ಪುಸ್ತಕ ಪರಿಚಯ
ಲೇಖಕರು: Ashwin Rao K P
May 29, 2024

‘ನಾವು ನಮ್ಮ ಸಾಧಕರು' ಮಾಲಿಕೆಯ ೧೭ನೇ ಕೃತಿಯಾಗಿ ಹೊರಬಂದಿದೆ ಅನುಸೂಯ ಯತೀಶ್ ಅವರ ‘ರಾಗಂ-ಬರಹ ಬೆರಗು'. ಈ ಕೃತಿಯಲ್ಲಿ ಅನುಸೂಯ ಯತೀಶ್ ಅವರು ‘ರಾಗಂ’ ಅಂದರೆ ಡಾ. ರಾಜಶೇಖರ ಮಠಪತಿ ಎನ್ನುವ ಪ್ರಬುದ್ಧ ಸಂವೇದನಾಶೀಲ ಲೇಖಕರ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಇವರ ಕಥೆ, ಕಾವ್ಯ, ಕಾದಂಬರಿ, ಅಂಕಣ, ಅನುವಾದ, ನಾಟಕ, ಸಂಶೋಧನೆ ಮತ್ತು ವಿಮರ್ಶೆಗಳೆಂದರೆ ಒಂದು ರೀತಿಯ ಬೆರಗು ಎಂದು ಬೆನ್ನುಡಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ ಲೇಖಕಿಯಾದ ಅನುಸೂಯ ಯತೀಶ್. ಈ ಕೃತಿಗೆ…
ಲೇಖಕರು: Ashwin Rao K P
May 27, 2024

‘ಮಲೆನಾಡಿನ ರೋಚಕ ಕಥೆಗಳು' ಎಂಬ ಸರಣಿಗಳ ಮೂಲಕ ಪ್ರಸಿದ್ಧಿಯನ್ನು ಪಡೆದಿರುವ ಕಾದಂಬರಿಕಾರರಾದ ಗಿರಿಮನೆ ಶ್ಯಾಮರಾವ್ ಅವರು ಬರೆದ ಮನೋವೈಜ್ಞಾನಿಕ ಕಾದಂಬರಿ ‘ಅನಾಥ ಹಕ್ಕಿಯ ಕೂಗು'. ಮಲೆನಾಡಿನ ರೋಚಕ ಕಥೆಗಳು ಬಹುತೇಕ ಪರಿಸರಕ್ಕೆ ಸಂಬಂಧಿಸಿದ ಕಥನಗಳಾದರೆ ‘ಅನಾಥ ಹಕ್ಕಿಯ ಕೂಗು’ ಎಂಬ ಕೃತಿ ಪತಿ, ಪತ್ನಿ ಮತ್ತು ಮಕ್ಕಳ ಮನಸ್ಸಿನ ತೊಳಲಾಟದ ಬಗ್ಗೆ ಬರೆದಿರುವ ಮನೋವೈಜ್ಞಾನಿಕ ಕಾದಂಬರಿ.
ಗಿರಿಮನೆಯವರೇ ತಮ್ಮ ಬೆನ್ನುಡಿಯಲ್ಲಿ ಬರೆದಿರುವಂತೆ “ ‘ಅನಾಥ ಹಕ್ಕಿಯ ಕೂಗು' ಒಂದು ಮನೋವೈಜ್ಞಾನಿಕ ಕಾದಂಬರಿ…
ಲೇಖಕರು: Ashwin Rao K P
May 24, 2024

ನಿವೃತ್ತ ಮುಖ್ಯ ಶಿಕ್ಷಕಿ, ಸಾಹಿತಿ ರತ್ನಾ ಕೆ ಭಟ್ ಅವರು ಬರೆದ ಕವನಗಳ ಸಂಕಲನವೇ ‘ಹೊನ್ನರಶ್ಮಿ'. ಕವಯತ್ರಿ ವಿವಿಧ ಸಂದರ್ಭಗಳಲ್ಲಿ ಬರೆದ ಕವನಗಳನ್ನು ಒಟ್ಟು ಸೇರಿಸಿ ‘ಹೊನ್ನರಶ್ಮಿ' ಎನ್ನುವ ಸಂಕಲನ ಹೊರತಂದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಗಝಲ್ ಕವಿ, ವೈದ್ಯರೂ ಆಗಿರುವ ಡಾ. ಸುರೇಶ ನೆಗಳಗುಳಿ. ಇವರು ತಮ್ಮ ‘ನೆಗಳಗುಳಿ ಮುಮ್ಮಾತುಗಳು' ಇದರಲ್ಲಿ ಬರೆದಂತೆ “ ಹೊನ್ನರಶ್ಮಿ ಕವನ ಸಂಕಲನವು ಹಲವು ವಿಧದ ಕಾವ್ಯ ಪ್ರಕಾರ ಸಹಿತವಾದ ಒಂದು ಕಾವ್ಯ ಗುಚ್ಛ. ಇದರಲ್ಲಿ…
ಲೇಖಕರು: addoor
May 23, 2024

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಹಲವು ಹಾಡುಗಳು ಹೋರಾಟದ ಕಿಚ್ಚು ಹಚ್ಚಿಸುತ್ತಿದ್ದವು. ಸಭೆಗಳಲ್ಲಿ, ಪ್ರತಿಭಟನೆಗಳಲ್ಲಿ, ಮೆರವಣಿಗೆಗಳಲ್ಲಿ ಜನಸಾಮಾನ್ಯರೂ ಮುಕ್ತಕಂಠದಿಂದ ಹಾಡುತ್ತಿದ್ದ ಗೀತೆಗಳು ನೂರಾರು. ದೀರ್ಘ ಹೋರಾಟದ ಅವಧಿಯಲ್ಲಿ ಜನರ ಉತ್ಸಾಹ ಹೆಚ್ಚುವಂತೆ ಮಾಡುವಲ್ಲಿ ಇಂತಹ ಗೇಯಪದಗಳ ಕೊಡುಗೆಗೆ ಬೆಲೆ ಕಟ್ಟಲಾಗದು. ಕೆಲವು ಗೇಯಪದಗಳಂತೂ ಕೆಲವೇ ನಿಮಿಷಗಳಲ್ಲಿ ಹಾಡುತ್ತಿದ್ದವರ ಮೈಮನಗಳಲ್ಲಿ ರೋಮಾಂಚನ ಹುಟ್ಟಿಸುತ್ತಿದ್ದವು. ಗುಂಪಿನಲ್ಲಿ ಹಾಡುವಾಗಲಂತೂ ಪ್ರತಿಯೊಬ್ಬರಿಗೂ ಹಾಡು…
ಲೇಖಕರು: Ashwin Rao K P
May 22, 2024

ಸಾರಿಕ ಶೋಭಾ ವಿನಾಯಕ ಎನ್ನುವ ಕವಯತ್ರಿ ‘ಬೆಳಕ ಬೆನ್ನ ಹಿಂದೆ' ಎನ್ನುವ ಚುಟುಕು ಮತ್ತು ಕವನಗಳ ಸಂಕಲನವನ್ನು ಹೊರತಂದಿದ್ದಾರೆ. ಈ ಕೃತಿಗೆ ಮೈಸೂರು ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಆದ ಡಾ. ಎಸ್ ಎನ್ ಮಂಜುನಾಥ ಇವರು ಬೆನ್ನುಡಿಯನ್ನು ಬರೆದು ಪ್ರೋತ್ಸಾಹ ತುಂಬಿದ್ದಾರೆ. ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ನಿಮ್ಮ ಓದಿಗಾಗಿ...
“ಸಾರಿಕ ಅವರು ಮೂಲತಃ ದಾವಣಗೆರೆ ಹತ್ತಿರದ…
ಲೇಖಕರು: Ashwin Rao K P
May 20, 2024

ಸಂತೋಷಕುಮಾರ ಮೆಹೆಂದಳೆ ಅವರ ಕೃತಿಗಳಲ್ಲಿ ಒಂದು ವಿಶೇಷತೆ ಸದಾ ಇರುತ್ತದೆ. ಅವರು ಆಯ್ದುಕೊಳ್ಳುವ ವಿಷಯ ಮತ್ತು ಅದನ್ನು ಪ್ರಸ್ತುತ ಪಡಿಸುವ ರೀತಿ ಎರಡೂ ಅದ್ಭುತ. ಅವರು ಯಾವ ವಿಷಯ ಆಯ್ದುಕೊಂಡರೂ ಅದರ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಾರೆ. ಅದು ಕಾಶ್ಮೀರದ ಉಗ್ರವಾದವಾಗಲೀ, ಅಘೋರಿಗಳ ವಿಸ್ಮಯ ಲೋಕವಾಗಲೀ, ವೈಜಯಂತಿಪುರದ ರಾಜಮನೆತನವಾಗಲಿ ಅದರ ವಿಷಯ ಸಂಗ್ರಹಣೆಯ ಹಿಂದಿನ ಶ್ರಮ ಮೆಹೆಂದಳೆ ಅವರಿಗೇ ಗೊತ್ತು. ಈ ಕಾರಣದಿಂದಲೇ ಅವರ ಕೃತಿಗಳನ್ನು ಓದುವಾಗ ನಮಗೆ ಖುದ್ದು ಆ ಜಾಗಗಳಲ್ಲಿ ಓಡಾಡಿದ…