ಪುಸ್ತಕ ಪರಿಚಯ

ಲೇಖಕರು: Ashwin Rao K P
June 01, 2023
ಕಾಲ ಬದಲಾದಂತೆ ಯಕ್ಷಗಾನ ಕಲೆಯ ಸ್ವರೂಪವೂ ಬದಲಾಗುತ್ತಾ ಸಾಗಿದೆ. ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನ ಪ್ರಸಂಗವು ಕಾಲಮಿತಿಗೆ ಒಳಪಟ್ಟು, ಈಗ ನಡುರಾತ್ರಿಯವರೆಗೆ ಮಾತ್ರ ನಡೆಯುತ್ತಿದೆ. ಇದೇ ಸಮಯದಲ್ಲಿ ಪ್ರಸಂಗಗಳ ಸ್ವರೂಪ, ಕಲಾವಿದರ ಬವಣೆಗಳನ್ನು ಸವಿವರವಾಗಿ ತಿಳಿಸುವ ಹೊತ್ತಗೆಯೊಂದು ಬಿಡುಗಡೆಯಾಗಿದೆ. ಯಕ್ಷಪ್ರೇಮಿ ಲೇಖಕರಾದ ಸೃಜನ್ ಗಣೇಶ್ ಹೆಗಡೆ ಅವರು ಬರೆದ ‘ಉತ್ಕಟ' ಎಂಬ ೯೮ ಪುಟಗಳ ಈ ಪುಟ್ಟ ಪುಸ್ತಕದಲ್ಲಿ ಯಕ್ಷಗಾನ, ಕಲಾವಿದರ ಬದುಕು, ಉಳಿದುಕೊಂಡ ಮೂಲ ಸತ್ವ ಬಗ್ಗೆ ಬಹಳ ಸೊಗಸಾದ…
ಲೇಖಕರು: Ashwin Rao K P
May 30, 2023
ಚಂದ್ರಕಾಂತ್ ಕೆ.ಎಸ್. ಇವರು ‘ಮಹಾಭಾರತದ ಜೀವನ ಸಂದೇಶ' ಎಂಬ ಪುಟ್ಟ ಪುಸ್ತಕದಲ್ಲಿ ನಮ್ಮ ಜೀವನಕ್ಕೆ ಅಗತ್ಯವಾದ ಹಲವಾರು ವಿಷಯಗಳನ್ನು ಕಟ್ಟಿಕೊಟ್ಟಿದ್ದಾರೆ. ಸುಮಾರು ೮೬ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಜಗದೀಶ ಶರ್ಮಾ ಇವರು. ಇವರು ತಮ್ಮ ಮುನ್ನುಡಿಯಲ್ಲಿ ಬರೆದ ವಿಷಯಗಳನ್ನು ಆಯ್ದು ಇಲ್ಲಿ ನೀಡಲಾಗಿದೆ. ಓದುವಿರಾಗಿ... “ಮಹಾಭಾರತವನ್ನು ವಿಶ್ವಕೋಶ ಎಂದು ಕರೆಯಬೇಕು. ಅದರಲ್ಲಿ ಅಷ್ಟು ವಿಷಯಗಳು ಆಡಕವಾಗಿವೆ. ವಿಶೇಷವೆಂದರೆ ಅಂದೆಂದೋ ರಚಿತವಾದ ಆ ಕೃತಿ ಇಂದಿಗೂ…
ಲೇಖಕರು: Ashwin Rao K P
May 27, 2023
‘ಪ್ರೇಮಾಯತನ’ ಜಬೀವುಲ್ಲಾ ಎಂ.ಅಸದ್ ಅವರ ಕವನ ಸಂಕಲನ. ಈ ಕೃತಿಗೆ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರು ಬೆನ್ನುಡಿ ಬರಹ ಬರೆದಿದ್ದಾರೆ. ಏಕಾಂಗಿಯ ಕನವರಿಕೆಗಳು ಮೂಲಕ ಕಾವ್ಯಲೋಕ ಪ್ರವೇಶಿಸಿದ ಅವರ ಆಧ್ಯಾತ್ಮಿಕ ಸ್ಪರ್ಶ ಪಡೆದ ಎರಡನೆ ಸಂಕಲನ ಗಾಳಿಗೆ ಕಟ್ಟಿದ ಗೆಜ್ಜೆಯ ಮೂಲಕ ಧೃಡವಾದ ಹೆಜ್ಜೆಯೂರಿ ಬೆಳೆಯುತ್ತಿದ್ದಾರೆ. ಅವರ ಕಾವ್ಯಾಭಿವ್ಯಕ್ತಿ ಮಾಗಿದೆ. ಅವರೊಳಗಿದ್ದ ಚಿತ್ರಕಾರ, ವಿಮರ್ಶಕ ಹೊರಬಂದು ಅವರ ಬರವಣಿಗೆಗೆ ಹೊಸ ಆಯಾಮ ನೀಡುತ್ತಿರುವುದು ವಿಶೇಷ ಎಂದಿದ್ದಾರೆ ಡಾ. ಮೀರಾಸಾಬಿಹಳ್ಳಿ ಶಿವಣ್ಣ…
ಲೇಖಕರು: Ashwin Rao K P
May 25, 2023
ಗಜಲ್ ಗಳನ್ನು ಆಸ್ವಾದಿಸಬಲ್ಲ ಗಜಲ್ ಪ್ರೇಮಿಗಳಿಗಾಗಿ ಮಲ್ಲಿನಾಥ ಶಿ ತಳವಾರ ಇವರು ‘ಗಜಲ್ ಗುಲ್‍ಮೊಹರ್’ ಎಂಬ ಬಹಳ ಸೊಗಸಾದ ಕೃತಿಯನ್ನು ಹೊರತಂದಿದ್ದಾರೆ. ಆಕರ್ಷಕ ಮುಖಪುಟದ ಸುಮಾರು ೨೬೦ ಪುಟಗಳ ಈ ಪುಸ್ತಕವು ಗಜಲ್ ಪ್ರೇಮಿಗಳಿಗೆ ಖಂಡಿತಾ ಇಷ್ಟವಾಗುವ ಕೃತಿ. ಪುಸ್ತಕದ ಮುನ್ನುಡಿಯಲ್ಲಿ ಕಂಡ ಕೆಲ ಸಾಲುಗಳು ಹೀಗಿವೆ... ಯಾವ ಪ್ರೇಮಿಯೂ ತನ್ನ ಎದೆಗಾದ ಗಾಯವು ಬೇಗ ಗುಣವಾಗಲಿ ಎಂದು ಬಯಸಲಾರ - ಆ ಮಧುರ ಯಾತನೆಯೇ ಗಜಲ್. ಗಜಲ್, ನೋವಿನ ಜನ್ದಾಜ್ ಹೊತ್ತು ನಡೆಯುತ್ತಿರುವ ಹೃದಯವಂತ. ಗಜಲ್, ಹೆಣ್ಣು:…
ಲೇಖಕರು: Ashwin Rao K P
May 23, 2023
ಪತ್ರಕರ್ತ, ಲೇಖಕರಾದ ಕೃಷ್ಣಮೂರ್ತಿ ಹೆಬ್ಬಾರ ಇವರು ಸಂಪಾದಿಸಿದ ಕೃತಿಯೇ ‘ಜನವಾಣಿ' ಅವರ ಪ್ರಕಾರ ಸಾಕಷ್ಟು ದೇಶಗಳಲ್ಲಿ ಅಗ್ನಿಪಥದಂತಹ ಯೋಜನೆಗಳಿವೆ. ಅಮೇರಿಕಾ ಸಹಿತ ಕೆಲವು ದೇಶಗಳು ತನ್ನ ಎಲ್ಲಾ ಪ್ರಜೆಗಳಿಗೆ ಎರಡು ವರ್ಷ ಸೈನ್ಯದಲ್ಲಿ ಸೇವೆಯನ್ನು ಕಡ್ಡಾಯ ಮಾಡಿದೆ. ಆದರೆ ಭಾರತ ದೇಶದಲ್ಲಿ ಈ ರೀತಿಯ ಕಾನೂನು ಇಲ್ಲ. ಅವರ ‘ಜನವಾಣಿ’ ನುಡಿನೋಟಗಳ ಆಯ್ದಭಾಗ ನಿಮ್ಮ ಓದಿಗಾಗಿ... ಮಾಧ್ಯಮಿಕ, ಪದವಿ ಶಿಕ್ಷಣ ಮುಗಿಸಿ ಖಾಲಿ ತಿರುಗುತ್ತಿರುವ ಯುವಕ, ಯುವತಿಯರಲ್ಲಿ ಅರ್ಹರನ್ನು ಆಯ್ದು ಅವರಿಗೆ ಶಿಸ್ತು…
May 21, 2023
“ಅಪ್ಪ ಕಾಣೆಯಾಗಿದ್ದಾನೆ” ಕಥಾ ಸಂಕಲನವು ಒಟ್ಟು ಹತ್ತು ಕಥೆಗಳನ್ನು ಒಳಗೊಂಡಿದೆ. ಬಹು ಪಾಲು ಈ ಕಥೆಗಳಲ್ಲಿ ಅಪ್ಪನಂತಹ ಗಂಡಸು ಪ್ರಾಣಿಗಳು ಕಾಣೆಯಾಗಿಯೇ ಹೋಗಿದ್ದಾರೆ, ಅಪ್ಪ ಇಲ್ಲಿ ಪ್ರತಿಮೆ ಮಾತ್ರ ಆಗಿದ್ದಾನೆ ಎನ್ನುವುದು ನನ್ನ ಅಭಿಮತ. ಲೇಖಕರಾದ ಬೇಲೂರು ರಘುನಂದನ್ ಅವರ ಈ ಕಥಾ ಸಂಕಲನ ಓದಿದ ಬಳಿಕ ನನಗನಿಸಿದ್ದು... “ಕವಿಯೊಬ್ಬ ಸಾಮಾನ್ಯರಿಗಿಂತ ಭಿನ್ನವಾಗುವುದು ಹೇಗೆ? ಇದು ಮಿಲಿಯನ್ ಡಾಲರ್ ಪ್ರಶ್ನೆ.ಬಹುಶಃ ಕವಿ ತನ್ನ ಅನುಭವಗಳನ್ನು ಪದಗಳಲ್ಲಿ ಕಟ್ಟಿಕೊಡುವ ಪ್ರತಿಭೆ ಹೊಂದಿರುತ್ತಾನೆ.…