಕವಿತೆ, ಕಾದಂಬರಿ ಮುಂತಾದ ಪ್ರಕಾರಗಳ ಸಾಧ್ಯತೆಗಳನ್ನು ಅರಸುವ ಕೆಲಸವು 'ಸೃಜನಶೀಲ ಕಲ್ಪನೆ' ಮತ್ತು 'ಮಾಧ್ಯಮ ಶೋಧನೆ'ಗಳನ್ನು ಅವಲಂಬಿಸಿರುತ್ತದೆ. ಇವುಗಳ ಜೊತೆಗೆ, ಜಡವಲ್ಲದ ಕೇವಲ ಬೌದ್ಧಿಕವಲ್ಲದ ತಾತ್ವಿಕ ಕುತೂಹಲ/ಚಿಂತನೆಯೂ ಅದಕ್ಕೆ ಅಗತ್ಯವಾದ ಇನ್ನೊಂದು ಗುಣ. ಇದೆಲ್ಲದರ ಸಂಗಡ ಕತೆಗಾರನಿಗೆ ಲೋಕವನ್ನು ಅದರ ಸ್ಥೂಲನೆಲೆಯಲ್ಲಿ ಮಾತ್ರವಲ್ಲ, ವಿವರಗಳಲ್ಲಿ…
ಲೇಖಕರು: Ashwin Rao K P
July 08, 2024
ಶಾಲಾ ಶಿಕ್ಷಕರಾಗಿರುವ ಜನಾರ್ದನ ದುರ್ಗ ಅವರ ಚೊಚ್ಚಲ ಕೃತಿ ‘ಶಾಂತೇಶ್ವರನ ವಚನಗಳು' ಬಿಡುಗಡೆಯಾಗಿದೆ. ಸಂತೋಷದ ಸಂಗತಿ ಎಂದರೆ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಚೊಚ್ಚಲ ಕೃತಿಗೆ ನೀಡಲಾಗುವ ಪ್ರೋತ್ಸಾಹ ಧನವನ್ನು ಈ ಕೃತಿಯು ಪಡೆದುಕೊಂಡಿದೆ. ಹಲವಾರು ಸಮಯದಿಂದ ಸಾಮಾಜಿಕ ಜಾಲತಾಣಗಳು ಹಾಗೂ ವಾಟ್ಸಾಪ್ ಬಳಗಗಳಲ್ಲಿ ತಮ್ಮ ‘ಶಾಂತೇಶ್ವರನ ವಚನಗಳನ್ನು' ಹಂಚಿಕೊಳ್ಳುತ್ತಿದ್ದ ಜನಾರ್ದನ ದುರ್ಗ ಅವರು ತಾವು ಬರೆದ ವಚನಗಳಲ್ಲಿ ಅತ್ಯುತ್ತಮ ಎನಿಸಿದ ೨೦೦ ವಚನಗಳನ್ನು ಆಯ್ದು ಈ…
ಲೇಖಕರು: Ashwin Rao K P
July 05, 2024
ನಾತಿಚರಾಮಿ’ ಕೃತಿಯು ಎನ್. ಸಂಧ್ಯಾರಾಣಿ ಅವರ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ಸಾಲುಗಳು ಹೀಗಿವೆ; ಮದುವೆಯ ಪ್ರಮಾಣದಲ್ಲಿ ‘ನಾತಿಚರಾಮಿ’ ನಿನ್ನ ಹೊರತಾಗಿ ಅಲ್ಲ ಎನ್ನುವ ಮಾತು ಧರ್ಮ, ಅರ್ಥ, ಮೋಕ್ಷಗಳ ಜೊತೆಯಲ್ಲಿ ಕಾಮಕ್ಕೂ ಅನ್ವಯವಾಗುತ್ತದೆ. ಈ ಪ್ರಮಾಣವು ಗೌರಿಯ ಪಾಲಿಗೆ ನಂಬಿಕೆ, ಭರವಸೆ ಆಗಬೇಕಿತ್ತು, ಆದರೆ ಅದು ಒಂದು ಅಗೋಚರ ಬಂಧನವೂ ಆಗಿರುತ್ತದೆ. ಆ ಬಂಧನ ಕೇವಲ ಮಾಡಿದ ಆ ಪ್ರಮಾಣದ್ದಲ್ಲ, ಬಾಲ್ಯದಿಂದಲೂ ಸಮಾಜದಿಂದ ಕಲಿಸಲ್ಪಟ್ಟ ಸೋ ಕಾಲ್ಡ್ ಮೌಲ್ಯಗಳದ್ದು, ನಂಬಿಕೆಗಳದ್ದು,…