ಪುಸ್ತಕ ಪರಿಚಯ

ಲೇಖಕರು: Ashwin Rao K P
August 08, 2023
ಕೃಷ್ಣ ಕೌಲಗಿ ಅವರ ಬರಹಗಳ ಸಂಗ್ರಹ ‘ತುಂತುರು ಇದು ನೀರ ಹಾಡು'. ಸುಮಾರು ೧೭೦ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಜಯಶ್ರೀ ದೇಶಪಾಂಡೆ ಇವರು. ತಮ್ಮ ಮುನ್ನುಡಿಯಲ್ಲಿ ಲೇಖಕಿಯ ಕನಸುಗಳನ್ನು ಬೆಂಬಲಿಸುತ್ತಾ ಜಯಶ್ರೀ ಅವರು ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ... “ಇವುಗಳಲ್ಲಿ ವಿನೋದವಿದೆ, ವಿಷಾದವಿದೆ, ಖುಶಿಯಿದೆ, ಖಯಾಲಿಗಳಿವೆ, ಕಥೆಗಳಿವೆ, ಕನಸು, ನೀತಿ, ಬದುಕಿನ ಪಾಠಗಳೂ ಇಲ್ಲಿವೆ" ಎನ್ನುತ್ತಾರೆ 'ತುಂತುರು ಇದು ನೀರ ಹಾಡು' ಪುಸ್ತಕದ ಸೃಷ್ಟಿಕರ್ತೆ ಶ್ರೀಮತಿ ಕೃಷ್ಣಾ…
ಲೇಖಕರು: Ashwin Rao K P
August 05, 2023
ಕರ್ನಾಟಕದಲ್ಲಿ ಸಾವಿರಾರು ಬಗೆಯ ಜನಪದ ಆಟಗಳು ಇರಬಹುದು. ಕಾಲಕ್ರಮೇಣ ಹಲವು ಆಟಗಳು ಆಡುವವರಿಲ್ಲದೇ, ಅದನ್ನು ಮುಂದುವರೆಸಲು ಗೊತ್ತಿಲ್ಲದೆಯೇ ಇತಿಹಾಸದ ಪುಟಗಳನ್ನು ಸೇರಿಕೊಂಡಿರಬಹುದು. ಇಂತಹ ಹಲವಾರು ಆಟ ವೈವಿಧ್ಯವನ್ನು ಹುಡುಕಾಡಿ ಸಂಪಾದಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ ರೇಣುಕಾ ಕೋಡಗುಂಟಿ ಇವರು. ಕರ್ನಾಟಕದ ಜನಪದ ಆಟಗಳು ಪುಸ್ತಕಕ್ಕೆ ಅವರು ಬರೆದ ಸಂಪಾದಕರ ನುಡಿಯಲ್ಲಿ ವ್ಯಕ್ತವಾದ ಭಾವಗಳು ಅಕ್ಷರರೂಪದಲ್ಲಿ ಇಲ್ಲಿ ನೀಡಲಾಗಿದೆ... “ಕರ್ನಾಟಕದ ವೈವಿಧ್ಯತೆಯನ್ನು ಸಮಾಜದ ಎಲ್ಲ…
ಲೇಖಕರು: Ashwin Rao K P
August 03, 2023
ಡಾ. ಎಂ ಎಸ್ ಮಣಿ ಇವರು ಬರೆದ ‘ಗವಿ ಮಾರ್ಗ' ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿದ್ದಾರೆ. ‘ಕತ್ತಲ ಹಾದಿಯ ಪಯಣ' ಎಂದು ಮುಖಪುಟದಲ್ಲೇ ಮುದ್ರಿಸಿ ಕೃತಿಯನ್ನು ಓದುವಂತೆ ಕುತೂಹಲ ಮೂಡಿಸಿದ್ದಾರೆ. ಈ ಕೃತಿಗೆ ಭಾರತದ ಸುಪ್ರೀಂ ಪೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ನ್ಯಾ. ವಿ.ಗೋಪಾಲ ಗೌಡ ಇವರು ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ. ಕೃತಿಗೆ ಪತ್ರಕರ್ತರಾದ ಬನ್ಸಿ ಕಾಳಪ್ಪ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭಾಗ ಇಲ್ಲಿವೆ... “…
ಲೇಖಕರು: Ashwin Rao K P
August 01, 2023
“ಮಲ್ಲಿಗೆ ಹೂವಿನ ಸಖ" ಕಥಾ ಸಂಕಲನವನ್ನು ಬರೆದವರು ಕಥೆಗಾರರಾದ ಟಿ ಎಸ್ ಗೊರವರ ಇವರು. ೬೩ ಪುಟಗಳ ಈ ಪುಟ್ಟ ಕಥಾ ಸಂಕಲನಕ್ಕೆ ಮೊದಲ ಮಾತು, ಟಿಪ್ಪಣಿ ಬರೆದಿದ್ದಾರೆ ಮತ್ತೊರ್ವ ಕಥೆಗಾರ ಜಯರಾಮಾಚಾರಿ. ಇವರು ತಮ್ಮ ಟಿಪ್ಪಣಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ... “ಟಿ.ಎಸ್. ಗೊರವರ ಅವರ ಕತೆಗಳನ್ನ ಅಲ್ಲಲ್ಲಿ ಪೇಪರ್ ಮತ್ತು ಮ್ಯಾಗಜೀನುಗಲ್ಲಿ ಬಿಡಿಬಿಡಿಯಾಗಿ ಓದಿದ್ದೆ. ಒಟ್ಟಿಗೆ ಅವರ ಕತೆಗಳನ್ನು ಪುಸ್ತಕ ರೂಪದಲ್ಲಿ ಓದಿದ್ದು 'ಮಲ್ಲಿಗೆ ಹೂವಿನ ಸಖ' ಪುಸ್ತಕದಿಂದ, ತರಿಸಿಕೊಂಡು ಇನ್ನೂ…
ಲೇಖಕರು: Ashwin Rao K P
July 29, 2023
ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಬಗ್ಗೆ ನಿವೃತ್ತ ಡಿ ಜಿ ಪಿ ಡಾ. ಡಿ.ವಿ.ಗುರುಪ್ರಸಾದ್ ಅವರು ಬರೆದ ಪುಸ್ತಕವೇ “ಧರ್ಮಾತ್ಮ". ಸಜ್ಜನ ರಾಜಕಾರಣಿ ಎಂದು ಹೆಸರುವಾಸಿಯಾಗಿದ್ದ ಧರಂಸಿಂಗ್ ಸಮ್ಮಿಶ್ರ ಸರಕಾರದ ನೇತೃತ್ವವನ್ನು ವಹಿಸಿದ್ದರು. ಅಧಿಕ ಸಮಯ ಮುಖ್ಯಮಂತ್ರಿಯಾಗಿರಲು ಸಾಧ್ಯವಾಗದೇ ಹೋದರೂ ಹಲವಾರು ವರ್ಷ ಶಾಸಕರಾಗಿ, ಮಂತ್ರಿಯಾಗಿ, ಲೋಕಸಭಾ ಸದಸ್ಯರಾಗಿ ಕರ್ನಾಟಕ ರಾಜ್ಯಕ್ಕೆ ಸಲ್ಲಿಸಿದ ಸೇವೆ ಮರೆಯಲು ಸಾಧ್ಯವಿಲ್ಲ. ಧರಂಸಿಂಗ್ ಅವರ ಊರಿನವರೇ ಆದ ಸಾಹಿತಿ ದೇವು ಪತ್ತಾರ ಇವರು ಪುಸ್ತಕಕ್ಕೆ…
ಲೇಖಕರು: Ashwin Rao K P
July 27, 2023
ಯುವ ಕವಿ ರಾಜಾ ಎಂ ಬಿ ಇವರು ಮಕ್ಕಳಿಗಾಗಿ ಶಿಶು ಗೀತೆಗಳ ಸಂಕಲನ “ಕೋತಿ ಮತ್ತು ಗೋಧಿ ಹುಗ್ಗಿ" ಯನ್ನು ಹೊರತಂದಿದ್ದಾರೆ. ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಕವಿತೆಗಳನ್ನು ಬರೆಯುವುದು ಒಂದು ಸವಾಲಿನ ಕೆಲಸ. ಏಕೆಂದರೆ ಅವರಿಗೆ ಅರ್ಥವಾಗುವ ಪದಗಳನ್ನೇ ಬಳಸಿ ಕವಿತೆಯನ್ನು ಹೆಣೆಯುವುದು ಬಹಳ ಕಷ್ಟ. ಆದರೆ ರಾಜಾ ಎಂ ಬಿ ಇವರು ಬರೆದ ಕವಿತೆಗಳು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತಿದೆ. ಈ ಕವಿತಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ವಿಮರ್ಶಕ ಎಚ್ ಎಸ್ ಸತ್ಯನಾರಾಯಣ. ಇವರು ಮುನ್ನುಡಿಯಲ್ಲಿ…