ಪುಸ್ತಕ ಪರಿಚಯ
ಲೇಖಕರು: Ashwin Rao K P
May 17, 2024

ಭಾವರೇಖೆ ( ಒಂದು ಅನಂತ ಭಾವ) ನಂಕು ( ನಂದನ ಕುಪ್ಪಳ್ಳಿ) ಅವರ ಕವನಸಂಕಲನವಾಗಿದೆ. ಇದಕ್ಕೆ ಡಾ. ಶಿವಲಿಂಗೇಗೌಡ ಡಿ. ಅವರ ಬೆನ್ನುಡಿ ಬರಹವಿದೆ; ಈ ಕವನಸಂಕಲನದ ಕವಿತೆಗಳು ಪ್ರೀತಿಯ ಧ್ಯಾನದಲ್ಲಿ ಹುಟ್ಟಿದಂತವು. ಪ್ರೀತಿ, ಪ್ರೇಮ, ವಿರಹಗಳ ಸುತ್ತ ಹೆಣೆದಿರುವ ಈ ಕವಿತೆಗಳು ಪ್ರೀತಿಯ ಹುಡುಕಾಟದಲ್ಲಿ ತೊಡಗಿವೆ. ಪ್ರೀತಿಗಾಗಿ ಹಂಬಲಿಸುವ ಕನವರಿಸುವ, ಕಾತರಿಸುವ ಕವಿ ಎಲ್ಲದರಲ್ಲಿಯೂ ಪ್ರೀತಿಯನ್ನಲ್ಲದೆ ಬೇರೇನನ್ನೂ ಕಾಣಲಾರ. ಕೊನೆಗೆ ಪ್ರೀತಿಯನ್ನಲ್ಲದೆ ಬೇರೇನನ್ನೂ ನೀಡಲಾರ. ಮೇಲ್ನೋಟಕ್ಕೆ ಹೆಣ್ಣಿನ…
ಲೇಖಕರು: Ashwin Rao K P
May 15, 2024

ವೃತ್ತಿಯಲ್ಲಿ ಪತ್ರಕರ್ತರಾಗಿರುವ ಗಿರೀಶ್ ತಾಳಿಕಟ್ಟೆ ಇವರು ಜಗತ್ತಿನ ಪೋಲೀಸ್ ಚರಿತ್ರೆಯಲ್ಲಿ ಇದುವರೆಗೆ ಪತ್ತೆಯಾಗದ ರೋಚಕ, ನಿಗೂಢ ಪ್ರಕರಣಗಳನ್ನು ಪತ್ತೇದಾರಿ ಕಥೆಗಳಂತೆ ಈ ಕೃತಿಯಲ್ಲಿ ಅನಾವರಣ ಮಾಡಿದ್ದಾರೆ. ಇವರ ಬಗ್ಗೆ ಆರಕ್ಷಕ ಲಹರಿ ಮಾಸ ಪತ್ರಿಕೆಯ ಸಂಪಾದಕರೂ, ಗಿರೀಶ್ ತಾಳಿಕಟ್ಟೆ ಅವರ ‘ಬಾಸ್’ ಆಗಿರುವ ನಿವೃತ್ತ ಡಿಐಜಿಪಿ ಡಾ. ಡಿ.ಸಿ.ರಾಜಪ್ಪ ಅವರು ಸೊಗಸಾದ ಬೆನ್ನುಡಿ ಬರೆದಿದ್ದಾರೆ. ನಮ್ಮ ಸಹೋದ್ಯೋಗಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ “ ಪತ್ರಕರ್ತ ಗಿರೀಶ್ ತಾಳಿಕಟ್ಟೆಯವರು…
ಲೇಖಕರು: Ashwin Rao K P
May 13, 2024

ಪ್ರತಿಯೊಂದು ಪುಸ್ತಕಕ್ಕೆ ‘ಮುನ್ನುಡಿ' ಇರಬೇಕು ಎನ್ನುವುದು ಅಘೋಷಿತ ನಿಯಮ. ಆದರೆ ಈ ಮುನ್ನುಡಿಗಳನ್ನೇ ಸಂಗ್ರಹ ಮಾಡಿ ಅದರದ್ದೇ ಆದ ಒಂದು ಸಂಕಲನ ಮಾಡಬಹುದು ಎನ್ನುವ ದಿವ್ಯ ಯೋಚನೆ ಹೊಳೆದದ್ದು ಸಾಹಿತಿ ಎಂ ಎಸ್ ಆಶಾದೇವಿಯವರಿಗೆ. ಮುನ್ನುಡಿ ಬರೆಯುವುದೇ ಒಂದು ಕಲೆ. ಮುನ್ನುಡಿ ಬರೆಯುವ ಒಂದು ಅಪರೂಪದ ಸಾಹಿತಿಗಳ ವರ್ಗವೇ ಇದೆ. ಅವರ ಮುನ್ನುಡಿ ಓದಿದರೆ ಪುಸ್ತಕವನ್ನು ಕೂಡಲೇ ಓದಿ ಮುಗಿಸಬೇಕೆಂಬ ಹೆಬ್ಬಯಕೆ ಆಗುತ್ತದೆ. ಹಾಗಿರುತ್ತದೆ ಅವರ ಮುನ್ನುಡಿಯ ಪ್ರಭಾವ. ಅಂತಹ ಲೇಖಕರಲ್ಲಿ ಆಶಾ ದೇವಿಯವರೂ…
ಲೇಖಕರು: Ashwin Rao K P
May 10, 2024

ಮೈಸೂರಿನ ಇತಿಹಾಸ ಪ್ರಸಿದ್ಧ ಜಂಬೂ ಸವಾರಿಯ ನೇತೃತ್ವ ವಹಿಸಿದ್ದ ಅರ್ಜುನ ಎಂಬ ಹೆಸರಿನ ಆನೆಯ ಬಗ್ಗೆ ಮರೆಯಲಾಗದ ನೆನಪಿನ ಪುಸ್ತಕವೊಂದನ್ನು ಬರೆದಿದ್ದಾರೆ ಐತಿಚಂಡ ರಮೇಶ್ ಉತ್ತಪ್ಪ. ಅರ್ಜುನ ಎಂಬ ಆನೆಯ ಬಗ್ಗೆ ಬರೆಯುತ್ತಾ ‘ನಿನ್ನ ಮರೆಯಲೆಂತು ನಾ’ ಎಂದು ರೋಧಿಸಿದ್ದಾರೆ. ಇದಕ್ಕೆ ಎ.ಪಿ. ನಾಗೇಶ್ ಅವರ ಮುನ್ನುಡಿ ಬರಹ ಹೀಗಿದೆ; “ಎಂತಹ ಕೃತಿ..! ಓದುತ್ತಾ ಹೋದಂತೆ ಭಾವುಕನಾದೆ.. ಕಣ್ಣೀರು ತುಂಬಿ ಬಂತು.. ಕೊನೆಯ ಪುಟ ಮುಗಿಸಿದಾಗ ನನಗೆ ಅನ್ನಿಸಿದ್ದು ಮನುಷ್ಯನಿಗಿಂತ ಪ್ರಾಣಿಗಳು ಎಷ್ಟು…
ಲೇಖಕರು: ಬರಹಗಾರರ ಬಳಗ
May 09, 2024

ಕವನದಲ್ಲರಳಿದ ಕಲ್ಪನಾಲೋಕದ ಸ್ವಪ್ನ ಸುಂದರಿ: ಬಂಟ್ವಾಳ ತಾಲೂಕಿನ ವಿಟ್ಲದ ಸಮೀಪ ಅಡ್ಯನಡ್ಕ ಎಂಬಲ್ಲಿ ವಾಸವಾಗಿರುವ ಶ್ರೀಮತಿ ರತ್ನಾ ಭಟ್ ರವರು ಜಿಲ್ಲಾ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕಿ. ಯಕ್ಷಗಾನ ಹವ್ಯಾಸದ ಜೊತೆಗೆ ಉತ್ತಮ ವಾಗ್ಮಿಯಾಗಿರುವ ಇವರು ಸಾಹಿತ್ಯದಲ್ಲೂ ಕೃಷಿ ಮಾಡಿ ಸಮರ್ಥರು ಎನಿಸಿಕೊಂಡಿದ್ದಾರೆ. ಹಲವಾರು ಪ್ರಕಾರಗಳಲ್ಲಿ ಬರೆಯಬಲ್ಲ ಈಕೆ ಸ್ವಪ್ನ ಸುಂದರಿ ಕವನ ಸಂಕಲನದ ಮೂಲಕ ಕೃತಿಕಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ಸಂತಸದ ವಿಚಾರ. ಬಹಳಷ್ಟು ವರ್ಷಗಳಿಂದ…
ಲೇಖಕರು: Ashwin Rao K P
May 08, 2024

ಭಾರತ ಕಳೆದ ಹತ್ತು ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಕೆಲವರು ಮನಸ್ಸಿದ್ದು ಮತ್ತು ಕೆಲವರು ಮನಸ್ಸಿಲ್ಲದೇ. ಆದರೆ ಭಾರತ ಯಾವೆಲ್ಲಾ ಕ್ಷೇತ್ರಗಳಲ್ಲಿ, ಹೇಗೆ ಬದಲಾಗಿದೆ ಎನ್ನುವುದನ್ನು ಹೇಳ ಬಲ್ಲ ಅಂಕಿ ಅಂಶಗಳ ಹುಡುಕಾಟ ನಡೆಸುವುದು ಬಹಳ ಕಷ್ಟ. ಭಾರತ ಯಾವೆಲ್ಲಾ ವಿಷಯಗಳಲ್ಲಿ ಬದಲಾಗಿ, ವಿಶ್ವದ ಭೂಪಟದಲ್ಲಿ ತನ್ನದೇ ಆದ ಉನ್ನತ ಸ್ಥಾನವನ್ನು ಹೇಗೆ ಅಲಂಕರಿಸಿದೆ ಎನ್ನುವುದನ್ನು ತಿಳಿಸಲು ಯೂಟ್ಯೂಬರ್ ಹಾಗೂ ಉದಯೋನ್ಮುಖ ಲೇಖಕರಾದ ರಾಹುಲ್ ಅಶೋಕ್…