ಪುಸ್ತಕ ಪರಿಚಯ
ಲೇಖಕರು: Ashwin Rao K P
May 03, 2024

‘ಅಮೀಬಾ’ ಎನ್ನುವ ರೋಚಕ ಕಾದಂಬರಿಯನ್ನು ಬರೆದದ್ದು ಉದಯೋನ್ಮುಖ ಕಾದಂಬರಿಕಾರರಾದ ಭಗೀರಥ. ಅವರು ಈ ಕೃತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಪುಸ್ತಕದ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ಅದರ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...
“ನಾನು ನಾಲ್ಕನೇ ಅಥವಾ ಐದನೇ ತರಗತಿಯಲ್ಲಿದ್ದಾಗ ಮನು ಮತ್ತು ಮೀನು, ಅಕ್ಬರ್-ಬೀರಬಲ್, ತೆನಾಲಿರಾಮ, ಪಂಡಿತ ತಾರಾನಾಥ, ಪುಣ್ಯಕೋಟಿ, ಈ ರೀತಿಯ ಹಲವು ಸ್ವಾರಸ್ಯಕರ ಕಥೆಗಳ ಹೆಸರು ಮತ್ತು ಅದಕ್ಕೆ ಸಂಬಂಧಪಟ್ಟಂತೆ ಇರುತ್ತಿದ್ದ ಛಾಯಾಚಿತ್ರಗಳಿಗೆ ಹೆಚ್ಚು…
ಲೇಖಕರು: Ashwin Rao K P
May 01, 2024

ಒಂದೆಲೆ ಮೇಲಿನ ಕಾಡು -ಊರು ಮನೆ ಮಾತು ಎನ್ನುವ ಕೃತಿಯನ್ನು ಸ ವೆಂ ಪೂರ್ಣಿಮಾ ಅವರು ಬರೆದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಕೇಶವ ಮಳಗಿ ಇವರು. ತಮ್ಮ ಮುನ್ನುಡಿಯಲ್ಲಿ ಅವರು ವ್ಯಕ್ತ ಪಡಿಸಿದ ಅಭಿಪ್ರಾಯಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...
“ʻಒಂದೆಲೆ ಕಾಡಿನ ಮೇಲೆʼ ಪುಸ್ತಕ ಅಪರೂಪದ ಗುಣವಿಶೇಷಣಗಳನ್ನು ಪಡೆದ ಬರಹಗಳ ಸಂಚಯ. ನೆನಪುಗಳು ಕಿಕ್ಕಿರಿದ ಈ ಬರಹಗಳಲ್ಲಿ ಬಾಲ್ಯ, ತಾರುಣ್ಯ, ಮಧ್ಯ ವಯಸ್ಸಿನ ಮೆದು-ಮೆಲು ಮಾತು, ಅನುಭವದಿಂದ ಪಳಗಿ ಪಕ್ವವಾದ ಮೃದು-…
ಲೇಖಕರು: addoor
May 01, 2024

ನವಕರ್ನಾಟಕ ಪ್ರಕಾಶನದ “ಕಿರಿಯರ ಕಥಾಮಾಲೆ”ಯಲ್ಲಿ ಪ್ರಕಟವಾಗಿರುವ ಈ ಸಂಕಲನದಲ್ಲಿ ವಿವಿಧ ಲೇಖಕರ 13 ಕತೆಗಳಿವೆ. ಪ. ರಾಮಕೃಷ್ಣ ಶಾಸ್ತ್ರಿ, ಪಳಕಳ ಸೀತಾರಾಮ ಭಟ್ಟ, ಸಂಪಟೂರು ವಿಶ್ವನಾಥ್, ದೊಡ್ಡಬಾಣಗೆರೆ ಪ್ರಕಾಶಮೂರ್ತಿ ಮತ್ತು ವಿ. ರಾಮಚಂದ್ರ ಶಾಸ್ತ್ರಿ ಬರೆದಿರುವ ಕತೆಗಳು.
ಯಾವುದೇ ಸಮಾಜದಲ್ಲಿ ವ್ಯಕ್ತಿಗಳ ನೀತಿ-ನಡತೆಯು ಆ ಸಮಾಜದ ಸಹಜೀವನ, ಶಾಂತಿ ಹಾಗೂ ನೆಮ್ಮದಿಗೆ ಕಾರಣವಾಗುತ್ತದೆ. ಇವುಗಳನ್ನು ಬಾಲ್ಯದಲ್ಲಿಯೇ ರೂಪಿಸುವುದು ಬಹಳ ಅಗತ್ಯ ಮತ್ತು ಇದು ನಿರಂತರವಾಗಿ ನಡೆಯಬೇಕಾದ ಕಾಯಕ. 1950…
ಲೇಖಕರು: Ashwin Rao K P
April 29, 2024

ವೃತ್ತಿಯಲ್ಲಿ ವೈದ್ಯರಾಗಿದ್ದುಕೊಂಡು ಪ್ರವೃತ್ತಿಯಲ್ಲಿ ಸಾಹಿತಿ, ಕವಿ ಆಗಿರುವ ಡಾ. ಸುರೇಶ ನೆಗಳಗುಳಿ ಅವರು ಬರೆದ ಮುಕ್ತಕಗಳ ಸಂಕಲನ ‘ಧೀರತಮ್ಮನ ಕಬ್ಬ'. ಇದು ಮೂರನೇ ಸಂಪುಟ. ನೆಗಳಗುಳಿ ಅವರ ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಅರವಿಂದ ಚೊಕ್ಕಾಡಿ. ಅದರಲ್ಲಿ “ಡಾ. ಸುರೇಶ ನೆಗಳಗುಳಿ ಅವರ ಮುಕ್ತಕಗಳು ಡಿ.ವಿ.ಜಿ.ಯವರನ್ನು ಹೋಲುವ ನೀತಿಬೋಧಕ ರಚನೆಗಳಾಗಿವೆ. ‘ಧೀರತಮ್ಮ'ನನ್ನು ಉದ್ದೇಶಿಸಿ ಹೇಳುವ ವಿನ್ಯಾಸದಲ್ಲಿ ರಚನೆಯಾಗಿರುವ ಮುಕ್ತಕಗಳಲ್ಲಿ ಬದುಕಿನ ಬಹು ಮಗ್ಗುಲಿನ…
ಲೇಖಕರು: Ashwin Rao K P
April 26, 2024

ನಿವೃತ್ತ ಮುಖ್ಯ ಶಿಕ್ಷಕಿ, ಸಾಹಿತಿ ರತ್ನಾ ಕೆ ಭಟ್, ತಲಂಜೇರಿ ಇವರು ಬರೆದ ಆಧುನಿಕ ವಚನಗಳ ಸಂಗ್ರಹವು ‘ವಚನಬಿಂದು' ಎಂಬ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಪ್ರಕಟವಾಗಿದೆ. “ರತ್ನಕ್ಕನೆಂದೇ ಜನರ ಮನಸ್ಸಿನಲ್ಲಿ ನೆಲೆ ನಿಂತವರು ಇವರು. ಇವರು ಮೂಲತಃ ಕವಿಗಳ ವಂಶದವರು. ಆದುದರಿಂದ ಹುಟ್ಟುತ್ತಲೇ ಕವಿತ್ವ ಇವರ ರಕ್ತದಲ್ಲಿ ಸಂಚರಿಸುತ್ತಲೆ ಇತ್ತು. ಅದು ಈ ಹಿರಿಯ ಪ್ರಾಯದಲ್ಲಿ ಹೊರಹೊಮ್ಮಿದೆ. ಇಂದು ನಾಡಿನಾದ್ಯಂತ ಕನ್ನಡ ನಾಡಿನ ಲೇಖಕಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಇಲ್ಲಿ ಇವರು ಬರೆದಿರುವ…
ಲೇಖಕರು: Ashwin Rao K P
April 24, 2024

'ಭವದ ಅಗುಳಿ’ ಸಂತೋಷ ಅಂಗಡಿ ಅವರ ಕವನ ಸಂಕಲನ. ಈ ಕೃತಿಗೆ ಎಚ್.ಎಲ್. ಪುಷ್ಪ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಇಲ್ಲಿನ ಕವಿತೆಗಳಲ್ಲಿ ತಾನು ಕಂಡ, ಅರ್ಥೈಸಿಕೊಂಡ ಬದುಕನ್ನು ಹಿಡಿಯಲೆತ್ನಿಸುವ ಒಬ್ಬ ಕವಿಯಿದ್ದಾನೆ. ಇಲ್ಲ ಲೋಕ ಸಾಂಗತ್ಯದ ಜೊತೆಗೆ, ಅವನಿಗೆ ಆತ್ಮ ಸಾಂಗತ್ಯವೂ ಸಹ ಸಾಧ್ಯ. ಹೀಗಾಗಿ ಅವನು ಹೊರಗೂ, ಒಳಗೂ ಸಂವಾದಿಸಬಲ್ಲವನು. ಹೊರಗನ್ನು ಒಳಗೆ ತೆಗೆದುಕೊಳ್ಳುತ್ತಾ ತನ್ನ ಗ್ರಹಿಕೆಯ ಲೋಕಕ್ಕೆ ಪರಿಚಿತ ವಸ್ತು, ಶಬ್ದಗಳನ್ನು ಸೇರಿಸುತ್ತಾ ಓದುಗನನ್ನು ಒಳಗೊಳ್ಳುವ…