ಪುಸ್ತಕ ಪರಿಚಯ

ಲೇಖಕರು: Ashwin Rao K P
May 04, 2023
ನೂರ್ ಜಹಾನ್ ಅವರು ಬರೆದ ನೂತನ ಕಥಾ ಸಂಕಲನ -ಪರಿವರ್ತನೆ. ೧೩೬ ಪುಟಗಳ ಈ ಪುಟ್ಟ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಕೇಶವ ಮಳಗಿ ಇವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭಾಗ ಇಲ್ಲಿದೆ... “ನೂರ್‌ ಜಹಾನ್‌ ಅವರದು ಅದಮ್ಯ ಸಾಹಿತ್ಯ ಪ್ರೀತಿಯ ಜೀವ. ಅವರು ಈಗಾಗಲೇ ಪ್ರಕಟಿಸಿರುವ ಕಥಾ ಸಂಕಲನ, ಕಾವ್ಯ ಸಂಗ್ರಹಗಳು ಈಗ ಪ್ರಕಟಿಸುತ್ತಿರುವ ಹೊಸ ಕಥಾಕೃತಿ ನೂರ್‌ ಜಹಾನ್‌ ಅವರ ಸಾಹಿತ್ಯ ರಚನೆಯ ಉತ್ಸುಕತೆಯನ್ನೇ ತೋರಿಸುತ್ತದೆ. ದಣಿವೇ ಇಲ್ಲದ ಈ…
ಲೇಖಕರು: Ashwin Rao K P
May 02, 2023
ಹಿರಿಯ ಗಾಯಕಿ ಹೆಚ್ ಆರ್ ಲೀಲಾವತಿ ಅವರ ಆತ್ಮಕಥೆ “ಹಾಡಾಗ ಹರಿದಾಳೆ" ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಅದ್ಭುತವಾದ ಹಾಡುಗಳನ್ನು ಹಾಡಿರುವ ಲೀಲಾವತಿ ಅವರ ಸಂಗೀತ ಕಲಿಕೆಯ ಪಯಣ ಸುಗಮವಾಗಿರಲಿಲ್ಲ. ಹಾಡುವುದನ್ನು ಕಲಿಯಬೇಕೆನ್ನುವ ಹುಚ್ಚು (ಅವರೇ ಬರೆದಂತೆ) ಅವರನ್ನು ಅವರ ಗುರುಗಳು ನೀಡುತ್ತಿದ್ದ ಎಲ್ಲಾ ಕಿರುಕುಳಗಳನ್ನು ಸಹಿಸುವಂತೆ ಮಾಡಿತು. ಅವರ ಗುರುಗಳು ನೀಡುತ್ತಿದ್ದ ಶಿಕ್ಷೆಗಳು, ಕಿರುಕುಳಗಳು, ಕ್ರೌರ್ಯಗಳನ್ನು ಓದುವಾಗ ಕಣ್ಣಲ್ಲಿ ನೀರು ಜಿನುಗುತ್ತದೆ. ಸಾಧನೆಯ ಹಾದಿಯಲ್ಲಿ…
ಲೇಖಕರು: Ashwin Rao K P
April 29, 2023
‘ಇವಳ ಭಾರತ' ಎನ್ನುವುದು ರೂಪ ಹಾಸನ ಇವರ ನವ ಕೃತಿ. ಈ ಕೃತಿಯಲ್ಲಿ ಅವರು ಹೆಣ್ಣಿನ ಸ್ವಾಭಿಮಾನ, ಬಯಕೆ, ಧೈರ್ಯತನ ಮೊದಲಾದ ವಿಷಯಗಳ ಬಗ್ಗೆ ಬಹಳ ಸೊಗಸಾಗಿ ವಿವರಿಸಿದ್ದಾರೆ. ಅದಕ್ಕೆಂದೇ ಅವರು ‘ಹೆಣ್ಣೊಡಲ ಹಾಡು ಪಾಡಿನ ಗುಚ್ಛ’ ಈ ಕೃತಿ ಎಂದು ಹೇಳಿದ್ದಾರೆ. ರೂಪ ಹಾಸನ ಇವರು ತಮ್ಮ ಪುಸ್ತಕಕ್ಕೆ ಬರೆದ ಮುನ್ನುಡಿಯಿಂದ ಆಯ್ದ ಕೆಲವು ಸಾಲುಗಳು ಇಲ್ಲಿವೆ. ಓದುವಂತವರಾಗಿ... “ನಮ್ಮ ಕಣ್ಣಿಗೆ ಕಾಣುವುದೆಲ್ಲಾ ಎಂದಿಗೂ ಅರ್ಧ ಸತ್ಯ ಮಾತ್ರ! ಇತ್ತೀಚಿನ ವರ್ಷಗಳಲ್ಲಿ, ಎಷ್ಟೊಂದು ಪ್ರಮಾಣದಲ್ಲಿ…
ಲೇಖಕರು: addoor
April 27, 2023
ನಾವರಿಯದ ಲೋಕವೊಂದಿದೆ. ಅದು ಕೀಟಗಳ ಹುಟ್ಟು-ಬದುಕು-ಸಾವಿನ ಲೋಕ. ಈ ಅದ್ಭುತ ಲೋಕವನ್ನು ಭೂಲೋಕದ ಜನರಿಗೆ ಪರಿಚಯಿಸಿದವನು ಫ್ರೆಂಚ್ ಕೀಟಶಾಸ್ತ್ರಜ್ನ ಮತ್ತು ಪ್ರಸಿದ್ಧ ಲೇಖಕ ಜೀನ್ ಹೆನ್ರಿ ಫೇಬರ್. ಅದನ್ನೂ ಫೇಬರನನ್ನೂ ಕನ್ನಡಿಗರಿಗೆ ಪರಿಚಯಿಸಿದವರು ಬಿ.ಎಸ್. ರುಕ್ಕಮ್ಮ. ಮಕ್ಕಳಾದ ಬಾಲು, ವಸಂತಿ ಮತ್ತು ಪುಟ್ಟ ಬಾಲಕ ಶ್ರೀನಿವಾಸನೊಡನೆ ಅವರ ಹಿರಿಯಕ್ಕ ಶ್ರೀಮತಿ ನಡೆಸುವ ಸಂಭಾಷಣೆಯ ರೂಪದಲ್ಲಿ ಫೇಬರನ ಕೀಟಲೋಕದ ವಿಸ್ಮಯಗಳನ್ನು ಈ ಪುಸ್ತಕದಲ್ಲಿ ಲೇಖಕಿ ತೆರೆದಿಡುತ್ತಾರೆ. “ಅಬ್ಬಬ್ಬಾ, ನನ್ನ…
ಲೇಖಕರು: Ashwin Rao K P
April 27, 2023
ಶ್ರೀಧರ ಬಳಗಾರ ಅವರ ವಿನೂತನ ಕಾದಂಬರಿ ‘ವಿಸರ್ಗ'. ಉತ್ತರ ಕನ್ನಡದ ಗ್ರಾಮೀಣ ಭಾಗದಲ್ಲಿ ನಡೆಯುವ ಕುತೂಹಲಕಾರಿ ಕಥನ ಈ ಕಾದಂಬರಿಯಲ್ಲಿದೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ರಾಜೇಂದ್ರ ಚೆನ್ನಿ ಇವರು. ಇವರು ಬರೆದ ಮುನ್ನುಡಿಯ ಆಯ್ದ ಭಾಗಗಳು ಇಲ್ಲಿವೆ… “ಶ್ರೀಧರ ಬಳಗಾರ ಅವರ ‘ವಿಸರ್ಗ’ ಇತ್ತೀಚೆಗೆ ನಾನು ಓದಿದ ಪ್ರಭಾವಿ ಕಾದಂಬರಿಗಳಲ್ಲಿ ಒಂದು. ಓದಿದ ಮೇಲೆ ಬಹುಕಾಲ ತನ್ನ ವಸ್ತುವಿನ ಗಾಂಭೀರ್ಯ ಮತ್ತು ಹರಹು, ಆ ವಸ್ತುವಿನ ನಿರ್ವಹಣೆಯಲ್ಲಿ ಕಂಡುಬರುವ ಆಳ, ತೀವ್ರತೆ ಹಾಗೂ…
ಲೇಖಕರು: Ashwin Rao K P
April 25, 2023
ಕೆ.ಶ್ರೀನಿವಾಸ ರೆಡ್ಡಿ ಇವರು ಬರೆದ ವ್ಯಕ್ತಿತ್ವ ವಿಕಸನ ಸಂಬಂಧಿ ಲೇಖನಗಳ ಗುಚ್ಛ ‘ಅನ್ವೇಷಣೆ'. ಆಕರ್ಷಣೀಯ ಮುಖಪುಟವನ್ನು ಹೊಂದಿರುವ ಈ ಕೃತಿಯನ್ನು ಓದಿದ ಬಳಿಕ ಹಲವರ ಬದುಕಿನಲ್ಲಿ ಮಂದಹಾಸ ಮೂಡುವ ಸಾಧ್ಯತೆ ಇದೆ. ಸುಮಾರು ೧೫೦ ಪುಟಗಳ ಈ ಕೃತಿಯ ಬಗ್ಗೆ ಲೇಖಕರಾದ ಕೆ.ಶ್ರೀನಿವಾಸ ರೆಡ್ಡಿಯವರು ತಮ್ಮ ಮಾತಿನಲ್ಲಿ ಬರೆದಿರುವುದು ಹೀಗೆ... “ಕೆಲವರು ಅಂದುಕೊಂಡಿದ್ದನ್ನು ಮಾಡುತ್ತಾರೆ. ಅವರು ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಆ ದಾರಿಯಲ್ಲಿ ಅವರು ಬಹುದೂರಕ್ಕೆ ಸಾಗಿಯೇ ಬಿಡುತ್ತಾರೆ.…