ಪುಸ್ತಕ ಪರಿಚಯ
ಲೇಖಕರು: Ashwin Rao K P
April 10, 2024

ಲೇಖಕ, ತಾಳಮದ್ದಳೆ ಅರ್ಥಧಾರಿ, ಉಪನ್ಯಾಸಕ ಹೀಗೆ ಹಲವು ಮುಖಗಳಿಂದ ಪ್ರಸಿದ್ಧರಾಗಿರುವವರು ರಾಧಾಕೃಷ್ಣ ಕಲ್ಚಾರ್. ಅವರ ಹಲವು ಕೃತಿಗಳು ಈಗಾಗಲೇ ಪ್ರಕಟವಾಗಿದ್ದು ಜನಪ್ರಿಯತೆ ಗಳಿಸಿವೆ. ತನ್ನದೇ ಆದ ಓದುಗರನ್ನು ಪಡೆದುಕೊಂಡ ಕಲ್ಚಾರ್ ಅವರು ಅಂಕಣಕಾರರಾಗಿಯೂ ಜನಪ್ರಿಯರು. ‘ಕೂಡುಮನೆ' ಎಂಬ ಈ ಪುಟ್ಟ ಕಾದಂಬರಿ ಸುಮಾರು ಮೂರು ದಶಕಗಳ ಹಿಂದೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿತ್ತು. ಸದ್ಯ ಮುದ್ರಿತ ಪ್ರತಿಗಳೆಲ್ಲ ಮುಗಿದಿರುವುದರಿಂದ ಎರಡನೆಯ ಬಾರಿಗೆ ಪ್ರಕಟವಾಗುತ್ತಿದೆ.
ಒಂದು…
ಲೇಖಕರು: Ashwin Rao K P
April 05, 2024

ವೃತ್ತಿಯಲ್ಲಿ ದೈಹಿಕ ಶಿಕ್ಷಕರೂ, ಪ್ರವೃತ್ತಿಯಲ್ಲಿ ಸಾಹಿತಿಯೂ ಆಗಿರುವ ಹಾ ಮ ಸತೀಶರು ಬರೆದ ‘ಕೊನೆಯ ನಿಲ್ದಾಣ' ಎನ್ನುವ ಕವನ ಸಂಕಲನವು ಕಥಾಬಿಂದು ಪ್ರಕಾಶನದ ಮೂಲಕ ಬಿಡುಗಡೆಯಾಗಿದೆ. ಹರಿನರಸಿಂಹ ಉಪಾಧ್ಯಾಯ (ವಿಹಾರಿ) ಇವರು ಈ ಕೃತಿಗೆ ಬಹಳ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ಸತೀಶರ ಪರಿಚಯ ಮಾಡಿಕೊಡುತ್ತಾ ಅವರ ಕವನಗಳ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ಅವರು ವ್ಯಕ್ತ ಪಡಿಸಿದ ಕೆಲವು ಭಾವಗಳ ಆಯ್ದ ಸಾಲುಗಳು ಇಲ್ಲಿವೆ…
“ಇನ್ನೂ ಒಂದು ಹೆಜ್ಜೆ ಮುಂದಿಟ್ಟು…
ಲೇಖಕರು: Ashwin Rao K P
April 03, 2024

‘ವರ್ತಮಾನ ಭಾರತ' ಎನ್ನುವ ನೂತನ ಕೃತಿಯಲ್ಲಿ ಖ್ಯಾತ ಚಿಂತಕ, ಲೇಖಕ ಪುರುಷೋತ್ತಮ ಬಿಳಿಮಲೆ ಇವರು ಪ್ರಕಟ ಮಾಡಿದ್ದಾರೆ. ಸಮಕಾಲೀನ ಘಟನೆಗಳ ಬಗ್ಗೆ ಇವರು ಬರೆದ ಪುಟ್ಟ ಪುಟ್ಟ ಬರಹಗಳೇ ಸಂಗ್ರಹಗೊಂಡು ‘ವರ್ತಮಾನ ಭಾರತ’ ಎನ್ನುವ ಕೃತಿಯಾಗಿ ಹೊರಬಂದಿದೆ. ಈ ಕೃತಿಗೆ ಬರೆದ ಲೇಖಕರ ಮಾತಿನಲ್ಲಿ ಪುರುಷೋತ್ತಮ ಬಿಳಿಮಲೆ ಅವರು ವ್ಯಕ್ತ ಪಡಿಸಿದ ಕೆಲವು ಮಾತುಗಳು ನಿಮ್ಮ ಓದಿಗಾಗಿ...
“ಸಂಸ್ಥೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದುದರಿಂದ ವೈಯಕ್ತಿಕವಾಗಿ ಹೆಚ್ಚು ಬರೆಯಲಾಗಲಿಲ್ಲ. ೨೦೨೦ರಲ್ಲಿ…
ಲೇಖಕರು: Ashwin Rao K P
April 01, 2024

ನಿವೃತ್ತ ಮುಖ್ಯ ಶಿಕ್ಷಕಿ, ಕವಯತ್ರಿ ಶ್ರೀಮತಿ ರತ್ನಾ ಕೆ ಭಟ್ ತಲಂಜೇರಿ ಇವರ ನೂತನ ಕೃತಿ 'ಹನಿ ಹನಿಗಳ ನಡುವೆ' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕೃತಿಯ ಪ್ರಮುಖ ಅಂಶವೆಂದರೆ ಇದೊಂದು ‘ಆಲ್ ಇನ್ ಒನ್' ಎನ್ನುವಂಥ ಪುಸ್ತಕ. ಏಕೆಂದರೆ ಹನಿ ಕವನದ ಎಲ್ಲಾ ಪ್ರಕಾರಗಳು ಇದರಲ್ಲಿವೆ. ಹಾಯ್ಕು, ಟಂಕಾ, ಅಬಾಬಿ, ಚುಟುಕು, ರುಬಾಯಿ, ಶಿಶುಗೀತೆ, ಮಿನಿ ಕವನ ಎಲ್ಲಾ ಈ ಸಂಕಲನದಲ್ಲಿ ಅಡಕವಾಗಿದೆ.
‘ಹನಿ ಹನಿಗಳ ನಡುವೆ' ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಕವಿ, ಸಾಹಿತಿ, ಶಿಕ್ಷಕರಾದ ಹಾ ಮ ಸತೀಶ್.…
ಲೇಖಕರು: addoor
March 30, 2024

ಬಾಲ್ಯದಲ್ಲಿ ಅಜ್ಜ ಅಜ್ಜಿಯರಿಂದ ಜಾನಪದ ಕತೆಗಳನ್ನು ಕೇಳಿದವರಿಗೆ ಗೊತ್ತು ಅವುಗಳ ಸೊಗಡು. ಅವು ಚಿರನೂತನ ಕತೆಗಳು. ಈ ಸಂಗ್ರಹದಲ್ಲಿವೆ 42 ಜಾನಪದ ಕತೆಗಳು. “ಸುಮಾರು 70 ವರ್ಷದ ಹಿಂದೆಯೇ ಹುಬ್ಬಳ್ಳಿಯಲ್ಲಿ ಪ್ರಕಟಗೊಂಡಿದ್ದ ಜಾನಪದ ಕಥೆಗಳ ಸಂಕಲನದಲ್ಲಿವನ್ನು ಸಂಗ್ರಹಿಸಿ, ತಿದ್ದಿ, ಒಂದು ಆಕಾರವನ್ನು ಕೊಟ್ಟು, ಈ ಪುಸ್ತಕವನ್ನು ಬರೆದಿದ್ದೇನೆ” ಎಂದು “ನನ್ನುಡಿ"ಯಲ್ಲಿ ತಿಳಿಸಿದ್ದಾರೆ ಲೇಖಕಿ ಎಸ್.ಬಿ. ಸರಸ್ವತಿ.
"ಜಿಪುಣ ಮುದುಕಿ” ಎಂಬ ಕತೆಯ ಸಾರಾಂಶ: ಒಂದೂರಿನಲ್ಲಿ ಜಿಪುಣ ಮುದುಕಿ…
ಲೇಖಕರು: Ashwin Rao K P
March 29, 2024

ಕಳೆದ ಹಲವಾರು ವರ್ಷಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಯಜ್ಞ ನಾರಾಯಣ ಉಳ್ಳೂರ್ ತಮ್ಮ ಬಿಡುವಿನ ವೇಳೆಯಲ್ಲಿ ಲೇಖನ, ಹಾಸ್ಯ ಲೇಖನಗಳನ್ನು ಬರೆಯುವ ಹವ್ಯಾಸ ಇರಿಸಿಕೊಂಡಿದ್ದಾರೆ. ಈಗಾಗಲೇ ಹಲವು ಹಾಸ್ಯ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಬರೆದು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ೨೦ ಲೇಖನಗಳನ್ನು ಈ ಪುಟ್ಟ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ.
ಯಜ್ಞನಾರಾಯಣ ಇವರು ತಮ್ಮ ‘ಎರಡು ಮಾತು' ಹೇಳುವುದು ಹೀಗೆ -” ಇಂದಿನ ಸಮಾಜದಲ್ಲಿ ನಗುವವರ…